ರಾಷ್ಟ್ರೀಯ

ರೈತರ ವಿರುದ್ಧ ಪಿತೂರಿ ನಡೆಸುತ್ತಿರುವ ಬಿಜೆಪಿ ಕೊನೆಗೊಳ್ಳಲಿದೆ: ಅಖಿಲೇಶ್

ರೈತರ ವಿರುದ್ಧ ಪಿತೂರಿ ನಡೆಸುತ್ತಿರುವ ಬಿಜೆಪಿ ಕೊನೆಗೊಳ್ಳಲಿದೆ: ಅಖಿಲೇಶ್

ಲಖನೌ, ಡಿ 01: ಪ್ರತಿಪಕ್ಷಗಳು ರೈತರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂಬ ಪ್ರಧಾನಿ ಮೋದಿಯವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್, ಕೃಷಿ ಕಾನೂನುಗಳ ಸೋಗಿನಲ್ಲಿ ಭೂಮಿಯನ್ನು ಕಸಿದುಕೊಳ್ಳುವವರ ಸಂಚನ್ನು ಅನ್ನದಾತರು ಅರ್ಥಮಾಡಿಕೊಂಡಿದ್ದಾರೆ. ರೈತ ಬಿಜೆಪಿ ಸರ್ಕಾರವನ್ನು ಕಿತ್ತುಹಾಕುತ್ತಾನೆ ಎಂದು ಹೇಳಿದ್ದಾರೆ.

ಈ ಕುರಿತು ಮಂಗಳವಾರ ಟ್ವೀಟ್ ಮಾಡಿದ್ದು, "ಕೃಷಿ ಮತ್ತು ಬೇಸಾಯ ಮಾಡುವವರ ಆದಾಯವನ್ನು ದ್ವಿಗುಣಗೊಳಿಸುವ ಹೆಸರಿನಲ್ಲಿ ಕೃಷಿ ಕಾನೂನುಗಳ ಸೋಗಿನಲ್ಲಿ ಭೂಮಿಯನ್ನು ಕಸಿದುಕೊಳ್ಳುವ ಸಂಚನ್ನು ಅರ್ಥಮಾಡಿಕೊಳ್ಳುತ್ತಾರೆ. "ನಾವು ನಮ್ಮ ರೈತ ಸಹೋದರರೊಂದಿಗೆ ಹೋರಾಡುತ್ತೇವೆ, ಇದರಿಂದ ಎಂಎಸ್ಪಿ, ಮಾರುಕಟ್ಟೆ ಮತ್ತು ಕೃಷಿಯನ್ನು ಉಳಿಸಲಾಗುವುದು.  ಬಿಜೆಪಿ ಮುಗಿಯುವ ಸಮಯ ಬಂದಿದೆ" ಎಂದು ಅವರು ಹೇಳಿದ್ದಾರೆ.

ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಯಲ್ಲಿ ಹೊಸ ಕೃಷಿ ಕಾನೂನುಗಳ ಬಗ್ಗೆ ಪ್ರತಿಪಕ್ಷಗಳು ರೈತರ ದಾರಿತಪ್ಪಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆರೋಪಿಸಿದ್ದರು ಮತ್ತು ದಶಕಗಳಿಂದ ನಿರಂತರವಾಗಿ ರೈತರನ್ನು ಮೋಸ ಮಾಡುವವರು ಪಿತೂರಿ ನಡೆಸುತ್ತಿದ್ದಾರೆ. ಆದರೆ, ಅವರ ನಿಜರೂಪ ದೇಶದ ಮುಂದೆ ಹೊರಬರುತ್ತಿದೆ ಎಂದು ಹೇಳಿದ್ದರು.

ಸುದ್ದಿ ಓದಿ