ಅಂದ ವಿಕಲಚೇತನ ಗಂಗವ್ವ ನೀಲಪ್ಪ ಹರಿಜನಗೆ ಸನ್ಮಾನ
ಶಿಗ್ಗಾವಿ 08: ತಾಲೂಕಿನ ಶಿಸುವಿನಾಳ ಗ್ರಾಮದ ಅಂದ ವಿಕಲಚೇತನ ಗಂಗವ್ವ ನೀಲಪ್ಪ ಹರಿಜನ ಭಾರತ ದೇಶದ ಅಂದ ವಿಕಲಚೇತನರ ಕ್ರಿಕೇಟ ತಂಡಕ್ಕೆ ಆಯ್ಕೆಯಾಗಿ ಇಂಗ್ಲೇಂಡಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದ ಜಯಗಳಿಸಿ ಚಿನ್ನದ ಪದಕ ಪಡೆದುಕೊಂಡ ನಿಮಿತ್ಯ ಇಂದು ಅವರಿಗೆ ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸಮಾಜದ ಹಿರಿಯರಾದ ಕರಿಯಪ್ಪ ಕಟ್ಟಿಮನಿ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಹಾಗೂ ವಕೀಲ ಡಾ.ಮಲ್ಲೇಶಪ್ಪ ಹರಿಜನ, ಡಿ.ಎಸ್.ಎಸ್ ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ತಾಲೂಕ ಅಧ್ಯಕ್ಷ ಹನಮಂತಪ್ಪ. ಹರಿಜನ, ತಾಲೂಕ ಬಿಜೆಪಿ ಎಸ್ಸಿ ಮೋರ್ಚಾ ಸಹ ಕಾರ್ಯದರ್ಶಿ ಸುರೇಶ ಮೂಡೆಣ್ಣವರ, ತಾಲೂಕ ಬಿಜೆಪಿ ಎಸ್ಸಿ ಮೋರ್ಚಾ ಕೋಶಾಧ್ಯಕ್ಷ ಸಂತೋಷ ಕಟ್ಟಿಮನಿ, ತಾ.ಪಂ ಎಂ.ಆರ್.ಡಬ್ಲೂ ಸಿದ್ದಪ್ಪ ಮಸಳಿ, ವಿ.ಆರ್.ಡಬ್ಲೂ ಕರೆಪ್ಪ ಮಾದರ, ಶೇಖರ ಲಮಾಣಿ ಪರಸುರಾಮ ದೊಡ್ಡಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.