ದ್ವೇಷದಿಂದ ಇಡೀ ಸಮುದಾಯಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆ
ನಿಡಸೋಸಿ ಶಿವಲಿಂಗೇಶ್ವರ ಸ್ವಾಮೀಜಿ ಅಭಿಮತ: ನಿಡಸೋಸಿಯ ನಿರ್ಮಿಸಿದ ಮಸೀದಿ ಉದ್ಘಾಟನೆ
ಸಂಕೇಶ್ವರ 22: ಭಾರತ ವಿವಿಧತೆಯಲ್ಲಿ ಏಕತೆ ಕಂಡ ಮಹಾನ್ ರಾಷ್ಟ್ರವಾಗಿದ್ದು, ಮಂದಿರ ಮಸೀದಿಗಳಲ್ಲಿ ನಿತ್ಯ ನಡೆಯುವ ಪ್ರಾರ್ಥನೆಗಳು ಭವಿಷ್ಯದ ಬದುಕಿಗೆ ಪ್ರೇರಣೆಯಾಗಬೇಕು ಎಂದು ನಿಡಸೋಸಿ ಶಿವಲಿಂಗೇಶ್ವರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಸಮೀಪದ ನಿಡಸೋಸಿಯ ಸುನ್ನತ ಜಮಾತ ಸಮುದಾಯ ಅಂದಾಜು 35 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಮಸೀದಿ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹಿಂದೂ-ಮುಸ್ಲಿಂ ಸೇರಿದ ಎಲ್ಲ ಯುವಕರಲ್ಲಿ ಧಾಮರ್ಿಕ ಚಿಂತನೆಗಳು, ಆಸಕ್ತಿ ಕ್ರಮೇಣವಾಗಿ ಕಡಿಮೆಯಾಗುತ್ತಿದ್ದು,ಧಾರ್ಮಿಕ ಭಾವನೆಗಳು ದಾನ-ಧರ್ಮದ ಕಾರ್ಯಗಳನ್ನು ಉತ್ತೇಜಿಸುವ ಮೂಲಕ ಮಾನಸಿಕ ನೆಮ್ಮದಿ ನೀಡುತ್ತವೆ ಹೀಗಾಗಿ ಮುಸ್ಲಿಂ ಯುವಕರು ನಿತ್ಯ ನಮಾಜ್ ಮಾಡುವ ಮೂಲಕ ಅಲ್ಲಾಹನನ್ನು ಆರಾಧಿಸಬೇಕೆಂದರು.
ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಒರ್ವ ವ್ಯಕ್ತಿ-ಕುಟುಂಬಗಳ ನಡುವಿನ ದ್ವೇಷ ಇಡೀ ಸಮುದಾಯಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆ ತರುತ್ತಲಿದ್ದು, ಹೀಗಾಗಿ ನಿತ್ಯಜಾತಿ-ಭಾಷೆಗಳ ನಡುವೆ ಗಲಾಟೆ, ಕೊಲೆಯಂತಹ ಹೀನ ಕೃತ್ಯಗಳು ಜರುಗಿ ಸಮಾಜದಲ್ಲಿ ಅಶಾಂತಿ ನಿಮರ್ಿಸುತ್ತಲಿವೆ. ಇಂತಹ ಕೃತ್ಯಗಳಿಂದ ಅನೇಕ ಕುಟುಂಬಗಳು ತಮ್ಮ ಮಕ್ಕಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದ್ದು, ಹಿಂದೂ-ಮುಸ್ಲಿಂ ಸಮುದಾಯ ಭಾವೈಕ್ಯತೆಯತ್ತ ಗಮನ ಹರಿಸಿ ಮತೀಯ ಗಲಭೆೆಗಳಿಗೆ ಅವಕಾಶ ನೀಡದೇ ಸಹೋದರತೆಯ ಬದುಕು ನಿರ್ಮಿಸಿಕೊಳ್ಳಬೇಕೆಂದರು.
ಮುಸ್ಲಿಂ ಸಮುದಾಯ ಮುಖಂಡ ದಸ್ತಗೀರ ತೇರಣಿ ಮಾತನಾಡಿ, ನಿಡಸೋಸಿ ಮಠದ ಪೀಠ ಪರಂಪರೆಯ ಮೇಲೆ ಈ ಭಾಗದ ಮುಸ್ಲಿಂ ಸಮುದಾಯ ವಿಶೇಷವಾದ ಭಕ್ತಿ ಹೊಂದಿದ್ದು, ಮುಸ್ಲಿಂ ಸಮುದಾಯ ಎಲ್ಲ ಕಾರ್ಯಗಳಿಗೆ ಶಿವಲಿಂಗೇಶ್ವರ ಸ್ವಾಮೀಜಿ ಮಾರ್ಗದರ್ಶನ ನೀಡಿ ಸಮಾಜದಲ್ಲಿ ಸಹೋದರತ್ವದ ಸಹಬಾಳ್ವೆ ನಡೆಸಲು ಪ್ರೇರಣೆಯಾಗಿದ್ದಾರೆ. ಖುರಾನ್ ಹೇಳುವಂತೆ ಯಾರೂ ನಮಗೆ ಒಳ್ಳೆಯ ದಾರಿತೋರುತ್ತಾರೆ ಅವರೇ ಗುರುವಾಗುತ್ತಾರೆ ಹೀಗಾಗಿ ಶ್ರೀಗಳು ನಮ್ಮ ಗುರುವಾಗಿದ್ದಾರೆ ಎಂದರು.
ಮಸೀದಿ ನಿರ್ಮಾಣ ಕಾರ್ಯಕ್ಕೆ ಶ್ರೀಮಠದಿಂದ ಆರ್ಥಿಕ ನೆರವು ನೀಡಿದ ಶಿವಲಿಂಗೇಶ್ವರ ಸ್ವಾಮೀಜಿ ಅವರನ್ನು ಸುನ್ನತ ಜಮಾತ ಕಮೀಟಿ ಪರವಾಗಿ ಸತ್ಕರಿಸಲಾಯಿತು. ದಸ್ತಗೀರ ತೇರಣಿ, ಇಲಾಯಿ ಬಾಗವಾನ, ಮಲಿಕ್ ಜಮಾದಾರ, ಹಸನ ಮಕಾನದಾರ, ಪೀರಸಾಬ ಮುಲ್ತಾನಿ, ಶಾನೂಲ್ ಮಕಾನದಾರ, ಸಿಕಂದರ ನದಾಫ, ಮಜೀದ್ ಜಮಾದಾರ, ಕಾಶಿಂ ಅತ್ತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು