ಸಿರುಗುಪ್ಪ

ಮದೀನಾ ಗ್ರೂಫ್ಗೆ ಅಂಜುಮನ್ ಖಿದ್ಮತೇ ಇಸ್ಲಾಂ ಕಮಿಟಿ ಅಧಿಕಾರದ ಚುಕ್ಕಾಣಿ

ಮದೀನಾ ಗ್ರೂಫ್ಗೆ ಅಂಜುಮನ್ ಖಿದ್ಮತೇ ಇಸ್ಲಾಂ ಕಮಿಟಿ ಅಧಿಕಾರದ ಚುಕ್ಕಾಣಿ

ಸಿರುಗುಪ್ಪ 13: ವಿಜಯನಗರ ಜಿಲ್ಲೆ ಹೊಸಪೇಟೆ ಅಂಜುಮನ್ ಖಿದ್ಮತೇ ಇಸ್ಲಾಂ ಕಮಿಟಿಗೆ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಚ್ಎನ್ಎಫ್ ಇಮಾಮ್ ನಿಯಾಜಿ ನೇತೃತ್ವದ ಮದೀನಾ ಗ್ರೂಫ್ 8 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕರ್ನಾಟಕ ವಕ್ಫ್ ಮಂಡಳಿ ಬೈಲಾ ಪ್ರಕಾರ 11 ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಿದೆ. ಮುಸ್ಲಿಂ ಸಮಾಜದ ಅಭಿವೃದ್ಧಿಗೆ ಈ ಕಮಿಟಿ ಶ್ರಮಿಸುತ್ತಿದೆ.

 ಹೆಚ್ ಎಂ ಎಫ್ ಇಮಾಮ್ ನಿಯಾಜಿ ಕೋತ್ವಾಲ್ ಮೊಹಮ್ಮದ್ ಮೊಹಿಸಿನ್, ಮೊಹಮ್ಮದ್ ಹುಸೇನ್ ದರ್ವೆಶ್ , ಅಬ್ದುಲ್ ಕದೀರ್ ಬಿ ಅನ್ವರ್ ಭಾಷಾ, ಮೊಹಮ್ಮದ್ ಅಬೂಬಕರ್, ಎಂ ಡಿ ದರ್ವೆಶ್ ಮೋಹಿಯದ್ದೀನ್ ಜಿ , ಸೈಯದ್ ಅಬ್ದುಲ್ ಖಾದರ್ ರಫಾಯಿ, ಎಂಬಿ ಮನ್ಸೂರ್ ಹುಸೇನ್, ಎಂ ಫಿರೋಜ್ ಖಾನ್, ಎಲ್ ಗುಲಾಮ್ ರಸುಲ್, ಈ 11 ಜನರು ಆಯ್ಕೆಯಾಗಿದ್ದಾರೆ.

 ಯಶಸ್ಸಿಗೆ ದೊರೆತಿರುವ ಗೌರವಕ್ಕೆ ಕರ್ನಾಟಕ ವಕ್ಫ್ ಬೋರ್ಡ್  ಬಳ್ಳಾರಿ ಜಿಲ್ಲಾ ಮಾಜಿ ಸದಸ್ಯ ಸಮಾಜ ಸುಧಾರಕ ಅಲ್ಹಾಜ್ ಅಬ್ದುಲ್ ನಬಿ ಚಿಸ್ತಿ ನಿಜಾಮಿ, ಜಮೀನ್ದಾರ್ ಸಮಾಜದ ಮುಖಂಡರು ಜಿಲ್ಲಾ ಮಾಜಿ ವಕ್ಫ ಬೋರ್ಡ್  ಮಾಜಿ ಉಪಾಧ್ಯಕ್ಷ ರಾದ ಹಾಜಿ ಸೈಯದ್ ಶಾ ಮೋಹಿಯುದ್ದೀನ್ ಖಾದ್ರಿ ಸಾಹೇಬ್, ಸೌದಾಗರ್ ಜುಮ್ಮಾ ಸುನ್ನಿ ಮಸೀದಿಯ ಮಾಜಿ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಭಾಷಾ, ಈದ್ಗಾ ಮತ್ತು ಖಬರ್ ಸ್ಥಾನ್ ಕಮಿಟಿ ಅಧ್ಯಕ್ಷ ಹಂಡಿ ಹಾಶಿಮ್, ಸಾಮಾಜಿಕ ಕಾರ್ಯಕರ್ತ ಹಾಜಿ ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ರಫಿ, ಮಹಮ್ಮದ್ ನೌಶಾದ್ ಅಲಿ, ಹಾಜಿ ಅಬ್ದುಲ್ ಹಮೀದ್ ಫಾರೂಕಿ, ಹಾಜಿ ಖಾಲಿ ಚೀಲಾ ಹುಸೇನ್ ಸಾಬ್, ಡಬಲ್ ಬಾಂಡ್ ಹಾಜಿ ಟಿಜಿ ಅಬ್ದುಲ್ ಗನಿ, ಖತಿಬ್ ಖತೀರುದ್ದೀನ್ ಬಾಬು, ಡಾ ಮೊಹಮ್ಮದ್ ಅಲಿ, ಹಂಡಿ ಹುಸೇನ್ ಸಾಬ್ ಅವರು ಅಭಿನಂದಿಸಿದ್ದಾರೆ.

ಸುದ್ದಿ ಓದಿ