ರೈತ ವಿರೋಧಿ ಕಾಂಗ್ರೆಸ್ ಸರ್ಕಾರ: ಮ್ಯಾಗೇರಿ
ಲೋಕದರ್ಶನ ವರದಿ
ಶಿಗ್ಗಾವಿ 19: ಇದುವರೆಗೆ ಮುಂದುವರೆದಿದ್ದರೈತ ಪರವಾದ ಅನೇಕ ಯೋಜನೆಗಳನ್ನು ಕೈಬಿಡುವ ಮೂಲಕ ರೈತರನ್ನು ವಿರೋಧಿಸಿ ಕಾಂಗ್ರೆಸ್ ಸಿದ್ದರಾಮಯ್ಯ ಸರಕಾರ ಆಡಳಿತ ಮಾಡುತ್ತಿದೆ ಇದೊಂದು ರೈತ ವಿರೋಧಿ ಸರಕಾರ ಎಂದು ಬಿಜೆಪಿ ತಾಲೂಕಾಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ವರದಿಗಾರರೊಂದಿಗೆ ಮಾತನಾಡಿದ ಇವರುಅನ್ನ ಬೆಳೆಯುವ ರೈತನ ಯೋಜನೆಗಳಿಗೆ ಕನ್ನ ಹಾಕಿದರೆ ನಿಮ್ಮಉಚಿತಅನ್ನ ಭಾಗ್ಯಯೋಜನೆ ನಿಲ್ಲುವುದು ಖಚಿತ ಎಂದರು. ಕಿಸಾನ್ ಸನ್ಮಾನ ನಿಧಿಯಿಂದ ರಾಜ್ಯದ ರೈತರಿಗೆ ಕೊಡುತ್ತಿರುವ ನಾಲ್ಕು ಸಾವಿರ ರೂಗಳ ಪ್ರೋತ್ಸಾಹಧನವನ್ನು ಕಾಂಗ್ರೆಸ್ ಸರಕಾರ ನಿಲ್ಲಿಸಿದೆ. ರೈತಶಕ್ತಿ ಯೋಜನೆಯಿಂದ ರೈತರಿಗೆ ಕೊಡುತ್ತಿದ್ದ ಪ್ರೋತ್ಸಾಹಧನ ಸ್ಥಗಿತಗೊಳಿಸಿದೆ. ರೈತ ಪರವಾದ ಎಪಿಎಂಸಿ ಕಾಯ್ದೆಯನ್ನು ಹಿಂಪಡೆದಿದ್ದು ಖಂಡನೀಯ. ನೀರಾವರಿ ಯೋಜನೆಯ ಅನುದಾನಕಡಿತ ಮಾಡಿದೆ ರೈತರಿಗೆ ಬಿತ್ತನೆ ಬೀಜಕ್ಕಾಗಿ ಭೂಸಿರಿ ಯೋಜನೆಯಲ್ಲಿ ಹತ್ತು ಸಾವಿರ ರೂಗಳನ್ನು ಕೈ ಬಿಡಲಾಗಿದೆ.
ರೈತರ ಮಕ್ಕಳಿಗೆ ನೀಡುತ್ತಿರುವ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆಯನ್ನು ಸ್ಥಗಿತಗೊಳಿಸಿದೆ. ಒಟ್ಟಾರೆ ಕಾಂಗ್ರೆಸ್ ಸರಕಾರರೈತರ ಹೊಟ್ಟೆಗೆ ಬರೇ ಎಳಿದಿದೆ, ಮಳೆಯ ಮೇಲೆ ಅವಲಂಬಿತನಾದ ರೈತ ಸಾಲ ಮಾಡಿ ಬೀಜಗೊಬ್ಬರ ತಂದು ಬಿತ್ತಿದ ಬೀಜ ಮಳೆ ಇಲ್ಲದೆ ಮಣ್ಣಲ್ಲಿಕಮರಿ ಹೋಗಿವೆ ಅರ್ಧ ಹಸಿಯಲ್ಲಿ ಹುಟ್ಟಿದ ನಾಟಿಗೆ ಬಿಸಿಲಿಗೆ ಬತ್ತಿ ಒಣಗಿದೆ ಒಂದು ಕಡೆ ಸಾಲದ ಬಾಧೆ ಇನ್ನೊಂದು ಕಡೆ ಇದ್ದ ರೈತ ಪರಯೋಜನೆ ಸ್ಥಗಿತಗೊಳಿಸಿದ್ದು ಮತ್ತೊಂದು ಕಡೆರೈತರ ಪರವಾಗಿ ಈ ಸರಕಾರಯಾವ ಸಹಾಯ ಸಹಕಾರದ ಯೋಜನೆ ಮಾಡಲಾರದು ಒಟ್ಟಾರೆ ರೈತರನ್ನು ಹತ್ತಿಕ್ಕುವ ಕೆಲಸವನ್ನು ಈ ಸರಕಾರ ಮಾಡುತ್ತಿದೆ ರಾಜ್ಯದ ಸಮೀಕ್ಷೆ ಮಾಡಿ ಸಾಲದಲ್ಲಿ ಸಿಲುಕಿರುವ ರೈತರ ಸಹಾಯಕ್ಕೆ ಮುಂದಾಗಬೇಕು ರೈತರ ಪರವಾಗಿ ಇದ್ದ ಯೋಜನೆಗಳನ್ನು ಜಾರಿಗೊಳಿಸಬೇಕು ನಮ್ಮ ಕ್ಷೇತ್ರವನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು