ಬಳ್ಳಾರಿ

ಅಕ್ಕಿನೇನಿ ನಾಗೇಶ್ವರರಾವ್ ಶತ ಜಯಂತಿ ಆಚರಣೆ ಕಾರ್ಯಕ್ರಮ

ಅಕ್ಕಿನೇನಿ ನಾಗೇಶ್ವರರಾವ್ ಶತ ಜಯಂತಿ ಆಚರಣೆ ಕಾರ್ಯಕ್ರಮ

 ಬಳ್ಳಾರಿ : ನಗರದ ಸಂಗಮ ವೃತ್ತದ ಬಳಿ ಇರುವ ರಾಘವ ಕಲಮಂದಿರದಲ್ಲಿ ಅಕ್ಕಿನೇನೇ ನಾಗೇಶ್ವರರಾವ್ ರವರ ಜಯಂತಿಯನ್ನು ಆಚರಣೆ ಸೆ.21ರಂದು ಮಾಡಲಾಯಿತು. 

ಈ ಕಾರ್ಯಕ್ರಮದಲ್ಲಿ  ಕೆ ಕೋಟೆಶ್ವರ ರಾವ್ ರವರು  ಸಮತಾ ಸಾಹಿತಿ ಟ್ರಸ್ಟ್ (ರಿ) ಬಳ್ಳಾರಿವತಿಯಿಂದ ಹಮ್ಮಿಕೊಂಡಿದ್ದ ಅಕ್ಕಿನೇನಿ ನಾಗೇಶ್ವರ ರಾವ್ ರವರ ಶತ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿದರು.

 ನಂತರ  ಮಾತನಾಡಿದ ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ ಅಧ್ಯಕ್ಷ  ಕೋಟೆಶ್ವರ ರಾವ್ ರವರು ತೆಲುಗು ಚಿತ್ರರಂಗದಲ್ಲಿ ಧ್ರುವತಾರೆಯಾಗಿ ಮೆರೆದವರು ಅಕ್ಕಿನೇನಿ ನಾಗೇಶ್ವರರಾವ್ ರವರು ಪ್ರಮುಖ ವ್ಯಕ್ತಿಯಾಗಿದ್ದಾರೆ, ಹಾಗೂ ಹಳ್ಳಿಯಲ್ಲಿ ಜೀವನ ನಡೆಸಿ ನಾಲ್ಕು ತರಗತಿ ವಿದ್ಯಾಬ್ಯಾಸ ಮಾಡಿ ತೆಲುಗು ಸಿನಿಮಾದಲ್ಲಿ ಅದ್ಬುತ ನಟಿಸಿ ಹೀರೋ ಎನಿಸಿಕೊಂಡರು.ಅವರ ದಿನನಿತ್ಯದಲ್ಲಿ ಆಗುವಂತಹ ಆಗುಹೋಗುಗಳ ಜೀವನ ಚರಿತ್ರೆ ಸ್ಮರಿಸಿಕೊಂಡರು.

ರಾಘವ ಮೆಮೋರಿಯಲ್ ಅಸೋಸಿಯೇಷನ್ ಕಾರ್ಯದರ್ಶಿ  ಎನ್ ಪ್ರಕಾಶ್ ಅವರು ಅಕ್ಕಿನೇನಿ ನಾಗೇಶ್ವರರಾವ್ ಅವರ ಹೆಸರಿನಲ್ಲಿ ಕಳಾ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ನುಡಿದರು.ಟ್ರಸ್ಟ್ ಅಧ್ಯಕ್ಷ  ಕೆ ಸುರೇಂದ್ರ ಬಾಬುರವರು ಅಕ್ಕಿನೇನಿ ನಾಗೇಶ್ವರರಾವ್ ಅವರಂತೆ ನಟನೆ ಮಾಡಿದರು, ಹಾಗೂ ಅವರು ಜೀವನ ಚರಿತ್ರೆ ಸ್ಮರಿಸಿಕೊಂಡರು.ವೇದಿಕೆ ಮೇಲೆ ತೆಲುಗು ಸಂಸ್ಕೃತಿ ಸಂಘದ ಅಧ್ಯಕ್ಷ  ಗಾದೆಂ ಗೋಪಾಲ್ ಕೃಷ್ಣ, ಉಪಸ್ಥಿತರಿದ್ದರು.ಈ ಟ್ರಸ್ಟ್ ವತಿಯಿಂದ ರಮೇಶ್ ಗೌಡ ಪಾಟೀಲ್  ಎಂ. ರಾಮಾಂಜಿನೆಯಲು  ಇವರಿಗೆ ಅಕ್ಕಿನೇನಿ ಕಳಾ ಪ್ರಶಸ್ತಿ ಪ್ರದಾನ ಮಾಡಲಾಯಿತು.ತರುವಾಯ  ಕಾಳಿದಾಸ ಮತ್ತು ವಲಿ ಅಕ್ಕಿನೇನಿ ಸಿನಿಮಾ ಪದಗಳನ್ನು ಅದ್ಬುತವಾಗಿ ಹಾಡಿದರು.

   ಜಿ ಆರ್ ವೆಂಕಟೇಶಲು  ಜೆ ಪ್ರಭಾಕರ, ವೆಂಕಟೇಶ್, ಲಾಲ್ ರೆಡ್ಡಿ, ರಮೇಶ್ ರೆಡ್ಡಿ,ಮಾದವಿ ಲತಾ, ರಾಜಸಿಂಹ, ಎನ್ ಬಸವರಾಜ್, ಅಡವಿ ಸ್ವಾಮಿ, ರಮಣಪ್ಪ ಭಜಂತ್ರಿ ಹಾಗೂ ಕಲಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಿ ಕಾರ್ಯಕ್ರಮ ಮಟುಕು ಗೂಳಿಸಿದರು 

ಸುದ್ದಿ ಓದಿ