ಬಳ್ಳಾರಿ

ವಾಂತಿ ಬೇಧಿ, ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಎಲ್ಲರೂ ಕಾರ್ಯನಿರ್ವಹಿಸಿ: ಡಾ.ಪದ್ಮಾ

ವಾಂತಿ ಬೇಧಿ, ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಎಲ್ಲರೂ ಕಾರ್ಯನಿರ್ವಹಿಸಿ: ಡಾ.ಪದ್ಮಾ

ಬಳ್ಳಾರಿ 09: ಗ್ರಾಮೀಣ ಪ್ರದೇಶ, ನಗರ ಪ್ರದೇಶದ ಯಾವುದೇ ಭಾಗದಲ್ಲಿ ವಾಂತಿಭೇದಿ ಪ್ರಕರಣಗಳು ಕಂಡು ಬಂದಾಗ ತಕ್ಷಣವೇ ಆರೋಗ್ಯ ಇಲಾಖೆಯ ಸೇವೆಯನ್ನು ಸಕಾಲದಲ್ಲಿ ಒದಗಿಸುವ  ಮೂಲಕ ರೋಗ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ರಾಜ್ಯ ಸಾಂಕ್ರಾಮಿಕ ರೋಗಗಳ ಸರ್ವೇಕ್ಷಣ ಘಟಕದ ಉಪನಿರ್ದೇಶಕರು ಹಾಗೂ ಸಾಂಕ್ರಾಮಿಕ ರೋಗಗಳ ಜಂಟಿ ನಿರ್ದೇಶಕರಾದ ಡಾ.ಪದ್ಮಾ ಅವರು ಹೇಳಿದರು. 

ನಗರದ ಡಾ.ರಾಜ್‌ಕುಮಾರ್ ರಸ್ತೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಸಾಂಕ್ರಮಿಕ ರೋಗಗಳ ನಿಯಂತ್ರಣ ಕುರಿತು ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿದರು. 

ಬೇಸಿಗೆ ಹಿನ್ನಲೆಯಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿ ಪ್ರಕರಣಗಳು ಕಂಡು ಬರಬಹುದಾಗಿದ್ದು, ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ, ಪಟ್ಟಣ ಪಂಚಾಯತ, ಪುರಸಭೆ, ನಗರಸಭೆ, ಮಹಾನಗರಪಾಲಿಕೆಯೊಂದಿಗೆ ನೀರು ಶುದ್ಧಿಕರಣ, ಪೈಫ್‌ಲೈನ್ ಸೋರುವಿಕೆ ಪತ್ತೆ ಹಚ್ಚುವಿಕೆ, ಕ್ಲೋರಿನೇಷನ್ ನಿಯಮಿತವಾಗಿ ಕೈಗೊಳ್ಳಬೇಕು ಹಾಗೂ ತಾಂತ್ರಿಕ ಸಹಕಾರ ನೀಡಲು ಅಗತ್ಯ ಕ್ರಮ ವಹಿಸಬೇಕು ಎಂದು ಹೇಳಿದರು. 

ನಾಯಿ ಕಡಿತದ ಪ್ರಕರಣಗಳಲ್ಲಿ ಸಾರ್ವಜನಿಕರು ತಕ್ಷಣವೇ ಆಸ್ಪತ್ರೆಗೆ ಆಗಮಿಸುವ ಬಗ್ಗೆ ಜಾಗೃತಿ ನೀಡುವ ಮತ್ತು ಅಗತ್ಯ ಓಷಧಿ ದಾಸ್ತಾನು ಇಟ್ಟುಕೊಳ್ಳುವಂತೆ ಸೂಚಿಸಿದರು.   

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್‌.ಎಲ್‌.ಜನಾರ್ಧನ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್‌.ಬಸರೆಡ್ಡಿ,  ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ, ನಿರ್ದೇಶನಾಲಯ ಅಧಿಕಾರಿಗಳಾದ ಶಿಲ್ಪಾ ಶೀಜು, ಬಸವರಾಜು ಎಮ್‌.ವಿ, ಪೇಥಲಾಜಿಸ್ಟ್‌ ಡಾ.ಉದಯಕುಮಾರ, ಡಾ.ರಾಧಿಕಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್‌.ದಾಸಪ್ಪನವರ, ಎಪಡಮಲಾಜಿಸ್ಟ್‌ ಡಾ.ಪ್ರಿಯಾಂಕ್, ಎನ್‌ಸಿಡಿ ಕೌನ್ಸ್‌ಲರ್ ಡಾ.ಜಬೀನ್ ತಾಜ್, ಡಿಡಿಎಮ್ ಬಸವರಾಜ್, ಹಿರಿಯ ಆರೋಗ್ಯ ನೀರಿಕ್ಷಕರಾದ ಕೆ.ಎಮ್‌.ಶಿವಕುಮಾರ, ಬಸವರಾಜ ಹಾಗೂ ಇತರರು ಉಪಸ್ಥಿತರಿದ್ದರು. 

------- 


ಸುದ್ದಿ ಓದಿ