ಭಾರತ ಸಂಸ್ಥೆಯಿಂದ ಪಟ್ಟಣದ ಅಗಸಿ ಬಾವಿ ಸ್ವಚ್ಚತಾ ಕಾರ್ಯಕ್ರಮ
ಶಿಗ್ಗಾವಿ 19: ಹಲವಾರು ದಿನಗಳಿಂದ ನೆನೆಗೂದಿಗೆ ಬಿದ್ದಿದ್ದ ಪಟ್ಟಣದ ಗಣೇಶ ವಿಸರ್ಜನೆಗೆ ಅತ್ಯಂತ ಪ್ರಮುಖ ಐತಿಹಾಸಿಕ ಭಾವಿಯಾಗಿದ್ದ ಅಗಸಿ ಬಾವಿಯು ಅಧಿಕಾರಿಗಳ ನಿರ್ಲಕ್ಷತೆಯಿಂದ ಕೂಡಿದ ಭಾವಿಯನ್ನು ಸ್ವಚ್ಚಗೋಳಿಸಲಾಯಿತು ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ಪಟ್ಟಣದ ಐತಿಹಾಸಿಕ ಅಗಸಿ ಬಾವಿಯನ್ನು ಎಲ್ಲ ಹಿರಿಯರ ನೇತೃತ್ವದಲ್ಲಿ ಸ್ವಚ್ಛ ಮಾಡಿ ಮಾತನಾಡಿದ ಅವರು ನಿರುಪಯುಕ್ತ ವಸ್ತುಗಳನ್ನು ಚಲ್ಲಿ ಕಿಟಾಣುಗಳ ತಾಣವಾಗಿ ನಿರ್ಮಾಣ ಗೊಂಡಿದ್ದ ಬಾವಿಯ ಸ್ವಚ್ಚತೆ ಕಾರ್ಯ ಅವಶ್ಯಕವಾಗಿತ್ತು ಆದ್ದರಿಂದ ಎಲ್ಲರ ನೇತೃತ್ವದಲ್ಲಿ ಸ್ವಚ್ಛ ಮಾಡಲಾಗಿ ನಂತರ ಶುಭ್ರವಾದ ಬಿಳಿ ಬಣ್ಣವನ್ನು ಹಚ್ಚಿ ಮುಂಬರುವ ಗಣೇಶ ಹಬ್ಬಕ್ಕೆ ಅನುಕೂಲವಾಗುವಂತೆ ಕಬ್ಬಿಣದ ಮೇಲ್ಚಾವಣೆ ನಿರ್ಮಿಸಿ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ನಿರ್ವಹಿಸಲು ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯರಾದ ಫಕ್ಕಿರಜ್ಜ ಯಲಿಗಾರ, ಪಕ್ಕೀರ್ಪ ಕುಂದೂರ, ಕರೆಪ್ಪ ಕಟ್ಟಿಮನಿ, ಜಗದೀಶ ಯಲಿಗಾರ, ವಿ.ಎಸ್ ಪಾಟೀಲ, ಸಿ.ವಿ ಮತ್ತಿಗಟ್ಟಿ, ಶಶಿ ಯಲಿಗಾರ, ರಮೇಶ ವನಹಳ್ಳಿ, ಸುರೇಶ ಪಟ್ಟಣಶೆಟ್ಟಿ, ಬಸವರಾಜ ಮಿರ್ಜಿ ,ನಾಗರಾಜ ಜವಾಯಿ,ಅನ್ವರ ಸಿಡೆನೂರ,ಶಿವು ಹಾವನ್ನವರ ,ಅಶೋಕ ಗಾಣಿಗೇರ,ಬಸವರಾಜ ಕುಂಬಾರ,ರವಿ ಮಡಿವಾಳರ, ಚನ್ನಪ್ಪ ಕೋರಿ, ಮಾಹಂತೇಶ ಸೂಜಿ, ಶಂಕ್ರಗೌಡ್ರ ರಾಚನಗೌಡ್ರ, ಗಂಗಾಧರ ಗೊರವರ, ಜಗದೀಶ ಬನ್ನಿಕೊಪ್ಪ, ಮುತ್ತು ಯಲಿಗಾರ, ರವಿ ಹೊನ್ನಣ್ಣವರ, ವಿಶ್ವನಾಥ ಗಾಣಿಗೇರ, ಚೇತನ ಕಲಾಲ, ಸೇರಿದಂತೆ ಹಾಗೂ ಇತರ ಯುವಕರು ಉಪಸಿತರಿದ್ದರು. ನವೀನ ಸಾಸನೂರ ಕಾರ್ಯಕ್ರಮ ನಿರ್ವಹಿಸಿದರು.