ಕನಸುಗಳನ್ನು ಕಾಣುವುದೇ ಆದರೆ ದೊಡ್ಡ ಕನಸನ್ನೇ ಕಾಣಿ: ಡಾ. ರೆಡ್ಡಿ
ಚಿಕ್ಕೋಡಿ 07: ಎಲ್ಲಿ ಗುಣಮಟ್ಟತೆ ಇದೆ, ಅಲ್ಲಿ ಬೇಡಿಕೆ ಇದೆ. ಕನಸುಗಳನ್ನು ಕಾಣುವುದೇ ಆದರೆ ದೊಡ್ಡ ಕನಸನ್ನೇ ಕಾಣುವುದರಲ್ಲಿ ಸಮಸ್ಯೆ ಎನಿದೆ. ಅದನ್ನು ಪಡೆದುಕೊಳ್ಳಬೇಕೆಂದರೇ ಬದ್ಧತೆ ಮುಖ್ಯ. ನಮ್ಮನ್ನು ನಾವು ಉನ್ನತಿಕರಿಸಲೂ ಹೊಸದನ್ನು ಕಲಿಯುವುದಕ್ಕೆ ಅಳವಡಿಸಿಕೊಳ್ಳಿ. ನಮ್ಮ ಗುರಿ ಸಾಧನೆಯತ್ತ ಸಾಗುವಾಗ ಸಮಸ್ಯೆಗಳು ಎದುರಾದಲ್ಲಿ ಅವನ್ನು ಪರಿಹರಿಸುವತ್ತ ನಮ್ಮ ಚಿಂತನೆಗಳು ಹರಿಯಬೇಕು ಎಂದು ಬಿಹಾರ ಕೆಕೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವೆಂಕಟರಮನ ರೆಡ್ಡಿ ಹೇಳಿದರು.
ಇಲ್ಲಿನ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ “ಅಡ್ವಾನ್ಸಸ್ ಇನ್ ಕಾಂಕ್ರಿಟ್ ಟೆಕ್ನಾಲಾಜಿ ಫಾರ್ ಸಸ್ಟೆನೆಬಲ್ ಡೆವಲಪಮೆಂಟ್” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದು ಜನಸಂಖ್ಯೆ ಹೆಚ್ಚಿದ್ದು, ಅನೇಕ ಸವಾಲುಗಳು ಎದುರಾಗುವುದು ಸಹಜ. ಇಂಥಹ ಪರಿಸ್ಥಿತಿಯಲ್ಲಿ ಸವಾಲುಗಳನ್ನ ಮೆಟ್ಟಿ ನಿಲ್ಲುವ ಮನೋಭಾವ ಬೆಳೆಸಿಕೊಳ್ಳಿ. ವಿದ್ಯಾರ್ಥಿ ಜೀವನದಲ್ಲಿ ಅರ್ನ ವ್ಹೈಲ್ ಲರ್ನ ಪದ್ದತಿ ಅಳವಡಿಸಿಕೊಂಡರೇ ನಿಮಗೆ ನೌಕರಿ ನಿಭಾಯಿಸುವುದು ಸಹಜವಾಗುತ್ತದೆ ಎಂದರು.
ಇಂಜಿನಿಯರ್ ಬಿ. ಈ. ಢೆರಣಿ ಮಾತನಾಡಿ, ಕಾಲೇಜಿನಲ್ಲಿನ ಕಲಿಕೆಗೆ ಮತ್ತು ಉದ್ಯಯದಲ್ಲಿನ ಅಭ್ಯಾಸಕ್ಕೆ ಬಹಳ ಅಂತರವಿದ್ದು, ಅದನ್ನು ಕಡಿಮೆಗೊಳಿಸಬೇಕೆಂದರೆ ಎಲ್ಲಿ ಕಟ್ಟಡಗಳ ನಿರ್ಮಾಣವಾಗುತ್ತೊ ಅಲ್ಲಿ ದಿನಾಲೂ ಅರ್ಧ ಗಂಟೆ ಇದ್ದು ಪ್ರಾಯೋಗಿಕ ಜ್ಞಾನ ಪಡೆದುಕೊಳ್ಳಿ ಎಂದರು.
ಸಂಪನ್ಮೂಲ ವ್ಯಕ್ತಿಯಾದ ಡಾ. ಕೆ. ಬಿ. ಪ್ರಕಾಶ, ಪ್ರಾಚಾರ್ಯರು, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಹಾವೇರಿ ಮಾತನಾಡಿ ಹಿ ಆತ್ಮವಿಶ್ವಾಸ ಹೊಂದಿದರೇ ಮಾತ್ರ ವೃತ್ತಿಯಲ್ಲಿ ಯಶಸ್ವಿಯಾಗಲೂ ಸಾಧ್ಯ ಎಂದರು.
ಅಧ್ಯಕ್ಷತೆವಹಿಸಿದ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪೂರೆ ಹಿ
ಇಂದು ನಮ್ಮ ದೇಶದಲ್ಲಿ ಮೂಲಸೌಕರ್ಯಗಳ ನಿರ್ಮಾಣ ಹೆಚ್ಚುತ್ತಿರುವುದರಿಂದ ಇಂಜಿನಿಯರಗಳಿಗೆ ಸಾಕಷ್ಟು ಅವಕಾಶಗಳಿವೆ. ಉದ್ಯಮದಲ್ಲಿ ಹೊಸ-ಹೊಸ ತಾಂತ್ರೀಕತೆಯನ್ನು ದಿನದಿಂದ ದಿನಕ್ಕೆ ಅಳವಡಿಸುವ ಕಾರಣ, ನಮ್ಮ ಜ್ಞಾನವನ್ನು ಅಪಡೆಟ ಮಾಡಿಕೊಳ್ಳಬೇಕು.
ಕು. ಸ್ನೇಹಾ ಕುಂಬಾರ ಹಾಗೂ ತಂಡ ಸ್ವಾಗತಗೀತೆ ಹಾಡಿದರು.
ಸಂಯೋಜಕ ಡಾ. ಅಮರ ಚೌಗುಲೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರೊ. ವಿವೇಕ ಪಾಟೀಲ, ಪ್ರೊ. ಮಹೇಶ್ವರಿ ಬಿಸನಾಳ, ಪ್ರೊ. ಶಂಕರಗೌಡಾ ಪಾಟೀಲ ಅಥಿತಿಗಳನ್ನು ಪರಿಚಯಿಸಿದರು. ಪ್ರೊ. ಸವೀತಾ ಮಾಳಿ ನಿರೂಪಿಸಿದರು. ವಿಭಾಗ ಮುಖ್ಯಸ್ಥ ಪ್ರೊ. ಪ್ರದೀಪ ಹೊದ್ಲೂರ ವಂದಿಸಿದರು. ಸಂಪನ್ಮೂಲ ವ್ಯಕ್ತಿ ತಜ್ಞರಾದ ಡಾ. ಕೆ. ಬಿ. ಪ್ರಕಾಶ, ಡಾ. ಡಿ. ಕೆ. ಕುಲಕರ್ಣಿ, ಡಾ. ವಾಹಿನಿ ಎಮ್., ಡಾ. ಮನೋಜಕುಮಾರ ಚಿತವಾಡಗಿ, ಡಾ. ಎಮ್. ಮಂಜುನಾಥ, ಡಾ. ಎನ್ ಕೆ. ಪಾಟೀಲ, ಪ್ರಾಧ್ಯಾಪಕ ಪ್ರೊ. ಸತೀಶ ಭೊಜನ್ನವರ, ಪ್ರೊ. ಸುನೀಲ ಹೆಬ್ಬಾಳೆ, ಡಾ. ಆರ್ ಕೆ. ಪಾಟೀಲ, ಪ್ರೊ. ಅಶ್ವಿನಿ ಗವಳಿ, ಪ್ರೊ. ಬಸವರಾಜ ಚೌಕಿಮಠ, ಪ್ರೊ. ಕುಮಾರ ಚೌಗಲಾ, ಪ್ರೊ. ಸಚೀನ ಮೆಕ್ಕಳಕಿ ಉಪಸ್ಥಿತರಿದ್ದರು.