ಬಳ್ಳಾರಿ

ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆ ರಾಜ್ಯ ಘಟಕ ಅಸ್ತಿತ್ವಕ್ಕೆ

ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆ ರಾಜ್ಯ ಘಟಕ ಅಸ್ತಿತ್ವಕ್ಕೆ

ಬಳ್ಳಾರಿ:  ಕರ್ನಾಟಕದಲ್ಲಿರುವ ವಿಪ್ರರ ರಾಜಕೀಯ ಜಾಗೃತಿ ಸಂಘಟನೆ ಹಾಗೂ ಇಚ್ಛಾಶಕ್ತಿಯನ್ನು ವೃದ್ಧಿಸುವದಕ್ಕಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆ ರಾಜ್ಯ ಘಟಕದ ಸ್ಥಾಪನೆಯನ್ನು ಬೆಂಗಳೂರಿನ ಬಸವನಗುಡಿಯ ಸ್ತ್ರೀ ಸತ್ಯ ಪ್ರಮೋದ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ಕೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಹಿನ್ನಡೆ ಅನುಭವಿಸುತ್ತಿರುವದರಿಂದ, ರಾಜಕೀಯ ಪ್ರಜ್ಞೆ ಮೂಡಿಸಿ ಇಚ್ಛಾಶಕ್ತಿಯನ್ನು ಬೆಳೆಸಿ ಸಂಘಟನಾತ್ಮಕವಾಗಿ, ಪಕ್ಷಾತೀತವಾಗಿ ಮುಂದೆ ಬರಲು ಸಹಕರಿಸುವ ಉದ್ದೇಶದಿಂದ ರಾಜ್ಯ ಘಟಕ ಸ್ಥಾಪನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆಗೆ ರಾಜ್ಯ ಸಮಿತಿಯನ್ನು ರೂಪಿಸಲಾಯಿತು. ಸಮಿತಿಯ ರಾಜ್ಯ ಗೌರವಾಧ್ಯಕ್ಷರಾಗಿ ಜಿ ಆರ್ ಪ್ರದೀಪ್, ರಾಜ್ಯ ಅಧ್ಯಕ್ಷರಾಗಿ ವಿ ರಾಘವೇಂದ್ರ ಮಯ್ಯ, ರಾಜ್ಯ ಉಪಾಧ್ಯಕ್ಷರಾಗಿ  ರಾಘವೇಂದ್ರ ಅಲಗೂರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ, ಕರಿ ಗಿರೀಶ್, ಕೆ ಮೂರ್ತಿ, ರಾಜ್ಯ ಕಾರ್ಯದರ್ಶಿಯಾಗಿ ಕೆ ಎನ್ ಮೂರ್ತಿ, ರಾಜ್ಯ ಖಜಾಂಜಿ ಶ್ರೀ ಆರ್ ಪ್ರದೀಪ್, ರಾಜ್ಯ ಸಂಘಟನಾ ಕಾರ್ಯದರ್ಶಿ, ವಿನುತಾ ಕುಮಾರ್, ಎಸ್ ಜೋಶಿ. ಇವರನ್ನು ಆಯ್ಕೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆ ವತಿಯಿಂದ, ನೀವು ಇರುವಡೆ ನಮ್ಮ ನಡೆ  ಎಂಬ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಸಭೆಯಲ್ಲಿ ಒಕ್ಕೂರಲಿನ ನಿರ್ಣಯ ತೆಗೆದುಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು, ಹಿರಿಯರು, ಮುಖಂಡರು, ಮಹಿಳೆಯರು, ಹಾಗೂ ಯುವಕರು ಉಪಸ್ಥಿತರಿದ್ದರು 

ಸುದ್ದಿ ಓದಿ