ಪಂಚಾಂಗ ವಾಚನ ಕಾರ್ಯಕ್ರಮ ಯಶಸ್ವಿ
Almanac reading program successful
ಬಳ್ಳಾರಿ 21: ನಗರದಲ್ಲಿ ಕಲ್ಚರಲ್ ಆಕ್ಟಿವೀಟೀಸ್ ಅಸೋಸಿಯೇಷನ್ ವತಿಯಿಂದ ನಗರದದಲ್ಲಿ ಪಂಚಾಂಗ ವಾಚನ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಶೀಲಾ ಬ್ರಹ್ಮಯ್ಯ ಅವರು ವೇದಿಕೆಯಲ್ಲಿದ್ದ ಗಣ್ಯರಿಗೆ ಸನ್ಮಾನಿಸಿದರು.ನಂತರ ಉಮಾಮಹೇಶ್ವರ ಪಂಚಾಂಗದ ಕರ್ತೃ ಪಂಡಿತ್ ಮಠಂ ಗುರುಪ್ರಸಾದ್ ಅವರು ಶ್ರೀ ಪರಾಭವ ನಾಮ ಸಂವತ್ಸರದ ಮಳೆ, ಬೆಳೆ, ಗೋಚಾರಾದಿ ಫಲಗಳನ್ನು ವಾಚನ ಮಾಡಿ ವಿವರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ನೃತ್ಯ ಕಲಾವಿದ ಅಭಿಷೇಕ್ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅವರ ತಂಡದ ಮಕ್ಕಳಿಂದ ಮನಮೋಹಕ ನೃತ್ಯ ಪ್ರದರ್ಶನ ನಡೆಯಿತು.
ನೃತ್ಯದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ್ದ ಕೊಕ್ಕರಚೇಡಿನ ಶ್ರೀಗುರು ಚರಣಾನಂದ ಗುರು ಸೇವಾಶ್ರಮದ ಪೂಜ್ಯ ಮಾತಾಜಿ ಶರಣಮ್ಮ ತಾಯಿ ಅವರು ಮನಶುದ್ಧಿ ಮತ್ತು ಸನ್ನಡತೆಯಿಂದ ಮುಂಬರುವ ಹೊಸ ವರ್ಷ ಎಲ್ಲರ ಜೀವನದಲ್ಲಿ ಸಂತಸ ಹಾಗೂ ಸಮೃದ್ಧಿ ತರಲೆಂದು ಶುಭಾಶಯ ಕೋರಿದರು.
ವೇದಿಕೆಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಪಿ. ಗಾದೆಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಸೆಲ್ವಮಣಿ, ಉಪಾಧ್ಯಕ್ಷ ಎನ್. ಪ್ರಕಾಶ್, ಛೇಂಬರ್ ಆಫ್ ಕಾಮರ್ಸ್ನ ಹಿರಿಯ ಉಪಾಧ್ಯಕ್ಷ ದೊಡ್ಡನಗೌಡ, ಖಜಾಂಚಿ ಎಂ.ಟಿ. ಮಲ್ಲೇಶಪ್ಪ, ಪ್ರಧಾನ ಕಾರ್ಯದರ್ಶಿ ವಿ. ರಾಮಚಂದ್ರ, ಜಂಟಿ ಕಾರ್ಯದರ್ಶಿ ಜಿ.ಕೆ. ರಾಮಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತಾಜಿ ಶರಣಮ್ಮ ತಾಯಿ ಅವರು ಪಂಚಾಂಗ ಕರ್ತೃ ಪಂಡಿತ್ ಮಠಂ ಗುರುಪ್ರಸಾದ್ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮವನ್ನು ಕೆ.ಬಿ. ಸಿದ್ಧಲಿಂಗಪ್ಪ ನಿರೂಪಿಸಿದರು. ಅಸಂಖ್ಯಾತ ಭಕ್ತರು ಪಂಚಾಂಗ ವಾಚನವನ್ನು ಶ್ರವಣ ಮಾಡಿ ಧನ್ಯರಾದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 