ಪೌರಕಾರ್ಮಿಕರ ಇನ್ನೊಂದು ಹೆಸರೇ ಆರೋಗ್ಯ ರಕ್ಷಕ : ಬೆಂತೂರ
ಶಿಗಾವಿ 24: ಪೌರಕಾರ್ಮಿಕರ ಇನ್ನೋಂದು ಹೆಸರೇ ಆರೋಗ್ಯ ರಕ್ಷಕರಾಗಿದ್ದು ಇವರು ಸಾಂಕ್ರಾಮಿಕ ರೋಗ ಬರದಂತೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ಇವರದಾಗಿದೆ ಎಂದು ತಾಲೂಕಾ ಶಿಕ್ಷಣ ಇಲಾಖೆಯ ಬಿಐಇಆರ್ಟಿ ನಾಗಪ್ಪ ಬೆಂತೂರ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡ ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಉಪನ್ಯಾಸ ನೀಡಿ ಮಾತನಾಡಿದ ಅವರು, ಪೌರಕಾರ್ಮಿಕರು ತಮ್ಮ ಆರೋಗ್ಯಕ್ಕೆ ಹಚ್ಚು ಒತ್ತು ನೀಡಬೇಕು, ಆಧುನಿಕ ಸುರಕ್ಷತಾ ಕವಚಗಳನ್ನ ಬಳಸಬೇಕು, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕಿದ್ದು ಸಾರ್ವಜನಿಕರ ಸಹಕಾರವೂ ಅವಶ್ಯವಾಗಿದೆ, ಸಾರ್ವಜನಿಕರೂ ಸಹಿತ ಕಸ ಉತ್ಪಾದನೆಯಲ್ಲಿ ಸಹಕಾರ ನೀಡಬೇಕು, ಸೇವಾಭದ್ರತೆಗೆ ಹೆಚ್ಚು ಸಹಕಾರವನ್ನ ಸರಕಾರ ನೀಡಬೇಕು, ಪೌರಕಾರ್ಮಿಕರನ್ನ ಗೌರವಿಸುವ ಮನೋಭಾವನೆಗೆ ಸ್ವಾಗತಾರ್ಹ ಎಂದ ಅವರು, ಪೌರಕಾರ್ಮಿಕರಿಗೆ ಮುಖ್ಯಾಧಿಕಾರಿಗಳು ಕುಕ್ಕರ್ ನೀಡಿ ಸನ್ಮಾನಿಸಿರುವುದು ಇನ್ನೂ ಉತ್ತಮ ಬೆಳವಣಿಗೆಯಾಗಿದೆ ಎಂದರು.
ಉಪನ್ಯಾಸಕ ಅಸ್ತಾ ಪೌಂಡೇಷನ್ನ ಪ್ರೋ. ಪ್ರೀತಂ ಬಾಯರ್ ಉಪನ್ಯಾಸ ನೀಡಿದರು, ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಪೌರಕಾರ್ಮಿಕರನ್ನ ಪುರಸಭೆ ವತಿಯಿಂದ ವಿಶೇಷ ಕಾಣಿಕೆಯಾದ ಕುಕ್ಕರ್ಗಳು, ಜೆರ್ಕಿನ್ಗಳು ಮತ್ತು ಸಮವಸ್ತ್ರಗಳನ್ನು ನೀಡಿ ಸನ್ಮಾನಿಸಿಲಾಯಿತು.
ಕಾರ್ಯಕ್ರಮದ ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಜಿಗಳು ದಿವ್ಯ ಸಾನಿದ್ಯವನ್ನ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಸಮುದಾಯ ಸಂಘಟಕ ಅಧಿಕಾರಿ ಶೈಲಜಾ ಪಾಟೀಲ, ಹಿರಿಯ ಆರೋಗ್ಯ ನೀರೀಕ್ಷಕ ಆಂಜಿನಪ್ಪ ಟಿ, ವಿ ಎಸ್ ಪಾಟೀಲ, ಸತೀಶ ತಳವಾರ, ರಾಜೇಶ ಕಹಾರ, ಶಿಕ್ಷಕ ಎಚ್ ಎಚ್ ರಟ್ಟಿಹಳ್ಳಿ ಸೇರಿದಂತೆ ಪುರಸಭೆ ಸದಸ್ಯರು, ಸಿಬ್ಬಂದಿಗಳು, ಪೌರಕಾರ್ಮಿಕರು, ಪೌರಕಾರ್ಮಿಕರ ಕುಟುಂಬವರ್ಗದವರು ವಿವಿಧ ಮುಖಂಡರು ಇದ್ದರು.