ರಾಷ್ಟ್ರೀಯ

ಐತಿಹಾಸಿಕ - ಹೊಸ ಯುಗದ ಮನ್ವಂತರಕ್ಕೆ ಸಾಕ್ಷಿ : ಅಮಿತ್ ಷಾ ಬಣ್ಣನೆ

ಐತಿಹಾಸಿಕ -  ಹೊಸ ಯುಗದ ಮನ್ವಂತರಕ್ಕೆ ಸಾಕ್ಷಿ : ಅಮಿತ್ ಷಾ ಬಣ್ಣನೆ

ನವದೆಹಲಿ, ಆಗಸ್ಟ್ 5: ಅಯೋಧ್ಯೆಯಲ್ಲಿ  ರಾಮ  ದೇವಸ್ಥಾನ ನಿರ್ಮಾಣ ಭಾರತಕ್ಕೆ  ಐತಿಹಾಸಿಕ ಮತ್ತು ಹೆಮ್ಮೆಯ ದಿನ ಹೊಸ ಯುಗದ  ಪ್ರತೀಕ  ಎಂದು ಕೇಂದ್ರ  ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ. 

ಅಯೋಧ್ಯೆಯಲ್ಲಿ ಭವ್ಯ ರಾಮ ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಅವರು  ಭಾರತೀಯ ನಾಗರಿಕತೆಯ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯ ಬರೆದಿದ್ದಾರೆ ಮತ್ತು ಭಾರತೀಯ ಸಂಸ್ಕೃತಿ ಮತ್ತು ಅದರ ಮೌಲ್ಯಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಅವರು  ಪ್ರತಿಪಾದಿಸಿದರು.

ಕರೋನ ಸೊಂಕಿಗೆ ತುತ್ತಾಗಿ  ಗುರಗಾಂವ್‌ನ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ  ಹೇಳಿಕೆಯಲ್ಲಿ ತಮ್ಮ ಅಭಿಪ್ರಯ ಹೇಳಿದ್ದಾರೆ.

ಮಂದಿರ  ನಿರ್ಮಾಣವು ಶತಮಾನಗಳ ಸುದೀರ್ಘ ತ್ಯಾಗ, ಹೋರಾಟ ಮತ್ತು ಭಗವಾನ್ ರಾಮನ ಅಸಂಖ್ಯಾತ ಭಕ್ತರ ತಪಸ್ಸಿನ ಫಲವಾಗಿದೆ ಎಂದೂ ಅವರು ಹೇಳಿದರು.

ಈ ದಿನ, ಸನಾತನ ನಾಗರಿಕತೆಯ ಈ ಅಮೂಲ್ಯ ಪರಂಪರೆಯನ್ನು ಕಾಪಾಡಿಕೊಳ್ಳಲು ವರ್ಷಗಳ ಕಾಲ ಹೆಣಗಾಡಿದ ಅವರ ಈ ಅಮೂಲ್ಯ ಪರಂಪರೆಗಾಗಿ ಹೋರಾಡಿದ ಎಲ್ಲ ತಪಸ್ವಿಗಳಿಗೆ ಶಿರಬಾಗಿ  ವಂದಿಸುವುದಾಗಿ ಅವರು  ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಭವ್ಯ ರಾಮ  ದೇವಾಲಯದ ನಿರ್ಮಾಣವು ಪ್ರಧಾನಿ ನರೇಂದ್ರ ಮೋದಿಯವರ ಬಲವಾದ ಮತ್ತು ನಿರ್ಣಾಯಕ ನಾಯಕತ್ವವನ್ನು ಜಗತ್ತಿಗೆ ತೋರಿಸಿದೆ. ಮೇಲಾಗಿ   ಭಗವಾನ್ ರಾಮನ ಆದರ್ಶಗಳು ಮತ್ತು ಆಲೋಚನೆಗಳು ಭಾರತದ ಆತ್ಮದಲ್ಲಿ ನೆಲೆಸಿದೆ ಎಂದು ಶಾ ಹೇಳಿದರು.


ಸುದ್ದಿ ಓದಿ