ಡಾ. ಬಿ ಆರ್ ಅಂಬೇಡ್ಕರ್ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರಿ
ಲೋಕದರ್ಶನ ವರದಿ
ಶಿಗ್ಗಾವಿ 15: ನಾವು ಪ್ರತೀ ವರ್ಷ ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದರಷ್ಟೇ ಸಾಲದು ನಾವು ಬಾಬಾಸಾಹೇಬರ ತತ್ತ್ವ ಸಿದ್ದಾಂತಗಳಿಗೆ ಬದ್ದರಾಗಿರಬೇಕು ಎಂದು ಕಾ.ವಿ.ವೇದಿಕೆ ಗೌರವಾಧ್ಯಕ್ಷ ಜೀಲಾನಿ ಜಂಗ್ಲಿ ಹೇಳಿದರು.
ತಾಲೂಕಿನ ಬಂಕಾಪೂರ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕರ ವಿಕಾಸ ವೇದಿಕೆ ಬಂಕಾಪೂರ ಘಟಕದ ವತಿಯಿಂದ ಡಾ.ಬಾಬಾಸಾಹೇಬ ಅಂಬೇಡ್ಕರರ ಜಯಂತಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ ಸವಣೂರ ಹಾಗೂ ಲತಾ ರವಿರಾಜ್ ಸಂಶಿ ದಂಪತಿಗಳು ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಾಬಾಸಾಹೇಬ ಅಂಬೇಡ್ಕರ್ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭವಿಷ್ಯದ ಭಾರತಕ್ಕೆ ಬಾಬಾಸಾಹೇಬರ ಅನುಯಾಯಿಗಳನ್ನು ಕೊಡಮಾಡುವ ಮೂಲಕ ತಾಯಿ ಭಾರತಾಂಬೆಯ ಋಣ ತೀರಿಸಲು ಪಣ ತೊಡಬೇಕೆಂದು ವಿನಂತಿಸಿದರು. ನಮ್ಮ ಭೀಮಜಪದಿಂದ ನಮ್ಮನ್ನು ವಿಮುಖರನ್ನಾಗಿಸುವದು ಸಾದ್ಯವಿಲ್ಲ ನಾವೆಲ್ಲ ಭೀಮಪುತ್ರರು ಮುಂದೆ ನಾವೆಲ್ಲ ನಮ್ಮ ಅಸ್ಥಿತ್ವಕ್ಕೆ ನೇ ಹೋರಾಡಬಹುದಾದಂತಹ ದಿನಗಳು ಬರಬಹುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕರ ವಿಕಾಸ ವೇದಿಕೆಯ ರಾಜ್ಯ ಉಪಾಧ್ಯಕ್ಷ ಇಮಾಮಹುಸೇನ ಆದಂಭಾಯಿ. ಮಹ್ಮದಹನೀಫ ಗುಲ್ಮಿ. ಅಕ್ಬರಸಾಬ ಢಾಣೇಬಾಗ. ಲತಾ ಸಂಶಿ.ರವಿರಾಜ ಸಂಶಿ. ಖಾಜಾಮೈನು ಮಾಲ್ದಾರ.ಕಸ್ತೂರಿ ಡಂಬಳ. ಲಕ್ಷ್ಟೀ ಗುಡಿಸಾಗರ. ಬಾನೂಬಿ ಕರ್ಜಗಿ. ರಾಜು ಕೋತಂಬರಿ. ಅಬ್ದುಲ್ಖಾದರ ಚೌದರಿ. ಮಹ್ಮದಹಾಶಮ ಖುತಬುದ್ದೀನ. ಖಾಜಾಮೋದಿನ ಢಾಣೇಬಾಗ. ಕೋಟೆಪ್ಪ ಹಾಲಣ್ಣವರ. ಮಹ್ಮದಗೌಸ ಢಾಣೇಬಾಗ ಸೇರಿದಂತೆ ಹಲವಾರು ಕಾರ್ಯಕರ್ತರು ಪದಾಧಿಕಾರಿಗಳು ನೂರಾರು ಜನ ಭೀಮಬಂದುಗಳು ಉಪಸ್ಥಿತರಿದ್ದರು.