ಐದು ತಿಂಗಳ ಬಳಿಕ ಭಕ್ತರಿಗೆ ಅನಂತ ಪದ್ಮನಾಭ ಸ್ವಾಮಿ ದರ್ಶನ ಭಾಗ್ಯ
ತಿರುವನಂತಪುರ,
ಆಗಸ್ಟ್ 26: ಕೊರೋನಾ ಹಿನ್ನೆಲೆಯಲ್ಲಿ ಐದು
ತಿಂಗಳಿನಿಂದ ಮುಚ್ಚಲಾಗಿದ್ದ ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇವಾಲಯ ಬುಧವಾರ ಬೆಳಿಗ್ಗೆಯಿಂದಲೇ
ಭಕ್ತರ ದರ್ಶನಕ್ಕೆ ತೆರೆದುಕೊಂಡಿದೆ.
ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಕೊರೊನಾ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಮಾರ್ಚ್ 21ರಿಂದ ದೇವಾಲಯವನ್ನು ಬಂದ್ ಮಾಡಲಾಗಿತ್ತು. ಬೆಳಿಗ್ಗೆ 8ರಿಂದ 11ರವರೆಗೆ ದರ್ಶನ, ಸಂಜೆ 5ರಿಂದ 6.45ರವರೆಗೆ ದೀಪಾರಾಧನೆ ನಡೆಯಲಿದೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಒಂದು ದಿನ ಮುಂಚಿತವಾಗಿಯೇ ವೆಬ್ಸೈಟ್ನಲ್ಲಿ ಆನ್ಲೈನ್ ಬುಕಿಂಗ್ ಮಾಡಬೇಕು. ದೇವಾಲಯದ ಭೇಟಿ ಸಮಯದಲ್ಲಿ ಆನ್ಲೈನ್ ಬುಕಿಂಗ್ ಮಾಡಿದ ಪ್ರತಿಯ ಜೊತೆಗೆ ಆಧಾರ್ ಕಾರ್ಡ್ ತರಬೇಕು .
ಒಂದು ದಿನದಲ್ಲಿ ಗರಿಷ್ಠ 665 ಭಕ್ತರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗುವುದು. 60 ವರ್ಷ ಮೇಲ್ಪಟ್ಟ ಮತ್ತು 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ ಎಂದೂ ದೇವಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.