ರಾಷ್ಟ್ರೀಯ

ಅಣ್ಣಾದೊರೈ 112ನೇ ಜನ್ಮದಿನ : ಶ್ರದ್ಧಾಂಜಲಿ

ಅಣ್ಣಾದೊರೈ 112ನೇ ಜನ್ಮದಿನ : ಶ್ರದ್ಧಾಂಜಲಿ

ಚೆನ್ನೈ, ಸೆಪ್ಟೆಂಬರ್ 15: ದ್ರಾವಿಡ ಮುನ್ನೇಟ್ರ ಕಳಗಮ್ (ಡಿಎಂಕೆ) ಪಕ್ಷದ ಪರಮೋಚ್ಚ ನಾಯಕ, ದಿವಂಗತ ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ಅವರ 112ನೇ ಜನ್ಮದಿನದಂದು ಶ್ರದ್ಧಾಪೂರ್ವಕ ಗೌರವ ಸಲ್ಲಿಸಲಾಗಿದೆ.

‘ಅಣ್ಣಾ’ ಎಂದೇ ಜನಪ್ರಿಯರಾಗಿದ್ದ ಅಣ್ಣಾದೊರೈ, ಅವರ ಪ್ರತಿಮೆಗೆ ಹಾಗೂ ಅಲಂಕೃತ ಭಾವಚಿತ್ರಕ್ಕೆ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಮತ್ತು ಮಂತ್ರಿಗಳು ಮಾಲಾರ್ಪಣೆ ಮಾಡಿದರು.

ಎಐಎಡಿಎಂಕೆ ಸಂಸದರು ಸಹ ನವದೆಹಲಿಯ ಸಂಸತ್ತು ಸಂಕೀರ್ಣದಲ್ಲಿ ಅಣ್ಣಾದೊರೈ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಈ ಸಂದರ್ಭವನ್ನು ಆಚರಿಸಿದರು.

ಡಿಎಂಕೆ ಅಧ್ಯಕ್ಷ ಮತ್ತು ಪ್ರತಿಪಕ್ಷದ ನಾಯಕ ಎಂ ಕೆ ಸ್ಟಾಲಿನ್, ಪಕ್ಷದ ಹಿರಿಯ ಮುಖಂಡರೊಂದಿಗೆ ವಲ್ಲುವರ್ ಕೊಟ್ಟಂನಲ್ಲಿ ಅಣ್ಣಾ ಪ್ರತಿಮೆಗೆ ಹೂಮಾಲೆ ಹಾಕಿ ಶ್ರದ್ಧಾನಮನ ಸಲ್ಲಿಸಿದರು. ರಾಜ್ಯದ ಇತರೆಡೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರೂ ಸಹ ದಿವಂಗತ ದ್ರಾವಿಡ ನಾಯಕನಿಗೆ ಸಮೃದ್ಧ ಗೌರವ ಸಲ್ಲಿಸಿದ್ದಾರೆ .

ಸುದ್ದಿ ಓದಿ