ರಾಣೆಬೆನ್ನೂರ

ಮನುಷ್ಯರಂತೆ ಪ್ರಾಣಿಗಳು ಆರೋಗ್ಯವಾಗಿರಬೇಕು: ಪೂಜಾರ

ಮನುಷ್ಯರಂತೆ ಪ್ರಾಣಿಗಳು ಆರೋಗ್ಯವಾಗಿರಬೇಕು: ಪೂಜಾರ

ರಾಣೇಬೆನ್ನೂರು 30: ಪ್ರಾಣಿಗಳು ಸಹ ಇತರರಂತೆ ಆರೋಗ್ಯದಿಂದ ಇರಬೇಕು ಮನುಷ್ಯರ ಜೊತೆಗೆ ಅತ್ಯಂತ ವಿಶ್ವಾಸ ಹೊಂದಿದ್ದು ಅವುಗಳಿಗೆ ಹೇಳಲು ಬಾಯಿ ಇಲ್ಲ ಅಷ್ಟೆ ಪಶು ಪಾಲನಾ ಇಲಾಖೆ ಎಲ್ಲ ರೀತಿಯ ಜಾನುವಾರುಗಳ ರಕ್ಷಣೆಗೆ ಸದಾ ಸಿದ್ಧವಿದೆ ಪ್ರಾಣಿಗಳ ಬಗ್ಗೆ ನಿರ್ಲಕ್ಷ್ಯ ತೋರದೆ ಮೇಲಿಂದ ಮೇಲೆ ಅವುಗಳಿಗೆ ಓಷಧಿಯನ್ನು ಪಡೆದು ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

ಅವರು ಮಂಗಳವಾರ ನಗರದ ಪಶು ಆಸ್ಪತ್ರೆ ಆವರಣದಲ್ಲಿ  ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ವಿಶ್ವ ರೇಬಿಸ್ ದಿನಾಚರಣೆ ನಿಮಿತ್ತ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಪ್ರಾಣಿ ದಯಾ ಸಂಘ, ನಗರಸಭೆ, ರೋಟರಿ ಸಂಸ್ಥೆ ಸಹಯೋಗದಲ್ಲಿ ನಡೆದ ಉಚಿತ ಲಸಿಕಾ ವಿತರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪ್ರಾಣಿಗಳಿಂದ ಮಾನವ ಸಮುದಾಯಕ್ಕೆ ಯಾವುದೆ ರೀತಿಯ ಮಾರಣಾಂತಿಕ ಕಾಯಿಲೆಗಳು ಹರಡಬಾರದೆಂದರೆ ಕಾಲ ಕಾಲಕ್ಕೆ ಪ್ರಾಣಿಗಳನ್ನು ಆರೋಗ್ಯ ತಪಾಸಣೆಗೂಳಪಡಿಸಬೇಕು ಇದರಿಂದ ಮಾರಣಾಂತಿಕ ಕಾಯಿಲೆಗಳು ಹರಡುವುದಿಲ್ಲ ರೇಬೀಸ್ ನೀರ್ಮುಲನೆಗೆ ಲಸಿಕೆ ಹಾಕಿಸುವುದು ಬಹು ಮುಖ್ಯವಾಗಿದೆ ಎಂದ ಅವರು ನಾಯಿಗಳಿಗೆ ತಪ್ಪದೆ ರೇಬೀಸ್ ಲಸಿಕೆ ಹಾಕಿಸಿಕೂಳ್ಳಲು ಮುಂದಾಗಬೇಕು ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಪರಮೇಶ ಎನ್‌.ಹುಬ್ಬಳ್ಳಿ ಅವರು ಮಾತನಾಡಿ ರೇಬೀಸ್ ಕಾಯಿಲೆಗೆ ಲಸಿಕೆ ಇದ್ದರೂ ಸಹ ಇದರ ಬಗ್ಗೆ ಪ್ರಾಣಿಗಳ ಪಾಲಕರು ನಿರ್ಲಕ್ಷ ವಹಿಸುತ್ತಿದ್ದಾರೆ ಇದರ ಪರಿಣಾಮ ರೋಗದಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಲಿದೆ. ಜನ ಜಾಗೃತಿಗಾಗಿ ಸೆ. 28ರಂದು ವಿಶ್ವ ರೇಬೀಸ್ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. 

ರೋಟರಿ ಅಧ್ಯಕ್ಷ ಡಾ. ಎಲ್‌.ಕೆ. ಚಳಗೇರಿ, ನಗರಸಭಾ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಮ್ಮ ಚಿಕ್ಕಬಿದರಿ, ಇನ್ನರ್‌ವಿಲ್ ಅಧ್ಯಕ್ಷ ಡಾ. ಸುಗಣಾ ಚಳಗೇರಿ, ಕುರಿಗಾರರ ಸಂಘದ ಅಧ್ಯಕ್ಷ ನಿಲಪ್ಪ ದೇವರಗುಡ್ಡ, ಮುಖ್ಯ ವೈದ್ಯಾದಿಕಾರಿ ಡಾ. ನಿಲಕಂಟ ಅಂಗಡಿ, ಡಾ. ಸಿ.ಯು. ಗೋಣೆಪ್ಪನವರ, ವಿರೇಶ ಟಿ.ಎಸ್, ಜಿ.ಜಿ. ಹೂಟ್ಟಿಗೌಡ್ರ, ವಾಸುದೇವ ಗುಪ್ತಾ, ಸುಧೀರ್ ಕುರುವತ್ತಿ, ಪ್ರಕಾಶ ಮಾಳಗಿ, ಸುಭಾಶ ಭೂತೆ, ವೀರೇಶ ಹನಗೋಡಿಮಠ, ಸೇರಿದಂತೆ ಮತ್ತಿತರ ಗಣ್ಯರು ಇಲಾಖಾ ಸಿಬ್ಬಂದಿ ಉಪಸ್ಥಿತರಿದ್ದರು. ಅರಿವು ಶಿಬಿರದಲ್ಲಿ ನೂರಾರು ಸ್ವಾನಗಳಿಗೆ ಉಚಿತ ರೇಬೀಸ್ ಲಸಿಕೆಯನ್ನು ವಿತರಿಸಲಾಯಿತು. 


ಸುದ್ದಿ ಓದಿ