ಕಂಪ್ಲಿ

ಗಮನ ಸೆಳೆದ ಮಹಿಳೆಯರ ಕರಕುಶಲ ವಸ್ತುಪ್ರದರ್ಶನ

ಗಮನ ಸೆಳೆದ ಮಹಿಳೆಯರ ಕರಕುಶಲ ವಸ್ತುಪ್ರದರ್ಶನ

ಕಂಪ್ಲಿ 15: ನಾಡಹಬ್ಬ ದಸರಾ ನಿಮಿತ್ತ ಎಲ್ಲೆಡೆ ಹಮ್ಮಿಕೊಂಡಿದ್ದ ನವರಾತ್ರಿಯ ದೇವಿ ಪುರಾಣ ಶಾಸ್ತ್ರೋಕ್ತವಾಗಿ ಶನಿವಾರ ಮಹಾಮಂಗಲಗೊಂಡವು. ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರೀದೇವಿ ಪುರಾಣ ಮಹೋತ್ಸವ ಸಮಿತಿ ಹಮ್ಮಿಕೊಂಡಿದ್ದ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ಮಹಾಮಂಗಲಗೊಂಡಿತು.

ಪುರಾಣ ಪ್ರವಚನಕಾರ ಬಳೂಟಗಿಯ ಶಿವಕುಮಾರಸ್ವಾಮಿ, ಸಂಗೀತ ವಾಚಿಸಿದ ಶರಣಬಸವಕುಮಾರಸ್ವಾಮಿ, ತಬಲಸಾತ್ ನೀಡಿದ ಪಂಚಾಕ್ಷರಿ ಹೂಗಾರ, ಆದಿಶಕ್ತಿ ಪ್ರತಿಮೆ ಅಲಂಕರಿಸಿದ ಸುಮಿತ್ರಮ್ಮ ಪರಶುರಾಮಪ್ಪ ಚಿತ್ರಗಾರ, ಧ್ವನಿವರ್ಧಕ ಸೇವೆಗೈದವರನ್ನು ಗೌರವಿಸಲಾಯಿತು. ಪುರಾಣ ಸಮಿತಿ ಅಧ್ಯಕ್ಷ ಎಸ್‌.ಎಸ್‌.ಎಂ.ಚನ್ನಬಸವರಾಜಸ್ವಾಮಿ ಸೇರಿ ಪದಾಧಿಕಾರಿಗಳು, ಸದ್ಭಕ್ತರಿದ್ದರು. ಇಲ್ಲಿನ ವಿಶ್ವಕರ್ಮ ಸಮಾಜದ ಕಾಳಿಕ ಕಮಠೇಶ್ವರ ದೇವಸ್ಥಾನದ ವಿಶ್ವಕರ್ಮ ಭವನದಲ್ಲಿ ಶ್ರೀದೇವಿ ಪುರಾಣ ಮಹಾಮಂಗಲಗೊಂಡಿತು. ಮಕ್ಕಳು ಛದ್ಮವೇಷಧರಿಸಿದ್ದರು. ಭವನದಲ್ಲಿ ಡಿ.ವೀಣಾ ನೇತೃತ್ವದಲ್ಲಿ ಮಹಿಳೆಯರ ಕರಕುಶಲ ವಸ್ತುಪ್ರದರ್ಶನ ಏರಿ​‍್ಡಸಲಾಗಿತ್ತು. ಪುರಾಣ ಪ್ರವಚನ ನೀಡಿದ ಕೊಟ್ರಯ್ಯಸ್ವಾಮಿ, ಸಂಗೀತಗಾರ ದೊಡ್ಡಬಸಪ್ಪಚಾರ್ಯ, ತಬಲಸಾತ್ ನೀಡಿದ ಮೆಟ್ರಿ ನಾಗರಾಜಾಚಾರ್, ಶರನ್ನವರಾತ್ರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಪ್ರತಿಭೆಗಳೆಲ್ಲರನ್ನು ಗೌರವಿಸಲಾಯಿತು.

ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಎ.ರುದ್ರಾ​‍್ಪಚಾರ್, ಪದಾಧಿಕಾರಿಗಳಾದ ಡಿ.ಮೌನೇಶ್, ರಾಮಚಂದ್ರಾಚಾರಿ, ಚಂದ್ರಶೇಖರ್, ಕಾಳಾಚಾರಿ, ಷಣ್ಮುಖಾಚಾರಿ, ಮೆಟ್ರಿ ನಾಗರಾಜ ಸೇರಿ ವಿಶ್ವಕರ್ಮ ಸಮಾಜದವರಿದ್ದರು. 



ಸುದ್ದಿ ಓದಿ