ಜಮಖಂಡಿ

ಗ್ರಾಮೀಣ ಮಕ್ಕಳ ರಜೆ ಬಳಕೆ ವಿನೂತನ ಕಾರ್ಯಕ್ರಮ

ಗ್ರಾಮೀಣ ಮಕ್ಕಳ ರಜೆ ಬಳಕೆ ವಿನೂತನ ಕಾರ್ಯಕ್ರಮ

ಜಮಖಂಡಿ: 23: ಗ್ರಾಮೀಣಭಾಗದ ಶಾಲಾ ಮಕ್ಕಳಿಗಾಗಿ ರಜೆಬಳಕೆ ವಿನೂತನ ಕಾರ್ಯಕ್ರಮದೊಂದಿಗೆ ಮಕ್ಕಳ ಶ್ರೇಯೊಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ ಎಂದು ಹುನ್ನೂರು ಗ್ರಾಪಂ ಪಿಡಿಒ ಮಲ್ಲಪ್ಪ ರೂಗಿ ಹೇಳಿದರು.    

ತಾಲೂಕಿನ ಹುನ್ನೂರು ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಾಗಲಕೋಟೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಆಯೋಜಿಸಿದ್ದ ಗ್ರಾಮೀಣ ಮಕ್ಕಳ ರಜೆ ಬಳಕೆ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಗ್ರಾಮದ, ಗ್ರಾಮಸ್ಥರ ಅಭಿವೃದ್ದಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಪ್ರಯೋಜನ ಪಡೆಯಲು ಗ್ರಾಮಸ್ಥರು ಮುಂದಾಗಬೇಕು. ಮಕ್ಕಳಿಗೆ ಸಾಮಾನ್ಯ ಜ್ಞಾನ ನೀಡುವ ಮೂಲಕ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿದ್ದು ಸಂತಸದ ವಿಷಯ. ಮಕ್ಕಳನ್ನು ಸಿದ್ಧ ಸರೋವರ ಸುತ್ತ ಸಂಚರಿಸುವಂತೆ ಮಾಡಿ ಪರಿಸರ ಜಾಗೃತಿ ಮೂಡಿಸುವಲ್ಲಿ ಶಿಬಿರ ಸಹಕಾರಿಯಾಗಿದೆ. ಹಣಕಾಸು ವ್ಯವಹಾರಕ್ಕಾಗಿ ಹುನ್ನೂರ ಪಿಕೆಪಿಎಸ್ ಸೊಸಾಯಿಟಿ ಭೇಟಿ ನೀಡುವ ಮೂಲಕ ವ್ಯವಹಾರ ಮಾಹಿತಿ ನೀಡಲಾಗಿದೆ ಎಂದರು. 

ಗಾ.ಪಂ.ಅಧ್ಯಕ್ಷೆ ರೇಣುಕಾ ದೊಡಮನಿ, ಗ್ರಾ.ಪಂ.ಸದಸ್ಯರಾದ ಗಿರಮಲ್ಲ ಮೈಗೂರ, ಕಾಡಪ್ಪ ಮರೇಗುದ್ದಿ, ಅಪ್ಪಾಶಿ ಜನವಾಡ, ಈಶ್ವರ ಚನ್ನಪ್ಪಗೋಳ, ಕಾಶೀಬಾಯಿ ಅವಟಗೇರಿ, ದಯಾನಂದ ದೇಸಾಯಿ, ಜ್ಯೋತಿ ದೇಶೆಟ್ಟಿ, ಗ್ರಂಥಪಲಾಕ ಶಂಕರ ಚಿಚಖಂಡಿ, ಪಿಕೆಪಿಎಸ್ ಸೊಸೈಟಿ ವ್ಯವಸ್ಥಾಪಕ ಲಕ್ಷ್ಮಣ ತೇಲಿ ಸೇರಿದಂತೆ ಅನೇಕರು ಇದ್ದರು. 

ಪೋಟೋ : ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದಲ್ಲಿ ಗ್ರಾಮೀಣ ಮಕ್ಕಳ ರಜೆ ಬಳ:ಕೆ ವಿನೂತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹುನ್ನೂರ ಪಿಕೆಪಿಎಸ್ ಸೊಸೈಟಿಗೆ ಭೇಟಿ ವ್ಯವಹಾರ ಪರೀಶೀಲಿಸಿದರು. 


ಸುದ್ದಿ ಓದಿ