ಅಮೃತ ಮಹೋತ್ಸವ: ಕಾನೂನು ಅರಿವು-ನೆರವು
ಲೋಕದರ್ಶನ ವರದಿ
ರಾಣೀಬೆನ್ನೂರ 12: ಕಾನೂನಿನ ಜ್ಞಾನ ಹೂಂದಲು ಸಂಬಂಧಿಸಿದಂತೆ ಅಧ್ಯಯನ ಮಾಡಲೇಬೇಕೆಂಬ ಕಡ್ಡಾಯ ನಿಯಮಗಳೇನು ಇಲ್ಲ ಆದರೆ ಸಮಾಜದಲ್ಲಿರುವ ಪ್ರತಿಯೂಬ್ಬ ನಾಗರೀಕರು ಗಂಡು ಹೆಣ್ಣು ಯಾವುದೇ ಭೇದ ಭಾವ ಎಣಿಸದೆ ಕನಿಷ್ಠ ಕಾನೂನಿನ ಅರಿವು ತಿಳುವಳಿಕೆ ಇದ್ದಾಗ ಮಾತ್ರ ಸಮಾಜದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಲಾರವು ಅದಕ್ಕಾಗಿ ರಾಜ್ಯ ಕಾನೂನು ಅಭಿವೃದ್ದಿ ಪ್ರಾಧಿಕಾರವು ಕಟ್ಟಕಡೆಯ ಮನುಷ್ಯನಿಗೆ ಕಾನೂನು ನ್ಯಾಯ ಮತ್ತು ಜ್ಞಾನ ಅರಿವು ಇರಬೇಕೆಂಬ ಉದ್ದೇಶದಿಂದ ಎಲ್ಲ ಕಡೆಯು ಇಂತಹ ಕಾರ್ಯಕ್ರಮಗಳ ಮೂಲಕ ಜ್ಞಾನ ನೀಡಲಾಗುತ್ತಿದೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ರಾಜೇಶ ಎಂ.ಕಮತೆ ಹೇಳಿದರು.
ಅವರು ಇತ್ತೀಚೆಗೆ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ ವಕೀಲರ ಸಂಘವು ಆಯೋಜಿಸಿದ್ದ ಉಚಿತ ಕಾನೂನು ಅರಿವು ನೆರವು ಶಿಭಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆಜಾದಿಕಾ ಅಮೃತ ಮಹೋತ್ಸ ಆಚರಣೆಯ ಈ ಸಂಧರ್ಭದಲ್ಲಿ ರಾಜ್ಯ ಕಾನೂನು ಅಭಿವೃದ್ದಿ ಪ್ರಾಧಿಕಾರವು ನಾಡಿನಾದ್ಯಂತ ತಾಲೂಕು ಸಮಿತಿಗಳ ಮೂಲಕ ಸ್ಥಳಿಯ ಸಂಘ ಸಂಸ್ಥೆಗಳ ಭೌತಿಕ ಮತ್ತು ಸಾಮಾಜಿಕ ಸಹಕಾರದ ಮೂಲಕ ಶಿಬಿರಗಳನ್ನು ಆಯೋಜಿಸಿ ಕಾನೂನಿನ ಜ್ಞಾನವನ್ನು ಪ್ರಸಾರಪಡಿಸುವ ಕಾರ್ಯದಲ್ಲಿ ಮುಂದಾಗಿದ್ದೇವೆ ಎಂದ ಅವರು ಸಮಾಜದಲ್ಲಿರುವ ಪ್ರತಿಯೂಬ್ಬರು ತಮ್ಮ ಕರ್ತವ್ಯ ಮತ್ತು ಹಕ್ಕುಗಳ ಬಗ್ಗೆ ಅರಿವು ಹೂಂದಲು ಮುಂದಾಗಬೇಕೆಂದು ಹೇಳಿದರು.
ಹಿರಿಯ ನ್ಯಾಯವಾದಿ ಎನ್.ವಿ.ಚಪ್ಪರದ ಅವರು ಕಾನೂನು ಎಲ್ಲರಿಗೂ ಬೇಕು, ರೈತ ದೇಶದ ಬೆನ್ನೆಲುಬು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಆತ ಕಷ್ಟಪಟ್ಟು ಬೆಳೆದ ಬೆಳೆ ಮಾರುಕಟ್ಟೆಗೆ ಬಂದಾಗ ಬೆಲೆ ಕುಗ್ಗಿರುತ್ತದೆ. ಹೀಗಾಗಿ ರೈತ ಸಮುದಾಯ ನಿರಂತರ ಶೋಷಣೆಗೊಳಗಾಗುತ್ತದೆ. ಇದರಿಂದ ಹೊರಬರಬೇಕಾದರೆ ರೈತ ಸಮುದಾಯವು ಕಾನೂನು ಸೇವಾ ಸಮಿತಿಯ ನೆರವು ಪಡೆಯಬೇಕು ಮತ್ತು ಕಾನೂನಿನ ಕುರಿತು ಸಾಮಾನ್ಯ ಜ್ಞಾನ ಹೊಂದಬೇಕು ಎಂದರು. ನ್ಯಾಯವಾದಿ ಆರ್.ಪಿ.ಬಸೇನಾಯ್ಕರ ಅವರು ಗ್ರಾಹಕರ ರಕ್ಷಣಾ ಕಾಯ್ದೆ -ಮಾಹಿತಿ ಹಕ್ಕು ಕಾಯ್ದೆ ಕುರಿತು ಉಪನ್ಯಾಸ ನೀಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಸವರಾಜಪ್ಪ ಡಿ.ಸವಣೂರ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅದ್ಯಕ್ಷ ಬಿ.ಹೆಚ್. ಬುರಡಿಕಟ್ಟಿ , ಉಪಾಧ್ಯಕ್ಷ ಕುಮಾರ ಡಿ.ಮಡಿವಾಳರ, ಕಾರ್ಯದರ್ಶಿ ಜಿ.ಕೆ.ಮುಂಡಾಸದ, , ಎಪಿಎಂಸಿ ಮಾಜಿ ಅಧ್ಯಕ್ಷ ಮಂಜನಗೌಡ ಪಾಟೀಲ, ಸದಸ್ಯರಾದ ಜಟ್ಟೆಪ್ಪ ಕರೇಗೌಡ್ರ, ಯು. ಎನ್.ಕೂನಬೇವು, ವಿ.ಎಂ. ಸಂದ್ಯಾಳ, ಎಂ.ಡಿ.ಐರಣಿ, ಎಂ.ಜಿ.ಬೇಲೂರು, ಆರ್. ಸಿ.ಪಾಟೀಲ, ಎಸ್.ಎಚ್.ಸಿದ್ದಪ್ಪನವರ, ಎಚ್. ಡಿ.ಹೊನ್ನಕ್ಕಳವರ, ಸುಮಾ ಸಾವಕಾರ, ಎನ್.ಎಸ್.ಜೋಶಿ, ಮಹಾ ದೇವಿ ಮಾಳಗುಡ್ಡಪ್ಪನವರ, ನೇತ್ರಾವತಿ ಅಜ್ಜೇವಡಿಮಠ, ಜಯಶ್ರೀ ಜಂಬಗಿ, ಸರಸ್ವತಿ ಕಮದೋಡ, ನಾಗರತ್ನ ಮುಗಳಿಶೆಟ್ಟರ, ಸುಮಾ ಹಿರೇಮಠ ಸೇರಿದಂತೆ ಮತ್ತಿತರರುಬ ಉಪಸ್ಥಿತರಿದ್ದರು. ಸಿ.ಯು.ಕರೇಗೌಡ್ರ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.