ಚಿಕ್ಕೋಡಿ

ಅಪಘಾತ ನಿಯಂತ್ರಣಕ್ಕೆ ರಸ್ತೆ ನಿಯಮಗಳ ಪಾಲನೆ ಅಗತ್ಯ : ಆರ್‌ಟಿಒ ವಿಶಾಲ ಜಿಪಿ ಹೇಳಿಕೆ: ರಾಷ್ಟ್ರೀಯ ಡ್ರೈವಿಂಗ್ ಶಾಲೆಯ ದಿನಾಚರಣೆ

ಅಪಘಾತ ನಿಯಂತ್ರಣಕ್ಕೆ ರಸ್ತೆ ನಿಯಮಗಳ ಪಾಲನೆ ಅಗತ್ಯ : ಆರ್‌ಟಿಒ ವಿಶಾಲ ಜಿಪಿ ಹೇಳಿಕೆ: ರಾಷ್ಟ್ರೀಯ ಡ್ರೈವಿಂಗ್ ಶಾಲೆಯ ದಿನಾಚರಣೆ

ಲೋಕದರ್ಶನ ವರದಿ 


ಚಿಕ್ಕೋಡಿ 24: ರಸ್ತೆ ಅಪಘಾತ ಪ್ರಮಾಣ ತಡೆಯಲು ವಾಹನ ಚಾಲನಾ ತರಬೇತಿ ಕಾರ್ಯ ಬಹುಮುಖ್ಯವಾಗಿದೆ. ಆದ್ದರಿಂದ ಚಾಲನಾ ತರಬೇತಿ ಪಡೆಯುವ ಚಾಲಕರಿಗೆ ಪರಿಪೂರ್ಣ ತರಬೇತಿ ನೀಡುವ ಮೂಲಕ ರಸ್ತೆ ಅಪಘಾತ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ ಎಂದು ಆರ್‌ಟಿಒ ವಿಶಾಲ ಜಿಪಿ ಹೇಳಿದರು. 

ಇಲ್ಲಿನ ಚಿಕ್ಕೋಡಿ ತಾಲೂಕಾ ಮೋಟರ ಡ್ರೈವಿಂಗ ಶಾಲೆಯ ಮಾಲಿಕರ ಅಸೋಸೆಶನ್ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಡ್ರೈವಿಂಗ್ ಶಾಲೆಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಸರ್ಕಾರ ಹೊರಡಿಸಿರುವ ರಸ್ತೆ ನಿಯಮಗಳನ್ನು ಯಾರು ಪಾಲಿಸುತ್ತಾರೇ ಅಂಥವರು ಪರಿಪೂರ್ಣವಾಗಿ ಚಾಲಕರಾಗಿ ಹೊರಹೊಮ್ಮುತ್ತಾರೆ. ರಸ್ತೆ ನಿಯಮಗಳನ್ನು ಕಡ್ಡಾಗಿ ಪಾಲಿಸಿದರೇ ಅಪಘಾತ ಪ್ರಮಾಣ ಕಡಿಮೆ ಆಗುತ್ತದೆ. ಹೀಗಾಗಿ ಮೋಟರ ಡ್ರೈವಿಂಗ ಶಾಲೆಗಳು ಚಾಲನೆಗೆ ಅವಕಾಶ ಪಡೆಯುವ ಪ್ರತಿಯೊಬ್ಬರಿಗೆ ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ತಿಳಿಹೇಳುವ ಸುಭದ್ರ ರಾಷ್ಟ್ರ ನಿರ್ಮಾಣವಾಗಲು ಕೈಜೋಡಿಸಬೇಕು ಎಂದರು.  

ಮುಖ್ಯಅತಿಥಿಗಳಾಗಿ ಅಪ್ಪಾಸಾಹೇಬ ಬ್ಯಾಳಿ, ಹಿರಿಯ ಮೋಟಾರ ನೀರೀಕ್ಷಕ ಮಹೇಶ ಹಣಮಶೇಠ, ಆರ್‌ಟಿಒ ಕಚೇರಿ ಮೇಲ್ವಿಚಾರಕ ಉಮೇಶ ಗಂಗನಹಳ್ಳಿ ಮಾತನಾಡಿದರು. 

ಈ ಸಂದರ್ಭದಲ್ಲಿ ಆರ್‌ಟಿಒ ಕಚೇರಿ ಸಿಬ್ಬಂದಿ ಗೋಪಾಲ ಕುಂಗಾರೆ. ಚಿಕ್ಕೋಡಿ ತಾಲೂಕಾ ಮೋಟರ ಡ್ರೈವಿಂಗ ಶಾಲೆಯ ಮಾಲಿಕರ ಅಸೋಸೆಶನ್  ಉಪಾಧ್ಯಕ್ಷ ನಿಯಾಜ ಬಡೆಖಾನ, ಕಾರ್ಯದರ್ಶಿ ವಿನಾಯಕ ಚೌಗಲೆ, ಖಜಾಂಚಿ ರಾಜು ಚಂದಗಡೆ, ಸದಸ್ಯರಾದ ಬಜರಂಗ ಮೋರೆ, ಸ್ವಪ್ನಿಲ ಅವಳೇಕರ, ಅಮಿತ ಬಾಳನಾಯಿಕ, ಜಾವೇದ ಘಾಲವಾಡೆ, ವಿನಾಯಕ ಮಾಳಿ, ಜ್ಯೋತಿರಲಿಂಗ ಪವಾರ, ಸಪೀ ಕಂಕಣವಾಡಿ, ಸೂರಜ ನಾರೆ  ಮುಂತಾದವರು ಇದ್ದರು. 

ಚಿಕ್ಕೋಡಿ ತಾಲೂಕಾ ಮೋಟರ ಡ್ರೈವಿಂಗ ಶಾಲೆಯ ಮಾಲಿಕರ ಅಸೋಸೆಶನ್ ಅಧ್ಯಕ್ಷ ಎಂ.ಆರ್‌.ಮುನ್ನೋಳ್ಳಿಕರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಇದಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ  ಆರ್‌ಟಿಒ ಕಚೇರಿಯವರಿಗೆ ಚಾಲನಾ ತರಬೇತಿ ವಾಹನಗಳ ರಾ​‍್ಯಲಿ ಮುಖಾಂತರ ರಸ್ತೆ ನಿಯಮಗಳ ಕುರಿತು ಜಾಗೃತಿ ಮೂಡಿಸಿದರು. ಈ ರಾ​‍್ಯಲಿಗೆ ಟ್ರಾಪಿಕ ಪಿಎಸ್‌ಐ ಎ.ಟಿ.ಅಮ್ಮಿನಬಾವಿ ಚಾಲನೆ ನೀಡಿದರು. 


ಸುದ್ದಿ ಓದಿ