ನಟಿ ಅಮಲಾಪಾಲ್ ಗೆ ಅಪರೂಪದ ಗೌರವ..!
ದುಬೈ, ಡಿ 30: ದಕ್ಷಿಣ ಭಾರತದ ಸುಪ್ರಸಿದ್ದ ನಟಿ ಅಮಲಾ ಪೌಲ್ ದುಬೈ ಸರ್ಕಾರ ನೀಡುವ ಗೋಲ್ಡನ್ ವೀಸಾಗೆ ಭಾಜನರಾಗಿದ್ದಾರೆ. ಸದಾ ವಿವಾದಗಳಿಗೆ ಹೆಸರುವಾಸಿಯಾಗಿರುವ ಈ ಬೆಡಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ವೆಬ್ ಸರಣಿಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ. ದುಬೈ ಸರ್ಕಾರ ಇತ್ತೀಚಿಗೆ ಅಮಲಾಪಾಲ್ ಗೆ ಗೋಲ್ಡನ್ ವೀಸಾ ನೀಡಿರುವುದು ವಿಶೇಷ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಅವರು ‘ಇಂತಹ ಅಪರೂಪದ ಗೌರವ ಸಿಕ್ಕಿರುವುದು ಸಂತಸ ಹಾಗೂ ಅದೃಷ್ಟವೆಂದೇ ಭಾವಿಸುತ್ತೇನೆ’ ಯುಎಇ ಸೌಂದರ್ಯ, ಐಷಾರಾಮಿಯ ದೇಶವಲ್ಲ. ಅಲ್ಲಿನ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ. ತೆಲುಗು, ತಮಿಳು ಹಾಗೂ ಮಲೆಯಾಳಂ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಅಮಲಾ ಪಾಲ್, ಕನ್ನಡದಲ್ಲಿ ಕಿಚ್ಚ ಸುದೀಪ್ ಎದುರು ʼಹೆಬ್ಬುಲಿʼಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.