ಸಮುದ್ರದಲ್ಲಿ ಪತನಗೊಂಡ ವಾಯುಪಡೆ ಮಿಗ್ -29 ಕೆ ತರಬೇತಿ ಯುದ್ದ ವಿಮಾನ
ನವದೆಹಲಿ,
ನವೆಂಬರ್ 27: ಅರಬ್ಬಿ ಸಮುದ್ರದಲ್ಲಿ
ವಾಯುಪಡೆ ಮಿಗ್ -29 ತರಬೇತಿ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ. ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಸಮುದ್ರಕ್ಕೆ
ಬಿದ್ದಿದ್ದು, ಒಬ್ಬ ಪೈಲಟ್ ಮಾಹಿತಿ ಲಭ್ಯವಾಗಿಲ್ಲ ಪೈಲೆಟ್ ಗಾಗಿ ನೌಕಾಪಡೆ ಅಧಿಕಾರಿಗಳು ಇನ್ನೂ ಶೋಧನೆ ಮುಂದುವರಿಸಿದ್ದಾರೆ.
ಗೋವಾ ದಲ್ಲಿರುವ ಐಎನ್‌ಎಸ್ ಹನ್ಸಾದಿಂದ ಹಾರಾಟ ಆರಂಭಿಸಿದ ಮಿಗ್ -29 ಕೆ ವಿಮಾನ ಇದ್ದಂಕ್ಕಿಂದ್ದಂತೆಯೇ ಅಪಘಾತಕ್ಕೀಡಾಗಿದೆ. ಅಪಘಾತದ ಬಗ್ಗೆ ತನಿಖೆಗೆ ನೌಕಾಪಡೆಯ ಅಧಿಕಾರಿಗಳು ಆದೇಶಿಸಿದ್ದಾರೆ. ಮಿಗ್ -29 ಕೆ ದೈನಂದಿನ ತರಬೇತಿ ಭಾಗವಾಗಿ ದಕ್ಷಿಣ ಗೋವಾದ ಐಎನ್‌ಎಸ್ ಹನ್ಸಾದಿಂದ ಹೊರಟಿತು. ರಕ್ಷಣಾ ಸಚಿವಾಲಯ ಪ್ರಸ್ತುತ 40 ಮಿಗ್ -29 ಕೆ ಯುದ್ಧ ವಿಮಾನಗಳನ್ನು ಹೊಂದಿದೆ. ಈ ವರ್ಷ ಮೂರನೇ ಮಿಗ್ -29 ಕೆ ವಿಮಾನ ಅಪಘಾತ ಇದಾಗಿದೆ.