ರಾಷ್ಟ್ರೀಯ

ಅಂಬಾಲ ಬಿಜೆಪಿ ಶಾಸಕ ಅಸೀಮ್ ಗೋಯಲ್‌ಗೆ ಕೊರೊನಾ ಪಾಸಿಟಿವ್

ಅಂಬಾಲ ಬಿಜೆಪಿ ಶಾಸಕ ಅಸೀಮ್ ಗೋಯಲ್‌ಗೆ ಕೊರೊನಾ ಪಾಸಿಟಿವ್

ಅಂಬಾಲಾ, ಆಗಸ್ಟ್ 23:  ಬಿಜೆಪಿ ಶಾಸಕ ಅಸೀಮ್ ಗೋಯೆಲ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ತಮಗೆ ಕೊರೋನಾ ರೋಗಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿದಾಗ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ವರದಿ ಪಾಸಿಟಿವ್ ಆಗಿದೆ. ವೈದ್ಯರ ಸಲಹೆಯ ಮೇರೆಗೆ ಸ್ವಯಂ ಹೋಂ ಕ್ವಾರಂಟೈನ್‌ನಲ್ಲಿದ್ದೇನೆ.

15 ದಿನಗಳಿಂದ ತಮ್ಮನ್ನು ಸಂಪರ್ಕಿಸಿದವರು ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ತಮ್ಮೊಂದಿಗೆ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ತನ್ನ ಸಂಪರ್ಕಕ್ಕೆ ಬಂದವರು ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪರೀಕ್ಷೆಗೆ ಒಳಪಡಿಸುವಂತೆ ಅವರು ಕೋರಿದ್ದಾರೆ. ಕೊರೊನಾ ಪರೀಕ್ಷಾ ಸಂದರ್ಭದಲ್ಲಿ ತಮ್ಮೊಂದಿಗೆ ಬಂದಿದ್ದ ಜಿಲ್ಲಾ ಪರಿಷತ್ ಸದಸ್ಯರು ಕೂಡ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು. ಇದಕ್ಕೂ ಮೊದಲು ಕುರುಕ್ಷೇತ್ರದ ಸಂಸದ ನಾಯಬ್ ಸಿಂಗ್ ಸೈನಿ ಅವರಿಗೂ ಪಾಸಿಟಿವ್ ಬಂದಿತ್ತು. 

ಸುದ್ದಿ ಓದಿ