ಪ್ರಾಸಿಕುಶನಗೆ ಅನುಮತಿ ಕೊಟ್ಟಿದ್ದೆ ಅಸಂವಿಧಾನಿಕ : ಬಂಡಿವಡ್ಡರ
ಶಿಗ್ಗಾವಿ 20: ಪ್ರಾಸಿಕುಶನಗೆ ಅನುಮತಿ ಕೊಟ್ಟಿದ್ದೆ ಅಸಂವಿಧಾನಿಕ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲಾ ಇದು ಸಿದ್ದರಾಮಯ್ಯ ವಿರೋಧಿಗಳು ಮಾಡಿರುವ ಷಡ್ಯಂತ್ರ ರಾಜ್ಯ ಪಾಲರ ಕ್ರಮವನ್ನು ನ್ಯಾಯವಾದಿ ಹನುಮಂತಪ್ಪ ಬಂಡಿವಡ್ಡರ ಖಂಡಿಸಿದರು.
ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಪಾಲರು ಕೇಂದ್ರ ಸರ್ಕಾರದ ಕೈ ಗೊಂಬೆ ಆಗಿರೋದು ಮೇಲ್ನೋಟಕ್ಕೆ ಕಂಡು ಬರುತ್ತದೆ ರಾಜ್ಯ ಪಾಲರು ತಮ್ಮ ಕ್ರಮ ಬದಲಾವಣೆ ಮಾಡಬಹುದಿತ್ತು. ಅದೇ ಈ ಹಿಂದೆ ಬಿ. ಜೆ. ಪಿ ಹಗರಣ ಗಳನ್ನು ಏಕೆ ತೆಗೆಯುತ್ತಿಲ್ಲಾ 87 ಕೋಟಿ ಭೋವಿ ನಿಗಮದ ಹಗರಣ, ಪಿ. ಎಸ್. ಐ ಹಗರಣ, ಬಿಟ್ ಕ್ವಾಯಿನ್, ವರ್ಗಾವಣೆ. ಶೇಕಡಾ 40ಅ ಗುತ್ತಿಗೆ ಕೆಲಸದ ಟೆಂಡರಗೆ, ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ಹಗರಣ ಗಳನ್ನು ಮಾಡಿದ್ದನ್ನು ತನಿಖೆ ಮಾಡಲಿ ಎಂದು ಆಗ್ರಹಿಸಿದರು.