ನಾಳೆ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕಾಧ್ಯಕ್ಷ್ಯೆ ಗೌರಾದೇವಿ ತಾಳಿಕೋಟಿಮಠ ಮಾಹಿತಿ
ಬೈಲಹೊಂಗಲ 21: ತಾಲೂಕಿನ ಯರಡಾಲ ಗ್ರಾಮದಲ್ಲಿ ಜ. 23 ರಂದು ತಾಲೂಕಾ 6 ನೇ ಸಾಹಿತ್ಯ ಸಮ್ಮೇಳನ ಸಡಗರದಿಂದ ಜರುಗಲಿದೆ ಎಂದು ಸಂಘಟಣೆಯ ತಾಲೂಕಾಧ್ಯಕ್ಷ್ಯೆ ಗೌರಾದೇವಿ ತಾಳಿಕೋಟಿಮಠ ಮಾಹಿತಿ ನೀಡಿದರು.
ಅವರು ಪಟ್ಟಣದ ಪತ್ರಿ ಬಸವೇಶ್ವರ ನಗರದ ಅನುಭವ ಮಂಟಪದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಯರಡಾಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶನಿವಾರ ಜರುಗುವ ದಿ. ಮುಗುಟಸಾಬ್ ಮುಲ್ಲಾ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಲಿವೆ.
ಜ. 23 ರಂದು ಮುಂಜಾನೆ 8 ಗಂಟೆಗೆ ನಿವೃತ ಶಿಕ್ಷಕ ಬಸಪ್ಪ ತಿಗಡಿ ರಾಷ್ಟ್ರ ಧ್ವಜಾರೋಹನ ನೆರವೇರಿಸಲಿದ್ದು, ಪರಿಷತ್ತ ಧ್ವಜಾರೋಹನವನ್ನು ಕಸಾಪ ಜಿಲ್ಲಾಧ್ಯಕ್ಷ್ಯೆ ಮಂಗಳಾ ಮೆಟಗುಡ್, ನಾಡಧ್ವಜಾರೋಹನವನ್ನು ಗೌರಾದೇವಿ ತಾಳಿಕೋಟಿಮಠ ನೆರವೇರಿಸಲಿದ್ದಾರೆ.
ಮುಂಜಾನೆ 8-30 ಕ್ಕೆ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ವೇ.ಮೂ.ದುಂಡಯ್ಯಸ್ವಾಮಿ ಹಿರೇಮಠ ಪೂಜೆ ನೆರವೇರಿಸಲಿದ್ದು, ಮುಂಜಾನೆ 10-30 ಕ್ಕೆ ಉದ್ಘಾಟಣಾ ಸಮಾರಂಭ ನಡೆಯಲಿದೆ. ಬೈಲಹೊಂಗಲದ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ, ನೇಗಿನಹಾಳದ ಮಡಿವಾಳೇಶ್ವರ ಮಠದ ಬಸವ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಘಣ ಅಧ್ಯಕ್ಷತೆಯನ್ನು ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ವಹಿಸಲಿದ್ದು, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗ್ರಂಥ ಲೋಕಾರ್ಪಣೆಯನ್ನು ಮಾಜಿ ಲೋಕಸಭಾ ಸದಸ್ಯ ಎಸ್.ಬಿ.ಶಿದ್ನಾಳ ಮಾಡಲಿದ್ದು, ಸಮ್ಮೇಳನಾಧ್ಯಕ್ಷತೆಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅನ್ನಪೂರ್ಣ ಕನೋಜ ವಹಿಸಲಿದ್ದಾರೆ.
ಜಿಲ್ಲಾಧ್ಯಕ್ಷ್ಯೆ ಮಂಗಳಾ ಮೆಟಗುಡ್ ಅಶಯ ನುಡಿ ಮಂಡಿಸಲಿದ್ದು, ಜಾನಪದ ಕಲಾವಿದೆ ಮಲ್ಲಮ್ಮ ಮ್ಯಾಗೇರಿ ಉಪಸ್ಥಿತರಿರುವರು. ಮಧ್ಯಾಹ್ನ 12-30 ಕ್ಕೆ ಚಿಂತನಗೋಷ್ಠಿ ನಡೆಯಲಿದ್ದು, ಬಾಲ ವಿಕಾಸ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಶಂಕರ ಹಲಗತ್ತಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಿತ್ತೂರು ಕಸಾಪ ಅಧ್ಯಕ್ಷ ಡಾ.ರಾಜಶೇಖರ ಹಲಸಗಿ ಅವರು ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣ ಮಹತ್ವ ಕುರಿತು ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 2 ಘಂಟೆಗೆ ಕವಿಗೋಷ್ಠಿ ನಡೆಯಲಿದ್ದು ಬೆಳಗಾವಿ ಲಿಂಗರಾಜ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲೆಪ್ಪನವರ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ನಾಗೇಶ ನಾಯಕ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮೋಹನ ಪಾಟೀಲ, ಕೆಎಲ್ಇ ಉಪಾಧ್ಯಕ್ಷ ಬಸವರಾಜ ತಟವಾಟಿ ಆಗಮಿಸಲಿದ್ದು ಹಲವಾರು ಕವಿಗಳು ಕವನ ವಾಚನ ಮಾಡಲಿದ್ದಾರೆ.
ಸಾಯಂಕಾಲ 4ಘಂಟೆಗೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನ ನಡೆಯಲಿದ್ದು, ಸಾಯಂಕಾಲ 5ಘಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಕಸಾಪ ಜಿಲ್ಲಾಧ್ಯಕ್ಷ್ಯೆ ಮಂಗಳಾ ಮೆಟಗುಡ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾ.ಪಂ. ಸದಸ್ಯ ಶ್ರೀಶೈಲಗೌಡಾ ಪಾಟೀಲ, ಬಸನಗೌಡಾ ಪಾಟೀಲ, ಎಸ್ಡಿಎಂಸಿ ಅದ್ಯಕ್ಷ ಮಂಜುನಾಥ ರಾಜಗೋಳಿ, ನಿವೃತ ಶಿಕ್ಷಕ ನಾಗಪ್ಪ ಬೈಲಪ್ಪನವರ, ನಾಗಪ್ಪ ಹಟ್ಟಿಹೊಳಿ, ಬಿ.ಡಿ.ಬನಶೆಟ್ಟಿ, ಪ್ರೇಮಕ್ಕ ಅಂಗಡಿ, ರಾಜು ಕುಲಕರ್ಣಿ, ಎಸ್.ಕೆ.ಸಂಪಗಾಂವಿ, ಕಜಾಪ ತಾಲೂಕಾ ವಕ್ತಾರ ಮಹಾಂತೇಶ ರಾಜಗೋಳಿ ಇದ್ದರು.