ತಮಿಳುನಾಡು, ಪುದುಚೇರಿಗೆ ಸಹಾಯ : ಅಮಿತ್ ಶಾ ಭರವಸೆ
ಚೆನ್ನೈ,
ನ 26: ನಿವಾರ್ ಚಂಡಮಾರುತದ ತೀವ್ರತೆ ಮತ್ತಷ್ಟು ಕಡಿಮೆ ಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಪ್ರಕಟಿಸಿದೆ.
ಈನಡುವೆ
ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್
ಶಾ ತಮಿಳುನಾಡು ಮತ್ತು ಪುದುಚೇರಿ ಎರಡೂ ಮುಖ್ಯಮಂತ್ರಿ ಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ,
ರಾಜ್ಯಗಳಿಗೆ ಕೇಂದ್ರದಿಂದ ಅಗತ್ಯ ಸಹಾಯ ಮಾಡುವ,
ರಾಜ್ಯದ ಎಲ್ಲಾ ಬೆಳವಣಿಗೆಗಳ ಬಗ್ಗೆ ನಿಗಾ
ಇಡುತ್ತಿರುವುದಾಗಿ ಹೇಳಿದ್ದಾರೆ.
ಸಾಧ್ಯವಾದಷ್ಟು ಸಹಾಯ ಮಾಡುವುದಾಗಿ ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ ಅವರು, 'ನಿವಾರ್ ಚಂಡಮಾರುತದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಪುದುಚೇರಿಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ್ದಾರೆ.
ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಈಗಾಗಲೇ ಎನ್ಡಿಆರ್ಎಫ್ ತಂಡಗಳು ಕಾರ್ಯ ಪ್ರವೃತವಾಗಿದೆ.ಗುರುವಾರ ಮುಂಜಾನೆ ಚಂಡಮಾರುತದ ಪರಿಣಾಮ. ಪುದುಚೇರಿ ಮತ್ತು ತಮಿಳುನಾಡು ಎರಡೂ ಕಡೆ ಭಾರೀ ಮಳೆಯಾಗಿದೆ. ಅನೆಕ ಕಡೆ ಮರಗಳು- ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಐಎಂಡಿ ಪ್ರಕಾರ, ನಿವಾರ್ ಕೇಂದ್ರಾಡಳಿತ ಭೂಪ್ರದೇಶ ದಾಟಿದ ನಂತರ ತೀವ್ರ ಬಿರುಗಾಳಿಯ ಕಾರಣ ಚಂಡಮಾರುತ ದುರ್ಬಲಗೊಂಡಿದೆ.