ಕುಷ್ಟಗಿ

ಕೃಷಿ ಕೂಲಿಕಾರರಿಗೆ 100ದಿನ ಕೂಲಿ ದೊರೆಯುತ್ತಿಲ್ಲ: ರಾಮಕುಮಾರ್

ಕೃಷಿ ಕೂಲಿಕಾರರಿಗೆ 100ದಿನ ಕೂಲಿ ದೊರೆಯುತ್ತಿಲ್ಲ: ರಾಮಕುಮಾರ್

ಲೋಕದರ್ಶನ ವರದಿ  

ಕುಷ್ಟಗಿ 15: ಸರಕಾರದ ನಿರ್ಲಕ್ಷ್ಯ ಧೋರಣೆ ಯಿಂದ ನರೇಗಾ ಯೋಜನೆ ಅಡಿ ಕೃಷಿ ಕೂಲಿಕಾರರಿಗೆ 100 ದಿನ ಕೂಲಿ ದೊರೆಯುತ್ತಿಲ್ಲ ಇದರಿಂದ ಜೀವನ ನಡೆಸುವುದು ತುಂಬಾ ಕಷ್ಟ ಸಾಧ್ಯ ವಾಗಿದೆ ಎಂದು ಮುಂಬೈನ ಪ್ರೊಫೆಸರ್ ಹಾಗೂ ಕೇರಳದ ಯೋಜನಾ ಆಯೋಗದ ಸದಸ್ಯ ರಾಮಕುಮಾರ್ ಹೇಳಿದರು.  

ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಸಂಯೋಜಿತ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸಂಯುಕ್ತಾಶ್ರಯದಲ್ಲಿ ಗುರುವಾರ ಇಲ್ಲಿನ ಪಿ.ಸಿ.ಎಚ್ ಪ್ಯಾಲೇಸ್ ನಲ್ಲಿ ಏರಿ​‍್ಡಸಿದ್ದ ರಾಜ್ಯ ಮಟ್ಟದ ಸೈದ್ಧಾಂತಿಕ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದಿನ ಕೃಷಿ ಕೂಲಿಕಾರರ ಬದಕು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತುಂಬಾ ದುರ್ಬಲವಾಗಿದೆ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.  

ಸ್ವಾತಂತ್ರ್ಯ ನಂತರದಲ್ಲಿ ರಾಜಕೀಯ ಹಾಗೂ  ಅಧಿಕಾರಿಗಳು ಕೃಷಿ ಕೂಲಿಕಾರರ ನೀತಿ ನಿಯಮಗಳು ಮಾರಕವಾಗಿವೆ. ಭೂ ಕಾಯ್ದೆ ಸುಧಾರಣೆ ಸರ್ಮಪಕವಾಗಿ ಜಾರಿಯಾಗದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜ್ಯಾತಿ ದೌರ್ಜನ್ಯಗಳು ನಡೆಯುತ್ತಿರುವುದ ಖಂಡನೀಯ ಸಂಗತಿ ಎಂದು ಹೇಳಿದರು.  

ಲಿಂಗ ಅಸಮಾನತೆ ಯಿಂದ ಮಹಿಳೆಯರ ಹೆಸರಿನಲ್ಲಿ ಭೂಮಿ ಇಲ್ಲದಿರುವುದನ್ನು ಕೆಲವು ಪಟಭದ್ರ ಹಿತಾಶಕ್ತಿಗಳು ಮಹಿಳೆಯರ ಮೇಲೆ ಹಲ್ಲೆಗಳು ಇಂದಿಗೂ ನಡೆಯುತ್ತಿವೆ ಎಂದು ತಿಳಿಸಿದರು.  

ಕೇಂದ್ರ ಹಾಗೂ ರಾಜ್ಯ ಸರಕಾರ ನರೇಗಾ ಯೋಜನಯಲ್ಲಿ ಕೃಷಿ ಕೂಲಿಕಾರರಿಗೆ ಪ್ರತಿ ವರ್ಷ 150ಮಾನವ ದಿನ ಕೂಲಿ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೇ ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಪ್ರಮಾಣದಲ್ಲಿ ಕೂಲಿ ದೊರೆಯದ ಕಾರಣ ನಿರುದ್ಯೋಗ ತಾಂಡವಾಡುತ್ತಿದ್ದು ಸರಕಾರ ಸರ್ಮಪಕವಾಗಿ ನರೇಗಾ ಕೂಲಿ ಕೆಲಸ ನೀಡಿ ನಿರುದ್ಯೋಗವನ್ನು ಹೋಗಲಾಡಿಸಬೇಕು ಎಂದು ಮನವಿ ಮಾಡಿದರು. ಕೇರಳದ ಸರಕಾರ ಪ್ರತಿ ವರ್ಷ 1ಲಕ್ಷ ಆಶ್ರಯ ಯೋಜನೆ ಮನೆಗಳನ್ನು ಉಚಿತವಾಗಿ ನೀಡಲಾಗುತ್ತದೆ.  ಶೇಕಡಾ 97ರಷ್ಟು ಕೃಷಿ ಕೂಲಿಕಾರರಿಗೆ ಉತ್ತಮ  ಗುಣಮಟ್ಟದ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಿದ್ದಾರೆ ಎಂದು ಹೇಳಿದರು.  

ಸದ್ಯದ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ಕೂಲಿಕಾರರಿಗೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಮಾಡಿಲ್ಲ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೃಷಿ ಕೂಲಿಕಾರರ ನಿಮ್ಮ ಅಗತ್ಯ ಬೇಡಿಕೆಗಳನ್ನು ಚಳವಳಿ, ಹೋರಾಟದ ಮೂಲಕ ಈಡೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ, ಉಪಾಧ್ಯಕ್ಷ ಜಿ.ಎನ್ ನಾಗರಾಜ, ಕೃಷ್ಣೇಗೌಡ ಮಂಡ್ಯ, ಪ್ರಧಾನ ಕಾರ್ಯದರ್ಶಿ ಚಂದ್ರ​‍್ಪ ಹೊಸಕೇರಾ, ಬಸವರಾಜ ಮರಕುಂಬಿ, ಸಹ ಕಾರ್ಯದರ್ಶಿ ಕರಿಯಪ್ಪ ಅಚ್ಚೋಳಿ ಮತ್ತು ವಿವಿಧ ಜಿಲ್ಲೆಗಳಿಂದ ಕೃಷಿ ಕೂಲಿಕಾರರ ಭಾಗವಹಿಸಿದ್ದರು. 


ಸುದ್ದಿ ಓದಿ