ಬಳ್ಳಾರಿ

ಏಪ್ರಿಲ್ 6ರಂದು ಜಂಗಮರಿಗೆ ಅಯ್ಯಾಚಾರ ಶಿವದೀಕ್ಷೆ ಕಾರ್ಯಕ್ರಮ

ಏಪ್ರಿಲ್ 6ರಂದು ಜಂಗಮರಿಗೆ ಅಯ್ಯಾಚಾರ ಶಿವದೀಕ್ಷೆ ಕಾರ್ಯಕ್ರಮ

ಬಳ್ಳಾರಿ 30:  ನಗರದಲ್ಲಿ ಗುಗ್ಗರಹಟ್ಟಿಯ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ಸುಕ್ಷೇತ್ರ ಶಿವದೀಕ್ಷಾ ಮಂದಿರದಲ್ಲಿ ಏಪ್ರಿಲ್ 6 ರಂದು ಜಂಗಮರಿಗೆ ಅಯ್ಯಾಚಾರ ಶಿವದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಇದಕ್ಕೂ ಮುನ್ನ ಪ್ರತಿವರ್ಷದ ಪದ್ಧತಿಯಿಂತೆ ಮಾರ್ಚ್‌ 27ರಿಂದಲೇ ಪ್ರತಿದಿನ ಬೆಳಿಗ್ಗೆ 6 ರಿಂದ 8ರವರೆಗೆ ಇಷ್ಟಲಿಂಗ ಮಹಾಪೂಜೆ, ಸಂಜೆ 6-30ರಿಂದ 8-30ರವರೆಗೆ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಪ್ರವಚನ, ಪೂಜ್ಯರಿಂದ ಆಶೀರ್ವಚನ ನೆರವೇರಿಸಲಾಗುತ್ತಿದೆ.  

ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಕೃಪಾಶೀರ್ವಾದದಿಂದ ನಡೆಯುತ್ತಿರುವ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ಪಾಲ್ಗೊಂಡು ಕೃತಾರ್ಥರಾಗಬಹುದು. ಹರಗಿನದೋಣಿಯ ಷ.ಬ್ರ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಂಕಲ್ಪದಂತೆ ಪ್ರತಿವರ್ಷದ ಯುಗಾದಿಯಂದು ಹೊಸ ವರ್ಷವನ್ನು ಧರ್ಮದ ಸೇವೆಯಿಂದಲೇ ಪ್ರಾರಂಭಿಸಲು ಗುಗ್ಗರಹಟ್ಟಿ ಶಿವದೀಕ್ಷ ಮಂದಿರ ಸರ್ವ ಸದ್ಭಕ್ತರ ಕಾರ್ಯತತ್ಪರತೆಯ ಸುಕಾರ್ಯಕ್ಕೆ ಸರ್ವಪೂಜ್ಯರ ಅನುಗ್ರಹದಿಂದ ಹಾಗೂ ಹರಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಇಷ್ಟಲಿಂಗ ಮಹಾಪೂಜೆ, ಪುರಾಣ ಪ್ರವಚನ ಹಾಗೂ ಆಶೀರ್ವಚನ ನೆರವೇರಲಿವೆ.ಜಗದ್ಗುರು ಮರುಳಸಿದ್ಧ ಶಿವಾಚಾರ್ಯ ಭಗವತ್ಪಾದರ ಶಿಷ್ಯರಾದ ಮಸೀದಿಪುರದ ಶಾಸ್ತ್ರಿ ಎಂ.ಸಿದ್ಧರಾಮಗೌಡ ಇವರು ಪ್ರವಚನ ನೀಡುವರು. ಡಾ.ಪಂ.ಪುಟ್ಟರಾಜ ಕವಿಗವಾಯಿಗಳ ಶಿಷ್ಯರಾದ ಕೆ.ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಸಂಗೀತ ಮತ್ತು ಪುರಾಣ ವಾಚನ, ದೇವಲಾಪುರದ ಡಿ.ವಿರೂಪಾಕ್ಷಪ್ಪ ತಬಲ ಸಾಥ್ ನೀಡಲಿದ್ದು, ಗುಗ್ಗರಹಟ್ಟಿಯ ಎಂ.ಎನ್‌.ಕೊಟ್ರೇಶ ಸ್ವಾಮಿ ನಿರೂಪಿಸಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಸದ್ಭಕ್ತರಿಗೆ ಪ್ರತಿದಿನ ಅನ್ನದಾಸೋಹ ಕಾರ್ಯಕ್ರಮವೂ ಇರುತ್ತದೆ. ಸದ್ಭಕ್ತರು ಪಾಲ್ಗೊಂಡು ತ್ರಿಕರಣಪೂರ್ವಕ ಸೇವೆ ಸಲ್ಲಿಸಿ, ಶ್ರೀಶೈಲ ಭ್ರಮರಾಂಬ ಮಲ್ಲಿಕಾರ್ಜುನಸ್ವಾಮಿ ಹಾಗೂ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಶೈಲ ಭ್ರಮರಾಂಬ ಮಲ್ಲಿಕಾರ್ಜುನಸ್ವಾಮಿ ಶಿವದೀಕ್ಷಾ ಮಂದಿರದ ಧರ್ಮಾಧಿಕಾರಿಗಳಾದ ಕೆ.ರಾಜಶೇಖರಗೌಡ ದಂಪತಿಗಳು ಹಾಗೂ ಸದ್ಭಕ್ತರು ತಿಳಿಸಿದ್ದಾರೆ. 


ಸುದ್ದಿ ಓದಿ