ಬಳ್ಳಾರಿ

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಅಧ್ಯಕ್ಷ ಅಲ್ಲಮಪ್ರಭು

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಅಧ್ಯಕ್ಷ  ಅಲ್ಲಮಪ್ರಭು

ಬಳ್ಳಾರಿ 07: ರಂದು ಬಿಲ್ಡಿಂಗ್ ಬಾಲಾಜಿ ರಾವ್ ರಸ್ತೆ ವಡ್ಡರ ಬಂಡೆಯಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ವತಿಯಿಂದ  ಕಾರ್ಯಕ್ರಮ ನಡೆಯಿತು. ಎನ್‌.ಸಿ.ಆರಿ​‍್ಪ ಇತ್ತೀಚೆಗೆ ಹತ್ತನೇ, 11ನೇ ಹಾಗೂ 12ನೇ ತರಗತಿಗಳ ಇತಿಹಾಸ, ಪೌರಶಾಸ್ತ್ರ ಹಾಗೂ ರಾಜ್ಯಶಾಸ್ತ್ರದ ಕೆಲವು ಮುಖ್ಯವಾದ ಪಾಠಗಳನ್ನು ತೆಗೆದು ಹಾಕಿದೆ.ಈ ಕೆಲಸವು ಕೇವಲ ರಾಜಕೀಯ ಪ್ರಚೋದನೆಯಿಂದ ಕೂಡಿದೆ ಹೊರತು ಯಾವುದೇ ಶೈಕ್ಷಣಿಕ ಮಹತ್ವದಿಂದಲ್ಲ. ಇದನ್ನು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ಖಂಡಿಸುತ್ತದೆ ಮತ್ತು ಕೂಡಲೇ ತೆಗೆದಿರುವ ಎಲ್ಲಾ ಪಾಠಗಳನ್ನು ಆಗ್ರಹ ಮಾಡುತ್ತದೆ. ಸಮಯದಲ್ಲೂ ಸೇರೆ​‍್ಡಗೊಳಿಸಬೇಕೆಂದು ಕೂಡ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ  ಎನ್‌.ಸಿ.ಇ.ಆರಿ​‍್ಟ.ಯು ಕೇಂದ್ರ ಬಿಜೆಪಿ ಸರ್ಕಾರದ ಒತ್ತಡದಿಂದ ಇತಿಹಾಸ, ಪೌರಶಾಸ್ತ್ರ ಮತ್ತು ವಿಜ್ಞಾನದ ಪಠ್ಯಪುಸ್ತಕಗಳಲ್ಲಿ ಕೆಲವು ಪಾಠಗಳನ್ನು ತೆಗೆದುಹಾಕಿತ್ತು. ಈಗ ಮತ್ತೊಮ್ಮೆ ಪಠ್ಯಪುಸ್ತಕಗಳ ಪರಿಷ್ಕರಣೆ ಹೆಸರಿನಲ್ಲಿ ಮೊಘಲ್ ಕಾಲದ ಇತಿಹಾಸವನ್ನು ಇತಿಹಾಸ ಪಠ್ಯಪುಸ್ತಕಗಳಿಂದ ಸಂಪೂರ್ಣವಾಗಿ ತೆಗೆದು ಹಾಕಿದೆ. ಅದೇ ರೀತಿ 12ನೇ ತರಗತಿಯ ’ಸ್ವಾತಂತ್ರದ ನಂತರ ಭಾರತದಲ್ಲಿ ರಾಜಕೀಯ’,’ ಜನಪ್ರಿಯ ಚಳುವಳಿಗಳ ಉದಯ’ ಮತ್ತು ’ಒಂದು ಪಕ್ಷದ ಪ್ರಾಬಲ್ಯದ ಯುಗ’ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ. ಇವೆಲ್ಲದರ ಜೊತೆಗೆ, ’ವಿಶ್ವ ರಾಜಕೀಯದಲ್ಲಿ ಅಮೇರಿಕಾದ ಪ್ರಾಬಲ್ಯ’ ಮತ್ತು ’ಶೀತಲ ಸಮರದ ಯುಗ’ದ0ತಹ ಅಧ್ಯಾಯಗಳನ್ನು ಪೌರಶಾಸ್ತ್ರದ ಪಠ್ಯಕ್ರಮದಿ0ದ ತೆಗೆದುಹಾಕಲಾಗಿದೆ.

ಪಠ್ಯಪುಸ್ತಕಗಳ ಪರಿಷ್ಕರಣೆ ಹೆಸರಿನಲ್ಲಿ ಪುಸ್ತಕಗಳ ಕೇಸರಿಕರಣ ನಡೆಯುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನದ ಹೆಸರಿನಲ್ಲಿ ಪಠ್ಯಪುಸ್ತಕಗಳಲ್ಲಿದ್ದ ಜಾತ್ಯಾತೀತತೆ. ವಿಷಯಗಳನ್ನೆಲ್ಲಾ ಪಠ್ಯಪುಸ್ತಕದಿಂದ ನಿಧಾನವಾಗಿ ತೆಗೆದುಹಾಕಲಾಗಿದೆ. ಪ್ರಜಾಸತ್ಯಾತ್ಮಕ, ವೈಜ್ಞಾನಿಕಬಿಜೆಪಿ ಸರ್ಕಾರವು ಒಂದೆಡೆ ಜನವಿರೋಧಿ ನೀತಿಗಳನ್ನು ಎಲ್ಲಾ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳುತ್ತಿರುವುದರಿಂದ ಮತ್ತೊಂದೆಡೆ ಜನರಲ್ಲಿ ಮೂಡುತ್ತಿರುವ ಅಸಮಾಧಾನವನ್ನು ಮೌನವಾಗಿಸಿ ಹತ್ತಿಕ್ಕುತ್ತಿರುವುದರಿಂದ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ’, ’ಜನಪ್ರಿಯ ಹೋರಾಟಗಳು ಮತ್ತು ಚಳುವಳಿಗಳು’ ಮತ್ತು ’ಸವಾಲುಗಳು’ ಪಾಠಗಳನ್ನು ಪಠ್ಯಕ್ರಮದಲ್ಲಿ ತೆಗೆದು ಹಾಕುವುದರಿಂದ ಅವರಿಗೆ ಅನಾನುಕೂಲವಾಗಿದೆ. ಹಾಗಾಗಿ ಈ ಅಧ್ಯಾಯಗಳನ್ನು 10ನೇ ತರಗತಿಯ ’ಡೆಮಾಕ್ರಟಿಕ್ ಪಾಲಿಟಿಕ್ಸ್‌-ರ’ ಪಠ್ಯಪುಸ್ತಕದಿಂದ ಕೈಬಿಡಲಾಗಿದೆ.ಹೀಗಾಗಿ, ಪಠ್ಯಕ್ರಮದ ಬದಲಾವಣೆಗಳ ಮೂಲಕ, ಆಳ್ವಿಕರು ಯುವ ಮನಸ್ಸುಗಳಿಗೆ ಕೋಮು ಚಿಂತನೆಯೊಂದಿಗೆ ತರಬೇತಿ ನೀಡಲು ಮತ್ತು ಜನರಲ್ಲಿ ವೈಚಾರಿಕ ಮನೋಭಾವವನ್ನು ಬೆಳೆಸುವ ಮಾರ್ಗದಲ್ಲಿ ತಡೆಯೊಡ್ಡಲು ಬಯಸುತ್ತಾರೆ. ಈ ಫ್ಯಾಸಿಸ್ಟ್‌ ವಿನ್ಯಾಸವನ್ನು ನಮ್ಮ ದೇಶದ ಎಲ್ಲಾ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಶಕ್ತಿಗಳು ವಿರೋಧಿಸಬೇಕು.ವಿನಾಶಕಾರಿ ಜನವಿರೋಧಿ ಅನುಷ್ಠಾನದ ವಿರುದ್ಧ ಶಕ್ತಿಯುತವಾದ ಚಳುವಳಿಗಳನ್ನು ಬೆಳೆಸಲು ಎಲ್ಲಾ ಶಿಕ್ಷಣ ಪ್ರೇಮಿಗಳಿಗೆ ಅಖಿಲ ಭಾರತ ಶಿಕ್ಷಣ ಉಳಿಸುವ ಸಮಿತಿಯು ಕರೆ ನೀಡುತ್ತದೆ. ಈ ಸಂದರ್ಭದಲ್ಲಿ  ಅಲ್ಲಮ ಪ್ರಭು ಬೆಟ್ಟದೂರು,ನಾಗರತ್ನ ಎಸ್ ಜಿ ಪರವಾಗಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಸಂಸ್ಥೆಯ ಸದಸ್ಯರು ಇತರರು ಭಾಗವಹಿಸಿದ್ದರು 


ಸುದ್ದಿ ಓದಿ