ಗಮನ ಸೆಳೆದ ಸಂಗೀತ ಕಾರ್ಯಕ್ರಮ
ಹೊಸಪೇಟೆ 27: ನಗರದ ಭಟ್ರಳ್ಳಿ ಆಂಜನೇಯ ದೇವಸ್ಥಾನದಲ್ಲಿ ನಡೆದ ಸಂಗೀತ ಕಾರ್ಯಕ್ರಮವು ನೆರೆದ ಪ್ರೇಕ್ಷಕರ ಗಮನ ಸೆಳೆಯಿತು.
ಸಂಗೀತ ಕಲಾವಿದರಾದ ಹನುಂತಪ್ಪ, ತುರುವಾನೂರು ಮಲ್ಲಿಕಾರ್ಜುನ ಹಾಗೂ ಯಲ್ಲಪ್ಪ ಭಂಡಾರದಾರ ಇವರು ಹಾಡಿದ ಭಾವಗೀತೆಗಳು ಹಾಗೂ ಭಕ್ತಿಗೀತೆಗಳನ್ನು ಕೇಳಿದ ಪ್ರೇಕ್ಷಕರು ಮತ್ತೊಮ್ಮೆ ಹಾಡಲು ಪ್ರೇರೇಪಿಸಿದರು. ಹನುಮಂತಪ್ಪ ಇವರು ಹಾಡಿದ ವಚನಗಳು, ಮಲ್ಲಿಕಾರ್ಜುನ ತುರುವಾನೂರು ದಾಸರ ಪದಗಳು ಹಾಗೂ ಯಲ್ಲಪ್ಪ ಭಂಡಾರದಾರರು ಜನಪದ ಗೀತೆಗಳು ಹಾಡಿ ಪ್ರೇಕ್ಷಕರ ಗಮನ ಸೆಳೆದರು.
ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಕಾರ್ಯಕ್ರಮವನ್ನು ನಗರದ ಚೈತನ್ಯ ಟ್ರಸ್ಟ್ನ ಅಧ್ಯಕ್ಷೆ ರೇಣುಕಾ ಎಲ್. ಉದ್ಘಾಟಿಸಿ, ನಮ್ಮ ಕಲೆ, ಸಂಗೀತ ಹಾಗೂ ಸಾಂಸ್ಕೃತಿಕ ಕಲೆಗಳು ವಿಶ್ವಮಾನ್ಯವಾಗಿವೆ ಎಂದರು. ಸಂಗೀತ ಕಾರ್ಯಕ್ರಮದಲ್ಲಿ ಗೋವಿಂದ ಹಾರ್ಮೋನಿಯಂ, ಕುಮಾರಸ್ವಾಮಿ ತಬಲಾ ಸಾಥ್ ನೀಡಿದರು.