ರಾಣೆಬೆನ್ನೂರ

ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಕಲ್ಯಾಣೋತ್ಸವ.

ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಕಲ್ಯಾಣೋತ್ಸವ.


ರಾಣೇಬೆನ್ನೂರು15: ವಾಗೀಶ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ಕಲ್ಯಾಣೋತ್ಸವವು ಅತ್ಯಂತ ಸರಳವಾಗಿ ಧಾರ್ಮಿಕ ವಿಧಿವಿಧಾನಗಳೂಂದಿಗೆ ನಡೆಯಿತು. ಇದೆ ಸಂಧರ್ಭದಲ್ಲಿ   ತಿರುಪತಿ ತಿರುಮಲೆ ದೇವಸ್ಥಾನದ ದಾಸ ಸಾಹಿತ್ಯ ಯೋಜನೆಯಿಂದ ಅಧಿಕೃತವಾಗಿ ಮಾನ್ಯತೆ ಪಡೆದ, ರಾಣೇಬೆನ್ನೂರು ನಗರದ ನೂತನ  “ಶ್ರೀವಾರಿ ಭಜನಾ” ಮಂಡಳಿಯ ಉದ್ಘಾಟನೆಯು ಸಹ ನೆರೇವೆರಿಸಲಾಯಿತು. ಭಜನಾ ಸಂಗೀತ  ಪ್ರದರ್ಶಿಸುವ ಮೂಲಕ ಚಾಲನೆ ನೀಡಿದ ಹಿರಿಯ ಸಂಗೀತ ಕಲಾವಿದ  ಶ್ರೀಪಾದ ಕುಲಕರ್ಣಿ ಅವರು ಸಮಾಜದಲ್ಲಿ ಭಾವನಾತ್ಮಕ ಸಂಭಂದಗಳು ಬೆಸೆಯಬೇಕಾದರೆ ಭಕ್ತಿ ರಸ ಪ್ರದಾನ ಸಂಗೀತ ಮಂಡಳಿಗಳ ಅವಶ್ಯಕತೆ ಇಂದು ಅಗತ್ಯವಿದೆ. ಇಂದಿನ  ಆಧುನಿಕ ಪಾಶ್ಚಿಮಾತ್ಯ ಸಂಗೀತ ವಿಜ್ರಂಬಿತ ವ್ಯವಸ್ಥೆಯಲ್ಲಿ ನಮ್ಮ ಇತಿಹಾಸ ಪರಂಪರೆಯ ಸಂಗೀತ ಸಾಹಿತ್ಯ ಮತ್ತು ದಾಸವಾಣಿ, ದಾಸ ಸಾಹಿತ್ಯ, ಭಕ್ತಿ ಸಂಗೀತ ನೇಪತ್ಯಕ್ಕೆ ಸರಿಯುತ್ತಿರುವ ಇಂತಹ ಸಂದಿಗ್ದ ಕಾಲದಲ್ಲಿ ನೈಜತೆ ಮತ್ತು ಅರ್ಥವನ್ನು ಮನಮುಟ್ಟುವಲ್ಲಿ ಸಂಸ್ಕ್ರುತಿ ಸಂಸ್ಕಾರವನ್ನು  ಕಲಿಸುವ ಭಾವ ಮತ್ತು ಭಕ್ತಿ  ಸಂಗೀತದ ಅವಶ್ಯಕತೆ ಇದೆ ಎಂದರು.  

ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಕಲಾವಿದೆ ಸುಗಮ, ಸಂಗೀತ ಗಾಯಕಿ ರಜನಿ ಕರಿಗಾರ ಅವರು ವಾಣಿಜ್ಯ ನಗರದಲ್ಲಿ ನೂತನವಾಗಿ ಶ್ರೀವಾರಿ ಭಜನಾ ಮಂಡಳಿಯು ಅರಂಬಿಸಲಾಗಿದ್ದು ಮಹಿಳಾ ಸಂಗೀತ ಕಲಾವಿದರು ತಮ್ಮಲ್ಲಿರುವ ಆಂತರಿಕ ಕಲಾ ಪ್ರತಿಭೆಯನ್ನು ಮೇರೆಯಲು ವೇದಿಕೆಯನ್ನು ಕಲ್ಪಿಸಲಾಗಿದೆ. ಶ್ರೀವಾರಿ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಸಾರದ ಯೂಜನೆ  ಅಡಿಯಲ್ಲಿ ಅಧಿಕೃತವಾಗಿ ಮಾನ್ಯತೆ ಹೂಂದಿದೆ. ನಗರವು ಸೇರಿದಂತೆ ಜಿಲ್ಲೆಯ ಮತ್ತು ನಾಡಿನಾದ್ಯಂತ ತನ್ನ ಸಂಗೀತ ಸೇವೆ ನೀಡಲಿದೆ. ಶ್ರೀವಾರಿ ತಂಡಕ್ಕೆ ಹರಸಿ, ಹಾರೈಸಿ ಅಶಿರ್ವದಿಸಿ ಪ್ರೋತ್ಸಾಹಿಸಲು ಮುಂದಾಗಬೇಕೆಂದು ಮನವಿ ಮಾಡಿದರು. ನೂತನ ತಂಡವು ಕು.ರಜನಿ ಕರಿಗಾರ ನೇತ್ರತ್ವದಲ್ಲಿ  ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಪ್ರಧಮ  ಭಜನಾ, ದಾಸವಾಣಿ ಮತ್ತು ಮಕ್ಕಳ ಜನಪದ ಸಂಸ್ಕ್ರುತಿ ಬಿಂಬಿತ  ಕೋಲಾಟ ಸಾರ್ವಜನಿಕರ ಭಕ್ತರ ಗಮನ ಸೆಳೆಯವಲ್ಲಿ ಯಶಕಂಡಿತು. ಉತ್ಸವ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಮುಖಂಡರಾದ ಅಧ್ಯಕ್ಷ ನಾಗರಾಜ ಬಿ. ರಾಯಚೂರ, ಕಾರ್ಯದರ್ಶಿ ವೇಂಕಟೇಶ ಬಸ್ತಿಪಾಡ, ಖಜಾಂಚಿ, ಚಂದ್ರು ರಾಯಚೂರ, ಜಿಲ್ಲಾಧ್ಯಕ್ಷ ನಾಗರಾಜ ಗೌಡ್ರ, ಸದಸ್ಯ ಶ್ರೀನಿವಾಸ ರಾಯಚೂರ, ಗುರುರಾಜ ರಾಯಚೂರ, ಮಲ್ಲೇಶ ಮಂಗಲಿ, ಶ್ರೀಕಾಂತ ರಾಯಚೂರ, ಪವನ ಅರೇಪಲ್ಲಿ, ಸೇರಿದಂತೆ ಮತ್ತಿತರ ಗಣ್ಯರು ಸಮಿತಿಯ ಸದಸ್ಯರು ಸಮಾಜದ ಗಣ್ಯರು ಭಕ್ತರು ಪಾಲ್ಗೂಂಡಿದ್ದರು. 


ಸುದ್ದಿ ಓದಿ