ರಾಣೆಬೆನ್ನೂರ

ಅಗಲಿತ ಚೇತನಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ

ಅಗಲಿತ ಚೇತನಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ


ಲೋಕದರ್ಶನ ವರದಿ 

ರಾಣಿಬೆನ್ನೂರ 17:  ಇಲ್ಲಿನ ವಾಗೀಶ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಇತ್ತೀಚಿಗೆ ನಮ್ಮನ್ನಗಲಿದ ಗಾನ ಕೋಗಿಲೆ ಲತಾ ಮಂಗೇಸ್ಕರ. ಮತ್ತು ಭಾವೈಕ್ಯತೆ ಸಂತ ಇಬ್ರಾಹಿಂ ಸುತಾರ್ ಅವರ ನಿಧನಕ್ಕೆ ಸಾಹಿತ್ಯ ಬಳಗವು ತನ್ನ ತೀವ್ರ ಸಂತಾಪ ಸೂಚಿಸಿ ಅಗಲಿದ ಚೇತನಗಳಿಗೆ ಶಾಂತಿ ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸಿದರು.  

ತಾಲೂಕಾಧ್ಯಕ್ಷ ವೀರೇಶ ಜಂಬಗಿ, ಮಾಜಿ ಅಧ್ಯಕ್ಷ ಎ.ಬಿ.ರತ್ನಮ್ಮ, ಡಾ. ಕೆ.ಎಸ್‌.ಮುಕ್ಕಣ್ಣನವರ, ಪ್ರಭಾಕರ ಶಿಗ್ಲಿ, ಇಂದಿರಾ ಬಾರಂಗಿ, ನಿರ್ಮಲಾ ಲಮಾಣಿ, ವಿದ್ಯಾವತಿ ಜಂಗಿನ, ಎಸ್‌.ಎಚ್‌.ಮೇಟಿ, ಜಗದೀಶ ಹುಲ್ಯಾಳ, ಹೆಚ್‌.ಹೆಚ್‌.ಜಾಡರ, ಸುಭಾಷ ಕುರುಬರ, ಜಗದೀಶ ಮಳೇಮಠ, ರಮೇಶ ಬಡಕರಿಯಪ್ಪನವರ, ಚಂದ್ರಶೇಖರ ಮಡಿವಾಳರ ಸೇರಿದಂತೆ ಮತ್ತಿತರ ಗಣ್ಯರು, ಸಾಹಿತಿಗಳು, ಕಲಾವಿದರು ಪಾಲ್ಗೊಂಡಿದ್ದ ಈ ಶ್ರದ್ಧಾಂಜಲಿ ಸಭೆಯಲ್ಲಿ ತಮ್ಮ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. 


ಸುದ್ದಿ ಓದಿ