ಚಿಕ್ಕೋಡಿ

ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಂಬ್ಯೂಲೆನ್ಸ್‌: ಸಂಸದ ಜೊಲ್ಲೆ

ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಂಬ್ಯೂಲೆನ್ಸ್‌: ಸಂಸದ ಜೊಲ್ಲೆ

ಚಿಕ್ಕೋಡಿ 05: ಕಳೆದ ಕೋವಿಡ್‌-19 ಅಲೆಗಳಲ್ಲಿ ಅಂಬ್ಯೂಲೆನ್ಸ್‌ನ ಮಹತ್ವವನ್ನು ಅರಿತುಕೊಂಡು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಂಬ್ಯೂಲೆನ್ಸ್‌ ಸೌಲಭ್ಯ ಕಲ್ಪಿಸಿದ್ದೇನೆ. ನನ್ನ ಲೋಕಸಭಾ ಕ್ಷೇತ್ರದ ಎಲ್ಲ ಆರೋಗ್ಯ ಕೇಂದ್ರಗಳಿಗೆ ಅಂಬ್ಯೂಲೆನ್ಸ್‌ಗಳನ್ನು ಶೀಘ್ರದಲ್ಲಿ ಮಂಜೂರು ಮಾಡಿಸಿ ಕೊಡಲಾಗುವುದು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. 

ನಿಪ್ಪಾಣಿ ನಗರದ  ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಸದರ ನಿಧಿಯಿಂದ ಮಂಜೂರಾದ ಅಂಬ್ಯೂಲೆನ್ಸ್‌ ಲೋಕಾರೆ​‍್ಣಗೊಳಿಸಿ ಅವರು ಮಾನಾಡಿದರು. ಕ್ಷೇತ್ರದ ಎಲ್ಲ ಸಮುದಾಯ ಕೇಂದ್ರಗಳಲ್ಲಿ ಸಂಸದರ ನಿಧಿಯಿಂದ ಮಂಜೂರಾತಿ ಪಡೆದು ಸಿಸಿ ಟಿವಿ ಕ್ಯಾಮರಾಗಳನ್ನು ಕೂಡ ಅಳವಡಿಸಲಾಗುವುದು ಎಂದರು. 

ಎಡಿಎಚ್‌ಒ ಡಾ. ಎಸ್‌.ಎಸ್‌. ಗಡಾದ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರಮನ್ ಚಂದ್ರಕಾಂತ ಕೋಠಿವಾಲೆ, ಸ್ಥಳೀಯ ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜೆ, ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರಮನ್ ಸದ್ದಾಂ ನಗಾರಜಿ, ಸದಸ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ಸಿಎಮ್‌ಓ ಡಾ. ಸೀಮಾ ಗುಂಜಾಳ ವಂದಿಸಿದರು. 


ಸುದ್ದಿ ಓದಿ