ಇಂದಿನ ಯುವಪೀಳಿಗೆ ಚನ್ನಮ್ಮನ ಆದರ್ಶ ಅಳವಡಿಸಿಕೊಳ್ಳಿ: ಸಂತೋಷ ಹಿರೇಮಠ
ಶಿಗ್ಗಾವಿ 31: ಕಿತ್ತೂರಾಣಿ ಚನ್ನಮ್ಮನ ಸ್ವಾತಂತ್ರ್ಯದ ಹೋರಾಟ ಸ್ವಾಭಿಮಾನದ ಸಂಕೇತವಾಗಿದ್ದು ಇಂದಿನ ಯುವಪೀಳಿಗೆ ಚನ್ನಮ್ಮನ ಆದರ್ಶ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ ಸಂತೋಷ ಹಿರೇಮಠ ಹೇಳಿದರು.
ಪಟ್ಟಣದ ಸಂತೆ ಮೈದಾನದಲ್ಲಿ ತಾಲೂಕಾ ಆಡಳಿತ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ತಾಲೂಕಾ ಘಟಕ, ನಗರ ಘಟಕ, ಯುವ ಘಟಕ, ಮಹಿಳಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವೀರರಾಣಿ ಕಿತ್ತೂರ ಚನ್ನಮ್ಮ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶಾಭಿಮಾನ ಮೆರೆದ ಚನ್ನಮ್ಮನ ತ್ಯಾಗ ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿ ಮತ್ತು ಶಕ್ತಿಯಾಗಬೇಕು ಎಂದರು.
ನಿವೃತ್ತ ತಹಶೀಲ್ದಾರರು, ಚಾರಿತ್ರಿಕ ಕಾದಂಬರಿಕಾರರು ಹಾಗೂ ಬೆಳಗಾವಿ ಮಾಜಿ ಜಿಲ್ಲಾ ಕಸಾಪ ಅದ್ಯಕ್ಷ ಯ ರು ಪಾಟೀಲ ಉಪನ್ಯಾಸ ನೀಡುತ್ತ ಮಾತನಾಡಿ, ಇದು ಚನ್ನಮ್ಮನ ಜಯಂತಿ ಅಲ್ಲ, ಇದು ವಿಜಯೋತ್ಸವ ಕಾರ್ಯಕ್ರಮ, ಗೊಂದಲ ಮಾಡಿಕೊಳ್ಳಬೇಡಿ, ಮುಂದಿನ ಪೀಳಿಗೆಗೆ ಒಂದು ಕಾಣಿಕೆಯನ್ನ ಚನ್ನಮ್ಮ ಕುರಿತು ನೀಡಬೇಕಿದೆ, ಇತಿಹಾಸ ತಿಳಿದರೆ ಮಾತ್ರ ಸಂಘಟನೆಯಾಗಲು ಸಾದ್ಯವಿದೆ, ಚನ್ನಮ್ಮನ ಕುರಿತು ಜಾಗೃತಿ ಮೂಡಬೇಕಾದರೆ ಇತಿಹಾಸ ಓದಬೇಕು, ಚನ್ನಮ್ಮನ ಸಂಸ್ಥಾನ ಹಾಳಾಗಿರಬಹುದು ಆದರೆ ಆ ಸಂಸ್ಥಾನದ ಪ್ರತಿಯೋಂದು ಕಲ್ಲುಗಳಲ್ಲಿ ಚನ್ನಮ್ಮನ ಶೌರ್ಯ ಮತ್ತು ಕ್ಷಾತ್ರತೇಜವನ್ನ ಕಾಣಬಹುದಾಗಿದೆ, ಕಿತ್ತೂರ ಎಂಬುದು ದೇಶಭಕ್ತಿಯ ಪ್ರತೀಕವಾಗಿದೆ ಅಂತಹ ಕಿತ್ತೂರನ್ನ ಸರಕಾರ ಅಭಿವೃದ್ದಿಪಡಿಸದೇ ಇರುವುದು ವಿಪರ್ಯಾಸವೇ ಸರಿ, ನಮಗೆ ನಮ್ಮ ನಾಡು, ನುಡಿಯ ಬಗ್ಗೆ ಬದ್ದತೆ ಮತ್ತು ಅಭಿಮಾನ ಇರಬೇಕು ಎಂದು ಮಾರ್ಮಿಕವಾಗಿ ನುಡಿದರು.
ನಿವೃತ್ತ ಶಿಕ್ಷಕ ಸಿ ವಿ ಮತ್ತಿಗಟ್ಟಿ ಪ್ರಾಸ್ತಾವಿಕ ಮಾತನಾಡಿ, ಚನ್ನಮ್ಮನವರು ಒಂದೇ ಜಾತಿಗೆ ಸೀಮಿತವಾಗಿಲ್ಲ, ಸರ್ವಸಮುದಾಯದವರು ಕೂಡಿ ಚನ್ನಮ್ಮ ಜಯಂತಿ ಆಚರಣೆ ಮಾಡೋಣ, ಕಿತ್ತೂರಾಣಿ ಚನ್ನಮ್ಮ ದೇಶದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬುದನ್ನ ಪಠ್ಯಗಳಲ್ಲಿ ಉಲ್ಲೇಖಿಸುವ ಅವಶ್ಯಕತೆ ಇದೆ ಎಂದು ಸರಕಾರವನ್ನ ಅಗ್ರಹಿಸಿದರು.
ಇದಕ್ಕೂ ಮೊದಲು ಪಟ್ಟಣದ ಚನ್ನಮ್ಮ ಸರ್ಕಲ್ನಲ್ಲಿ ಚನ್ನಮ್ಮ ಮೂರ್ತಿಗೆ ಮಾಲಾರೆ್ಣ ಮಾಡಿ ನಂತರ ಚನ್ನಮ್ಮನ ಭಾವಚಿತ್ರದ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಮುಖಂಡರಾದ ಶ್ರೀಕಾಂತ ದುಂಡಿಗೌಡ್ರು ಹಾಗೂ ಶಿವಾನಂದ ಮ್ಯಾಗೇರಿ, ರಾಜು ಕುನ್ನೂರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಂಚಮಸಾಲಿ ಸಮಾಜದ ಅಧ್ಯಕ್ಷರುಗಳಾದ ವೀರೇಶ ಅಜೂರ್, ಶಿವಾನಂದ ಬಾಗೂರ, ವಿವಿಧ ಮುಖಂಡರಾದ ಈರಣ್ಣ ನವಲಗುಂದ, ಇಓ ಪಾಲಯ್ಯನಕೋಟೆ ವಿಶ್ವನಾಥ್, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಬಿಇಓ ಎಂ ಬಿ ಅಂಬಿಗೇರ್, ಸಿದ್ದಾರ್ಥ್ಗೌಡ್ರು ಪಾಟೀಲ್, ತಿಪ್ಪಣ್ಣ ತಾತಣ್ಣನವರ, ಕೆಸಿಸಿ ಬ್ಯಾಂಕ್ ನಿರ್ದೆಶಕ ಸಂಗಮೇಶ ಕಂಬಳಿಮಠ, ಕೆಎಂಎಫ್ ನಿರ್ದೇಶಕ ಬಸನಗೌಡ ಮೇಗಲಮನಿ, ಶಂಬುಲಿಗಪ್ಪ ಆಜೂರ, ರಮೇಶ ವನಹಳ್ಳಿ, ಕು. ವಸಂತ ಬಾಗುರ, ನೀಲಮ್ಮ ವನಹಳ್ಳಿ, ಅರುಣ್ ಹೊಡೆದಗೌಡ್ರ, ದೇವಣ್ಣ ಚಾಕಲಬ್ಬಿ, ಮಂಜುನಾಥ್ ಹಾವೇರಿ, ಬಸಲಿಂಗಪ್ಪ ನರಗುಂದ, ಈರಣ್ಣ ಸಮಗೊಂಡ, ಕರಿಯಪ್ಪ ಕಟ್ಟಿಮನಿ, ಮಾಲತೇಶ ಯಲಿಗಾರ, ಫಕೀರ್ಪ ಕುಂದೂರ, ಪಕ್ಕೀರೇಶ ಕೊಂಡಾಯಿ, ಮಂಜುನಾಥ್ ಮಣ್ಣಣ್ಣವರ, ರಮೇಶ ಸಾತಣ್ಣವರ, ಗುರುನಗೌಡ ಪಾಟೀಲ್ ಸೇರಿದಂತೆ ತಾಲೂಕಿನ ಪಂಚಮಸಾಲಿ ಸಮಾಜದ ಮುಖಂಡರು ವಿವಿಧ ಸಮಾಜದ ಅಧ್ಯಕ್ಷರು ಮುಖಂಡರು ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಮಹಿಳೆಯರು ಉಪಸ್ಥಿತರಿದ್ದರು.