ತಾಳಿಕೋಟಿ

ಪೊಲೀಸರ ಸಮ್ಮುಖದಲ್ಲಿಯೇ ಹಣ, ಸೀರೆ ಹಂಚಿಕೆ ಮಾಜಿ ಸಿ.ಎಸ್.ನಾಡಗೌಡ(ಅಪ್ಪಾಜಿ) ಆರೋಪ

ಪೊಲೀಸರ ಸಮ್ಮುಖದಲ್ಲಿಯೇ ಹಣ, ಸೀರೆ ಹಂಚಿಕೆ ಮಾಜಿ ಸಿ.ಎಸ್.ನಾಡಗೌಡ(ಅಪ್ಪಾಜಿ) ಆರೋಪ

ತಾಳಿಕೋಟೆ17: ಕೊಣ್ಣೂರದ ಅಸ್ಕಿ ಪೌಂಡೇಶನ್ ಅಧ್ಯಕ್ಷ, ಸಮಾಜ ಸೇವಕ ಸಿ.ಬಿ.ಅಸ್ಕಿ, ಹಾಲುಮತ ಸಮಾಜದ ಯುವ ಮುಖಂಡ ಶಿವರಾಜ ಗುಂಡಕನಾಳ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಮಾಜಿ ಎಪಿಎಂಸಿ ಅಧ್ಯಕ್ಷ ರಾಮನಗೌಡ ಇಂಗಳಗಿ ನೇತೃತ್ವದಲ್ಲಿ ವಿವಿಧ ಪಕ್ಷಗಳನ್ನ ತೊರೆದ ಕೊಣ್ಣೂರ, ಹರನಾಳ, ನಾಗೂರ, ಹಡಗಿನಾಳ, ಕಲ್ಲದೇವನಹಳ್ಳಿ, ವನಹಳ್ಳಿ, ಅಬ್ಬಿಹಾಳ ಗ್ರಾಮಗಳ ನೂರಾರು ಕಾರ್ಯಕರ್ತರು ,ಮುಖಂಡರುಗಳು ಪಟ್ಟಣದ ಸಂಗಮೇಶ್ವರ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಚಿವ, ಅಭ್ಯರ್ಥಿ  ಸಿ.ಎಸ್.ನಾಡಗೌಡ(ಅಪ್ಪಾಜಿ) ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.

ಮಾಜಿ ಸಚಿವ ಸಿ.ಎಸ್.ನಾಡಗೌಡ (ಅಪ್ಪಾಜಿ), ಮಾತನಾಡಿ ಮತಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ನಾನು ಮಾಡಿದ ಶೇ.20 ಅಭಿವೃದ್ದಿ ಮಾಡದ ಶಾಸಕ ಅಭಿವೃದ್ದಿಯ ನಾಟಕ ಮಾಡುತ್ತಿದ್ದಾರೆ. ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಯಾವ ಶಾಸ್ವತ ಯೋಜನೆಗಳು ತಂದಿಲ್ಲ. ಎಸ್ಸಿಪಿ,ಟಿಎಸ್ಪಿ ಅನುದಾನ ದುರ್ಬಳಕೆ ಆಗಿದೆ. ಪುರಸಭೆ, ಪಟ್ಟಣ ಪಂಚಾಯತ, ಗ್ರಾಮ ಪಂಚಾಯತ ಸದಸ್ಯರ ಅಧಿಕಾರ ಶಾಸಕರೇ ಮಾಡುತ್ತಿದ್ದಾರೆ. ಪುರಸಭೆ ಅನುದಾನವನ್ನು ನಾನೇ ತಂದಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ.  ಪೊಲಿಸ್ರ ಸಮ್ಮುಖದಲ್ಲಿಯೇ ಸೀರೆ, ಪುಸ್ತಕ, ಹಣ ಹಂಚುತ್ತಿದ್ದರು ಕ್ರಮ ಕೈಕೊಳ್ಳುತ್ತಿಲ್ಲ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಸೀರೇಗೆ, ಹಣಕ್ಕೆ ಮಾರು ಹೋಗಬಾರದು. ಚುನಾವಣೆ ಸಂದರ್ಭದಲ್ಲಿ ಮಾತ್ರ 2000 ನೀಡಬಹುದು ಆದರೆ ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2000 ನೀಡಲಾಗುವದು. ಇದರ ಜೊತೆ ಉಚಿತ ವಿದ್ಯುತ್, 10 ಕೆಜಿ ಅಕ್ಕಿ, ನಿರೂಧ್ಯೋಗ ಭತ್ಯೆ ನೀಡಲಾಗುವದು. ನಮ್ಮ ಕಾರ್ಯಕರ್ತರು ಪ್ರತಿ ಮನೆಗೆ ಬೇಟಿ ನೀಡಿ ನಮ್ಮ ಭರವಸೆಗಳನ್ನು ತಿಳಿಹೇಳಬೇಕು. ಯುವ ನಾಯಕರು, ಸಮಾಜ ಸೇವಕರು, ಪುರಸಭೆ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದು ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ಬಲಪಡಿಸಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆ ಆದ ಸಮಾಜ ಸೇವಕ ಸಿ.ಬಿ.ಅಸ್ಕಿ, ಯುವ ಮುಖಂಡ ಶಿವರಾಜ ಗುಂಡಕನಾಳ ಮಾತನಾಡಿ, ಮತಕ್ಷೇತ್ರದಲ್ಲಿ ನಡೆಯುತ್ತಿದ್ದ ಅನೈತಿಕ ರಾಜಕಾರಣ, ಭ್ರಚ್ಟಾಚಾರ, ಗುಂಡಾ ರಾಜಕಾರಣವನ್ನು ಕೊನೆಗಾಣಿಸಲು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿದ್ದೇವೆ. ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಗೆಲುವು ಶತಸಿದ್ದ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಬೂಬ ಚೋರಗಸ್ತಿ, ಶಿವಶಂಕರಗೌಡ ಹಿರೇಗೌಡರ, ನಿವೃತ್ತ ಡಿವಾಯ್ಎಸ್ಪಿ ಎಸ್.ಎಸ್.ಹುಲ್ಲೂರ, ಸಿದ್ದನಗೌಡ ಪಾಟೀಲ, ಪ್ರಭುಗೌಡ ಮದರಕಲ್ಲ, ನಿವೃತ್ತ ಎಸ್ಪಿ ಎಸ್.ಬಿ.ಕಟ್ಟಿಮನಿ, ಪುರಸಭೆ ಸದಸ್ಯ ಪರಶುರಾಮ ತಂಗಡಗಿ, ವಿಜಯಸಿಂಗ ಹಜೇರಿ, ಕಾರ್ತಿಕ ಕಟ್ಟಿಮನಿ, ಸುರೇಶ ನಾಡಗೌಡ ಸೇರಿದಂತೆ ಇತರರು ಇದ್ದರು.


ಸುದ್ದಿ ಓದಿ