ರಾಷ್ಟ್ರೀಯ

ಅಮಿತ್ ಶಾಗೆ .. ಏಳು ಸಾವಿರ ಪೊಲೀಸರಿಂದ ಭಾರಿ ಭದ್ರತೆ...

ಅಮಿತ್ ಶಾಗೆ .. ಏಳು ಸಾವಿರ ಪೊಲೀಸರಿಂದ  ಭಾರಿ ಭದ್ರತೆ...

ಚೆನ್ನೈ, ನವೆಂಬರ್ 20: ನಾಳೆ  ಚೆನ್ನೈಗೆ  ಆಗಮಿಸಲಿರುವ  ಹಿರಿಯ ಬಿಜೆಪಿ ನಾಯಕ,   ಕೇಂದ್ರ ಗೃಹ ವ್ಯವಹಾರಗಳ ಸಚಿವ ಅಮಿತ್ ಶಾ ಅವರಿಗೆ  7,000 ಪೊಲೀಸ್ ಸಿಬ್ಬಂದಿ  ಭಾರಿ ಬಿಗಿ  ಭದ್ರತೆ  ಕಲ್ಪಿಸಲಿದ್ದಾರೆ.

 ನಾಳೆ ಬೆಳಿಗ್ಗೆ    ಚೆನ್ನೈಗೆ    ಆಗಮಿಸಲಿರುವ ಅಮಿತ್ ಶಾ,  ಸಂಜೆ ಚೆಪಾಕ್ ಕಲೈವಾನಾರ್ ಅರಂಗಂ ನಲ್ಲಿ ನಡೆಯುವ  ಸರ್ಕಾರಿ ಸಮಾರಂಭದಲ್ಲಿ   ಪಾಲ್ಗೊಳ್ಳಲಿದ್ದಾರೆ.  ಬೆಳಗ್ಗೆ  ಬಿಜೆಪಿ ರಾಜ್ಯ ಘಟಕದ ನಾಯಕರೊಂದಿಗೆ ಟಿ ನಗರದಲ್ಲಿರುವ  ಪಕ್ಷದ ರಾಜ್ಯ ಕಚೇರಿಯಲ್ಲಿ ಸಭೆ ನಡೆಸಿ ಪಕ್ಷದ ಬೆಳವಣಿಗೆ, ರಾಜ್ಯ ವಿಧಾನಸಭಾ ಚುನಾವಣೆಗೆ ಅನುಸರಿಸಬೇಕಾದ ತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ.

ಸಭೆಯ ನಂತರ ಅವರು ಚೆನ್ನೈನ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ  ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿ, ಕಲೈವಾನಾರ್ ಅರಂಗಂ ಹಾಗೂ  ಲೀಲಾ ಪ್ಯಾಲೇಸ್ ಹೋಟೆಲ್‌ ಬಳಿ  ಭಾರಿ  ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರೊಂದಿಗೆ, ಕೇಂದ್ರೀಯ  ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್)  ಕೂಡ ಅಮಿತ್ ಶಾ ಭೇಟಿ ನೀಡುವ ಪ್ರದೇಶಗಳಲ್ಲಿ  ಬಂದೋಬಸ್ತ್  ಕೈಗೊಳ್ಳಲಿದೆ.

ಸುದ್ದಿ ಓದಿ