ಬೈಲಹೊಂಗಲ

ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ

ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ

ಬೈಲಹೊಂಗಲ 12: ಸಾರಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಪರಿಸರ ಮಾಲಿನ್ಯ ನಿಯಂತ್ರಿಸಬಹುದಾಗಿದೆ ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಧರ್ಮರಾಜ ಪವಾರ ಹೇಳಿದರು.

ಪಟ್ಟಣದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ನಡೆದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮದಲ್ಲಿ ವಾಹನ ಸವಾರರಿಗೆ ತಿಳುವಳಿಕೆ ನೀಡಿ ಅವರು ಮಾತನಾಡಿ, ವಾಯು ಮಾಲಿನ್ಯ ನಿಯಂತ್ರಣಕ್ಕೆ ವಾಹನ ಮಾಲಿಕರು, ಸಾರ್ವಜನಿಕ ಸಹಕಾರ ಅಗತ್ಯವಿದೆ. ಕೋವಿಡ್ 19 ಹಿನ್ನಲೆಯಲ್ಲಿ 3 ತಿಂಗಳುಕಾಲ ದೇಶಾದ್ಯಂತ ಲಾಕ್ ಡೌನ್ ಮಾಡಿದ್ದರಿಂದ ನೈಸರ್ಗಿಕವಾಗಿ ಉತ್ತಮ ವಾತಾವರಣ ಸೃಷ್ಠಿಯಾಗಿದೆ. ಮುಂದಿನ ದಿನಗಳಲ್ಲಿ ಉತ್ತಮವಾದ ಗಾಳಿ ಲಭ್ಯವಾಗಬೇಕಾದರೆ ವಾಹನ ಸವಾರರ, ಸಾರ್ವಜನಿಕರ ಸಹಕಾರ ಅವಶ್ಯವಿದೆ. ವಾಹನಗಳು ಹೊರಗೆ ಬಿಡುವ ಹೊಗೆಯಲ್ಲಿ ವಿಷ ಅನಿಲ ಇರುವುದರಿಂದ ಸಾರ್ವಜನಿಕರ ಆರೋಗ್ಯ ಕಾಪಾಡಲು ವಾಹನಗಳನ್ನು ಪ್ರತಿ ತಿಂಗಳು ತಪಾಸಣೆ ಮಾಡಿಸಿಕೊಂಡು ಸುಸ್ಥಿತಿಯಲ್ಲಿಡಬೇಕು ಎಂದರು.

ಅಧಿಕ್ಷಕ ಅವಿನಾಶ ಕಾವೇರಿ, ಶ್ರೀಧರ ಮೂರ್ತಿ, ಸಿಬ್ಬಂದಿ ಇದ್ದರು. 

ಸುದ್ದಿ ಓದಿ