26 ವರ್ಷಗಳ ನಂತರ ಎನ್ ಟಿ ಆರ್ ಬಗ್ಗೆ ಗುಟ್ಟನ್ನ ಹೇಳುತ್ತಿದ್ದೇನೆ : ಲಕ್ಷ್ಮಿ ಪಾರ್ವತಿ
ಹೈದರಾಬಾದ್:ಜನೆವರಿ 18 ನಂದಮೂರಿ ತಾರಕರಾಮರಾವ್ ನಿಧನರಾದಾಗ ಅವರ ಆತ್ಮದೊಂದಿಗೆ ಮಾತನಾಡಿದ್ದೆ ಎಂದು ವೈಸಿಪಿ ನಾಯಕಿ ಲಕ್ಷ್ಮೀ ಪಾರ್ವತಿ ಹೇಳಿದ್ದಾರೆ. ಎನ್‌ಟಿಆರ್ ಅವರ 26ನೇ ಪುಣ್ಯ ತಿಥಿಯಾದ ಇದು ಎನ್‌ಟಿಆರ್ ಸಮಾಧಿ ಬಳಿ ಲಕ್ಷ್ಮೀ ಪಾರ್ವತಿ ಗೌರವ ವಂದನೆ ಸಲ್ಲಿಸಿದರು. 26 ವರ್ಷಗಳ ನಂತರ ಎನ್ ಟಿ ಆರ್ ಬಗ್ಗೆ ಗುಟ್ಟನ್ನು ಹೇಳುತ್ತಿದ್ದೇನೆ ಎಂದರು.
ಎನ್ ಟಿಆರ್ ಸತ್ತಾಗ ಅವರ ಆತ್ಮದ ಜೊತೆ ಮಾತನಾಡಿದ್ದೆ. ಜೀವಿತಾ ರಾಜಶೇಖರ್ ಅವರು ನನ್ನ ಮದ್ರಾಸಿಗೆ ಕರೆದೊಯ್ದು ಹುಡುಗಿಯೊಬ್ಬಳೊಂದಿಗೆ ಮಾತನಾಡಿಸಿದರು. ಎನ್ಟಿಆರ್ ಅವರ ಆತ್ಮವು 16 ವರ್ಷದ ಹುಡುಗಿಯನ್ನು ಪ್ರವೇಶಿಸಿದೆ ಮತ್ತು ನನ್ನೊಂದಿಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದೆ, ”ಎಂದು ಲಕ್ಷ್ಮಿ ಪಾರ್ವತಿ ಆಶ್ಚರ್ಯಕರವಾದ ಹೇಳಿಕೆ ನೀಡಿದ್ದಾರೆ.
ಇನ್ನು ಎಪಿಯಲ್ಲಿ ಎನ್‌ಟಿಆರ್ ಪ್ರತಿಮೆ ಮೇಲೆ ನಡೆದ ದಾಳಿಯ ಬಗ್ಗೆ ಮಾತನಾಡುತ್ತಾ.. ಆ ಕೆಲಸ ಯಾರೇ ಮಾಡಿದರೂ ತಪ್ಪು. ಎನ್ ಟಿಆರ್ ಪ್ರತಿಮೆ ಧ್ವಂಸ ಮಾಡಿದವರನ್ನು ಸಿಎಂ ಜಗನ್ ಬಂಧಿಸಿಲು ಆಜ್ನೆ ನೀಡಿದ್ದರು ಹಾಗೆಯೆ ಪೊಲೀಸರು ಆರೋಪಿಗಳನ್ನ ಬಂದಿಸಿದ್ದಾರೆ ಎಂದು ಲಕ್ಷ್ಮೀ ಪಾರ್ವತಿ ಹೇಳಿದ್ದಾರೆ. ದುರ್ಗಿ ಘಟನೆ ಕುರಿತು ಮಾಚರ್ಲ ಶಾಸಕ ಪಿನ್ನೆಳ್ಳಿ ರಾಮಕೃಷ್ಣಾರೆಡ್ಡಿ ಜೊತೆ ಮಾತನಾಡಿ ವಾಸ್ತವಾಂಶ ತಿಳಿದುಕೊಂಡಿದ್ದೇನೆ. ಇದೇ ವಿಚಾರವಾಗಿ ವಿರೋಧ ಪಕ್ಷಗಳಿಗೂ ಸಮಚಿತ್ತದಿಂದ ವರ್ತಿಸುವಂತೆ ಸಲಹೆ ನೀಡಿದ್ದಾರೆ. ಎನ್ ಟಿಆರ್ ತೆಲುಗು ಜನರ ಹೃದಯದಲ್ಲಿ ಅಜರಾಮರ ಎಂದು ಲಕ್ಷ್ಮೀ ಪಾರ್ವತಿ ತಿಳಿಸಿದ್ದಾರೆ.