ಜಮಖಂಡಿ

ತಾಲೂಕಿನ ಕುಂಬಾರಹಳ್ಳ ಪ್ರೌಢ ಶಾಲೆಯಲ್ಲಿ ವ್ಯಸನಮುಕ್ತ ದಿನಾಚರಣೆ

ತಾಲೂಕಿನ ಕುಂಬಾರಹಳ್ಳ ಪ್ರೌಢ ಶಾಲೆಯಲ್ಲಿ ವ್ಯಸನಮುಕ್ತ ದಿನಾಚರಣೆ

ಜಮಖಂಡಿ 10:  ಸ್ವಸ್ಥ ಸಮಾಜದ ಸಹಕಾರ ಮೂರ್ತಿ, ಚಿತ್ತರಗಿಯ ಜ್ಯೋತಿ ಮಹಾಂತ ಶಿವಯೋಗಿಗಳು ದುಶ್ಚಟಗಳ ವಿರುದ್ಧ ಸಮರ ಸಾರಿದರು. ಮೂಢನಂಬಿಕೆಗಳನ್ನು ಹೋಗಲಾಡಿಸಿ. ನಾಗರ ಪಂಚಮಿಯನ್ನು ಬಸವಪಂಚಮಿಯಾಗಿ ಆಚರಿಸಿದರು ಎಂದು ಸಂಪನ್ಮೂಲ ಶಿಕ್ಷಕ ಸಂಗನಬಸವ ಉಟಗಿ ಹೇಳಿದರು. 

ತಾಲೂಕಿನ ಕುಂಬಾರಹಳ್ಳ ಪ್ರೌಢ ಶಾಲೆಯಲ್ಲಿ ನಡೆದ ವ್ಯಸನಮುಕ್ತ ದಿನದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನೇರನಿಷ್ಠುರ ಸ್ವಭಾವದವರಾಗಿದ್ದರು. ಯಾವುದೇ ಬೆದರಿಕೆಗಳಿಗೆ ಹೆದರದೇ ಸಮಾಜದ ಸೇವೆಯೊಂದನ್ನೇ ಗುರಿಯಾಗಿಟ್ಟುಕೊಂಡು ಹಗಲಿರುಳು ಶ್ರಮಿಸಿದರು. ಯುವಜನರು ದುಶ್ಚಟದಿಂದ ದೂರ ಇರಬೇಕು. ಜಾತಿ ಮತಗಳನ್ನು ಮೀರಿ ಬಾಳಬೇಕು ಎಂದು ಸಲಹೆ ನೀಡಿದರು. 

ಮುಖ್ಯೋಪಾಧ್ಯಾಯ ನಾರಾಯಣ ಶಾಸ್ತ್ರಿ ಅಧ್ಯಕ್ಷತೆ ವಹಿಸಿಮಾತನಾಡಿ, ವಿಜಯ ಮಹಾಂತ ಸ್ವಾಮಿಗಳು ಜೋಳಿಗೆಯ ಮೂಲಕ ಸಮಾಜದ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿದ ಯೋಗಿಗಳಾಗಿದ್ದು , ಅವರು ಸಾಮಾಜಿಕ ಕಳಕಳಿಯನ್ನು ಹೊಂದಿದರು. ನಾವೆಲ್ಲರೂ ದುಶ್ಚಟಗಳನ್ನು ಬಿಡುತ್ತೇವೆಂದು ಪ್ರತಿಜ್ಞೆಗೈದರೆ ಮಾತ್ರ ಮಹಾಂತರ ಆತ್ಮಕ್ಕೆ ನಿಜವಾದ ಶಾಂತಿಯನ್ನು ದೊರೈಯಲು ಸಾಧ್ಯ ಎಂದರು. 

ಪ್ರಾಸ್ತಾವಿಕವಾಗಿ ಶಾರದಾ ಮಠ ಮಾತನಾಡಿ, ವಿಜಯ ಮಹಾಂತೇಶ ಮಹಾಸ್ವಾಮಿಗಳ ಜೀವನಗಾಥೆಯನ್ನು, ವ್ಯಸನಮುಕ್ತ ದಿನಾಚರಣೆಯ ಮಹತ್ವವನ್ನು ತಿಳಿಸಿಕೊಟ್ಟರು. ಭಾರತ ವಿಶ್ವ ಗುರುವಾಗಬೇಕಾದರೆ ನಾವೆಲ್ಲರೂ ನಿಸ್ವಾರ್ಥ ಸೇವೆಯನ್ನು ಮಾಡಬೇಕು ಎಂದರು. 

ದೈಹಿಕ ಶಿಕ್ಷಕ ಬಾಹುಬಲಿ ಮುತ್ತೂರ ಪ್ರತಿಜ್ಞಾವಿಧಿ ಬೋಧಿಸಿದರು, ಕಲಾವತಿ ಪೂಜಾರಿ, ಮಹೇಶ್ವರಿ  ಜೊಂಗನವರ ವಿದ್ಯಾರ್ಥಿನಿಯರು ವ್ಯಸನ ಮುಕ್ತ ದಿನಾಚರಣೆಯ ಕುರಿತು ಮಾತನಾಡಿದರು. ಶಿಕ್ಷಕರಾದ ಸಂಜೀವ ಝಂಬುರೆ, ಸವಿತಾ ಬೆನಕಟ್ಟಿ, ಎ.ಎಂ.ಮೋಮಿನ್‌. ಶಕುಂತಲಾ ಬಿರಾದಾರ ,ಸಿ.ಟಿ.ಇ.ಜಮಖಂಡಿಯ ಪ್ರಶಿಕ್ಷಣಾರ್ಥಿಗಳಾದ ಮಹಾದೇವಿ ಜಾಲಿಹಾಳ, ಸವಿತಾ ನ್ಯಾಮಗೌಡ, ವಾಣಿಶ್ರೀ ಬಿರಾದಾರ ಪಾಟೀಲ, ಅಕ್ಷತಾ ಕೊಡ್ಯಾಳ ಇದ್ದರು 


ಸುದ್ದಿ ಓದಿ