ಏಮ್ಸ್ ನಿಂದ ಅಮಿತ್ ಷಾ ಬಿಡುಗಡೆ: ಸಂಪೂರ್ಣ ಗುಣಮುಖ, ಕೆಲಸ-ಕಾರ್ಯಗಳು ನಿರ್ವಹಿಸಲು ಶಕ್ತ
ನವದೆಹಲಿ, ಆಗಸ್ಟ್ 31-ಕೊವಿಡ್ ಸೋಂಕಿಗೆ ಒಳಗಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಸೋಮವಾರ ಬೆಳಿಗ್ಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಯಿಂದ ಬಿಡುಗಡೆ ಹೊಂದಿದ್ದು, ದೈನಂದಿನ ಕಾರ್ಯ ಚಟುವಟಿಕೆಗಳನ್ನು ಪುನರಾರಂಭಿಸಲು ಶಕ್ತರಾಗಿದ್ದಾರೆ.
ಗೃಹ ಸಚಿವರಾದ ಶ್ ಅಮಿತ್ ಶಾ ಅವರು ನವದೆಹಲಿಯ ಏಮ್ಸ್ ನಲ್ಲಿ ಕೋವಿಡ್ ಆರೈಕೆಗಾಗಿ ದಾಖಲಾಗಿದ್ದರು. ಇಂದು ಬೆಳಿಗ್ಗೆ 7 ಗಂಟೆಗೆ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸಲು ಅವರು ಶಕ್ತರಾಗಿದ್ದಾರೆ ಏಮ್ಸ್ ಪ್ರಕಟಣೆ ತಿಳಿಸಿದೆ.
ದಣಿವು ಮತ್ತು ದೇಹದಲ್ಲಿ ನೋವು ಕಾಣಿಸಿಕೊಂಡ ನಂತರ ಆ 18 ರಂದು ಕೋವಿಡ್ ನಂತರದ ಆರೈಕೆಗಾಗಿ ಷಾ ಅವರು ದೇಶದ ಪ್ರಮುಖ ಆರೋಗ್ಯ ಸಂಸ್ಥೆ, ಏಮ್ಸ್ ಗೆ ದಾಖಲಿಸಲಾಗಿತ್ತು. ಆ 14 ರಂದು ಗುರುಗ್ರಾಮ್‌ನ ಮೆದಾಂತ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು.
ಆಗಸ್ಟ್ 2 ರಂದು ಅಮಿತ್ ಶಾ ಅವರಿಗೆ ಸೋಂಕು ದೃಢಪಟ್ಟಿತ್ತು. ಕೊವಿಡ್ ಚಿಕಿತ್ಸೆಗಾಗಿ ವೈದ್ಯರ ಸಲಹೆಯಂತೆ ಗುರುಗ್ರಾಮ್ ನ ಮೆದಾಂತ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.