ಅಂಗಾಂಗ ದಾನದ ಘೋಷಣೆ ಮಾಡಿದ ಅಮಿತಾಬ್
ನವದೆಹಲಿ, ಸೆಪ್ಟೆಂಬರ್ 30: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಮಂಗಳವಾರ ತಮ್ಮ ಅಂಗಾಂಗಗಳನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನು ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದೇನೆ. ಅದರ ಧರ್ಯೋತಕವಾಗಿ ನಾನು ಹಸಿರು ಪಟ್ಟಿ ಕಟ್ಟಿಕೊಳ್ಳಲಿದ್ದೇನೆ ಎಂದಿದ್ದಾರೆ.
ನಮ್ಮ ಪೂರ್ವಜರು ನಮಗೆ ನೀಡಿದ ಕೊಡುಗೆ ಸ್ಮರಿಸುತ್ತಿದ್ದೇನೆ. ಅವರ ಆಶಿರ್ವಾದ ಎಂದೆಂದೂನಮ್ಮ ಮೇಲಿರಲಿ ಎಂದಿದ್ದಾರೆ.
77 ವರ್ಷದ ಬಿಗ್ಬಿ ಸದ್ಯ ಕೆಬಿಸಿ 12ನೇ ಆವೃತ್ತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.