ಬಳ್ಳಾರಿ

ಆದವಾನಿ ವೀಣಾ ಹಾಗೂ ಶ್ರೀಧರ ಹೆಗಡೆ ಅವರಿಗೆ ರಾಜ್ಯಮಟ್ಟದ "ಸಾಂಸ್ಕೃತಿಕ ಸಾರ್ವಭೌಮ ರಂಗತೋರಣ ಪ್ರದಾನ ಪುರಸ್ಕಾರ"

ಆದವಾನಿ ವೀಣಾ ಹಾಗೂ ಶ್ರೀಧರ ಹೆಗಡೆ ಅವರಿಗೆ ರಾಜ್ಯಮಟ್ಟದ "ಸಾಂಸ್ಕೃತಿಕ ಸಾರ್ವಭೌಮ ರಂಗತೋರಣ ಪ್ರದಾನ ಪುರಸ್ಕಾರ"
Advani Veena and Sridhar Hegde awarded the state-level "Sanskritika Saarvabhauma Rangathorana Pradha

ಲೋಕದರ್ಶನ ವರದಿ   

ಬಳ್ಳಾರಿ 15: ನಾಟಕಗಳು ಆಯಾ ಕಾಲಘಟ್ಟದ ಸಾಮಾಜಿಕ ಪರಿಸ್ಥಿತಿಯ ಕನ್ನಡಿ ಹಿಡಿಯುವ ಕೆಲಸ ಮಾಡುತ್ತಿದ್ದು ವರ್ತಮಾನದಲ್ಲಿ ಪ್ರಭಾವ ಬೀರುತ್ತವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು. ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ರಂಗತೋರಣ ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿದ್ದ ಕಪ್ಪಗಲ್ಲು ನಾಟಕೋತ್ಸವದಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ಆದವಾನಿ ವೀಣಾ ಹಾಗೂ ಶ್ರೀಧರ ಹೆಗಡೆ ಅವರಿಗೆ ರಾಜ್ಯಮಟ್ಟದ "ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ" ಪ್ರದಾನ ಮಾಡಿ ಅವರು ಮಾತನಾಡಿದರು.  ಮಹಾತ್ಮಗಾಂಧೀಜಿಯವರ ಮೇಲೆ ಹರಿಶ್ಚಂದ್ರ ನಾಟಕ ಪ್ರಭಾವ ಬೀರಿತ್ತು. ವ್ಯಕ್ತಿ ಅಥವಾ ಜನಸಮುದಾಯದ ಮೇಲೆ ಪ್ರಭಾವ ಬೀರುವ ಶಕ್ತಿ ರಂಗಭೂಮಿಗಿದೆ.

ನಿರಂತರ ನಾಟಕೋತ್ಸವಗಳ ಮೂಲಕ ಜನರ ಮನಸ್ಸನ್ನು ಅರಳಿಸುವ ಕೆಲಸ ಮಾಡುತ್ತಿರುವ ರಂಗತೋರಣ ಕಾರ್ಯ ಶ್ಲಾಘನೀಯ. ಗ್ರಾಮೀಣ ಪರಿಸರದಲ್ಲಿ ರಂಗಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಬೇಕು. ಆಗ ಮಾತ್ರ ಸಾಂಸ್ಕೃತಿಕ ವಾತಾವರಣವನ್ನು ಎಲ್ಲೆಡೆ ಜೀವಂತವಾಗಿಡಲು ಸಾಧ್ಯವಾಗಲಿದೆ ಎಂದರು. ಸಮಾಜದ ಅಭಿವೃದ್ಧಿಯನ್ನು ಕೇವಲ ಆರ್ಥಿಕ ಮಾನದಂಡಗಳಿಂದ ಅಳೆಯಲು ಸಾಧ್ಯವಿಲ್ಲ. ಹಣ, ಆಸ್ತಿ, ಅಧಿಕಾರ ಮತ್ತು ಭೌತಿಕ ಸೌಲಭ್ಯಗಳು ಕಾಲಕ್ರಮೇಣ ಕಳೆದುಹೋಗಬಹುದು. ಆರ್ಥಿಕ ಶ್ರೀಮಂತಿಕೆ ಏರಿಳಿತಗಳಿಗೆ ಒಳಗಾಗುವುದು ಸಹಜ. ಆದರೆ ಒಂದು ಸಮಾಜದ ನಿಜವಾದ ಗುರುತು ಅದರ ಸಂಸ್ಕೃತಿ, ಪರಂಪರೆ, ಕಲೆ, ಸಾಹಿತ್ಯ ಮತ್ತು ಮೌಲ್ಯಗಳಲ್ಲಿ ಅಡಗಿದೆ. ಇವುಗಳೇ ಆ ಸಮಾಜದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಈ ಸಾಂಸ್ಕೃತಿಕ ಸಂಪತ್ತು ಪೀಳಿಗೆಯಿಂದ ಪೀ 


ಸುದ್ದಿ ಓದಿ