ಚಿಕ್ಕೋಡಿ

ಡಿಪ್ಲೋಮಾ ತರಬೇತಿ ಪ್ರವೇಶ ಆರಂಭ: ಖಾನಮೈಬುಅಲಿ

ಡಿಪ್ಲೋಮಾ ತರಬೇತಿ ಪ್ರವೇಶ ಆರಂಭ: ಖಾನಮೈಬುಅಲಿ

ಚಿಕ್ಕೋಡಿ 01: ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಡಿಪ್ಲೋಮಾ ತರಬೇತಿ ಪ್ರವೇಶ ಆರಂಭವಾಗಿವೆ. ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳು ಪ್ರವೇಶ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಕಾಲೇಜಿನ ಪ್ರಾಚಾರ್ಯ ಖಾನಮೈಬುಅಲಿ ತಿಳಿಸಿದರು.

ಚಿಕ್ಕೋಡಿ ನಗರದ ಹೊರವಲಯದಲ್ಲಿ ಇರುವ ಜಿಟಿಟಿಸಿ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸರ್ಕಾರಿ ಸ್ವಾಮ್ಯದ ಅಡಿಯಲ್ಲಿ ನಡೆಯುವ ಈ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಟೋಲ್ ಎಂಡ್ ಡೈ ಮೇಕಿಂಗ್ ಮತ್ತು ಡಿಪ್ಲೋಮಾ ಇನ್ ಮೆಕ್ಯಾಟ್ರಾನಿಕ್ಸ್ ತರಬೇತಿ ನೀಡಲಾಗುತ್ತದೆ. ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಚಿಕ್ಕೋಡಿ, ಅರಭಾವಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮೂರು ಕೇಂದ್ರಗಳು ಸ್ಥಾಪನೆಯಾಗಿವೆ ಎಂದರು. ಪ್ರಸಕ್ತ ವರ್ಷದಲ್ಲಿ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಸೀಟು ಹಂಚಿಕೆ ಮಾಡಲಾಗುತ್ತದೆ ಎಂದರು.

ಈ ತರಬೇತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಕೈಗಾರಿಕೆಗಳಲ್ಲಿ ಕಾಲೇಜು ವತಿಯಿಂದ ಕಡ್ಡಾಯವಾಗಿ ಉದ್ಯೋಗ ದೊರಕಿಸಿಕೊಡಲಾಗುತ್ತದೆ. 19-20 ನೆಯ ವಯಸ್ಸಿನಲ್ಲಿಯೇ ತಿಂಗಳಿಗೆ 12 ರಿಂದ 18 ಸಾವಿರ ರೂವರೆಗೆ ಕಂಪನಿ ತರಬೇತಿಯೊಂದಿಗೆ ಮಾಸಿಕ ವೇತನ ಸಿಗಲಿದೆ. ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಲ್ಲಿ ಅವಕಾಶಗಳು ಲಭಿಸಲಿದೆ. ವಿದೇಶಿಗಳಲ್ಲಿಯು ಕೆಲಸ ಮಾಡಲು ಅವಕಾಶ ಹೆಚ್ಚಿವೆ. ಈ ತರಬೇತಿ ಮುಗಿದ ಮೇಲೆ ಬಿಇ ವ್ಯಾಸಂಗ ಕೂಡ ಅವಕಾಶ ಇದೆ. ನಾಲ್ಕು ವರ್ಷದ ಈ ಕೋರ್ಸದಲ್ಲಿ ಮೂರು ವರ್ಷ ಅಧ್ಯಯನ ಬಳಿಕ ಒಂದು ವರ್ಷ ತರಬೇತಿ ಇರುತ್ತದೆ ಎಂದರು.

ಐಟಿಐ ಪಾಸಾದ ವಿದ್ಯಾರ್ಥಿಗಳು ನೇರವಾಗಿ ಎರಡನೆ ವರ್ಷಕ್ಕೆ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ. ಮೀಸಲಾತಿಯಡಿ ಶಿಷ್ಯವೇತನ ಕೂಡಾ ಸಿಗಲಿದೆ. ಸದ್ಯ ಚಿಕ್ಕೋಡಿ ಕಾಲೇಜಿನಲ್ಲಿ ವಸತಿ ಸಹಿತ ಮೂಲಭೂತ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದೆ. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಾಚಾರ್ಯರು ತಿಳಿಸಿದರು.

ಹೆಚ್ಚಿನ ಮಾಹಿತಿಗೆ ಮೊ-9482405201 ಮತ್ತು 9845299278ಗೆ ಸಂಪರ್ಕಿಸಬೇಕು ಎಂದು ಮನವಿ ಮಾಡಿದ್ದಾರೆ.

ಸುದ್ದಿ ಓದಿ