ತಾಳಿಕೋಟಿ

ವಿಜೃಂಭಣೆಯಿಂದ ಜರುಗಿದ ಅಮೋಘಸಿದ್ದೇಶ್ವರ ಜಾತ್ರೆ

ವಿಜೃಂಭಣೆಯಿಂದ ಜರುಗಿದ ಅಮೋಘಸಿದ್ದೇಶ್ವರ ಜಾತ್ರೆ

ತಾಳಿಕೋಟೆ 19 :  ತಾಲ್ಲೂಕಿನ ಸುಕ್ಷೇತ್ರ ಚಬನೂರ ಗ್ರಾಮದ ಅಮೋಘ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಬಾದ್ಮಿ ಅಮವಾಸೆಯಂದು ಶನಿವಾರ ಸಂಭ್ರಮದಿಂದ ನೆರವೇರಿತು.  ಶುಕ್ರವಾರ ಸಂಜೆ ಪುರಾಣ ಮಂಗಲ ಮತ್ತು ಪ್ರತಿಭಾ ಪುರಸ್ಕಾರ ನಡೆಯಿತು. ರೋಣ ತಾಲ್ಲೂಕು ಬೂದಿಹಾಳ ಗ್ರಾಮದ ಗವಿಸಿದ್ದೇಶ್ವರ ಶಾಸ್ತ್ರೀಜಿ ಅವರಿಂದ ನಡೆದು ಬಂದ ‘ಕಲ್ಯಾಣ ದರ್ಶನ‘ ಪ್ರವಚನ ಕಾರ್ಯಕ್ರಮವು ಮಹಾಮಂಗಳವಾಯಿತು.  ಗ್ರಾಮದಲ್ಲಿಯೇ ವ್ಯಾಸಂಗ ಮಾಡಿ ಈ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಶನಿವಾರ ಬೃಹತ್ ಉಚಿತ ನೇತ್ರ ಮತ್ತು ಆರೋಗ್ಯತಪಾಸಣಾ ಶಿಬಿರ ನಡೆಯಲಿದ್ದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಬ.ಲಿಂಗದಳ್ಳಿ, (ಚಬನೂರ) ಹಾಗೂ ಬಿಎಲ್‌.ಡಿ.ಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಚಬನೂರ ಗ್ರಾಮದ ಆರೋಗ್ಯ ಇಲಾಖೆ ಹಾಗೂ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.ರಾತ್ರಿ ವಿವಿಧ ಗ್ರಾಮಗಳಿಂದ ಬಂದಿದ್ದ ಡೊಳ್ಳಿನ ಮೇಳದವರಡೊಳ್ಳಿನ ಕೈಪಟ್ಟು ವಾದನ ಗ್ರಾಮದಲ್ಲಿ ಮಾರ್ಧನಿಸಿತು.  ಭಕ್ತಾದಿಗಳಿಗೆ ಕೈಚಕ್ಕಳಿ ಪ್ರಸಾದ ವಿತರಣೆ ಮಾಡಲಾಯಿತು. ನಂತರ ನಸುಕಿನಲ್ಲಿ ದೇವರ ಹೇಳಿಕೆ ಯಾಯಿತು. ಉತ್ಸವದಲ್ಲಿ ನೂರಾರು ಗ್ರಾಮಗಳಿಂದ ಬಂದಿದ್ದ ಭಕ್ತಾದಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ