ರಾಷ್ಟ್ರೀಯ

ಮಲೇರಿಯಾ : ನಟಿ ಕೃತಿ ಕರಬಂಧ ಚೇತರಿಕೆ

ಮಲೇರಿಯಾ : ನಟಿ ಕೃತಿ ಕರಬಂಧ ಚೇತರಿಕೆ

ಮುಂಬೈ, ನವೆಂಬರ್ 07: ನಟಿ ಕೃತಿ ಕರಬಂಧ ಮಲೆರಿಯಾ ಜ್ವರದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಸತತ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ, ಹಾಗೂ ಇತ್ತೀಚೆಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಕೃತಿ ಕರಬಂಧಗೆ ಜ್ವರ ಕಾಣಿಸಿಕೊಂಡಿತ್ತು. ಪರೀಕ್ಷೆ ಮಾಡಿಸಿದಾಗ ಮಲೇರಿಯಾ ಇರುವುದು ಗೊತ್ತಾಗಿದೆ

ಕೃತಿ ಕರಬಂಧಾ ತಮ್ಮ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, 'ಇದು ನನ್ನ ಮಲೆರಿಯಾ ಪೀಡಿತ ಮುಖ' ಎಂದು ತಮ್ಮನ್ನು ತಾವು ತಮಾಷೆ ಮಾಡಿಕೊಂಡಿದ್ದಾರೆ. ಚಿತ್ರ ನೋಡಿದ ನೆಟ್ಟಿಗರು ನಿಮ್ಮ ಮುಖ ಸಾಕಷ್ಟು ಬದಲಾಗಿದೆ ಎನ್ನುತ್ತಿದ್ದಾರೆ.

“ಇಂದು ನಾನು ಸಾಕಷ್ಟು ಚೇತರಿಕೆಯಿಂದಿದ್ದೇನೆ. ನಾಳೆ ಇನ್ನಷ್ಟು ಚೇತರಿಸಿಕೊಳ್ಳಲಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ದಿನೇದಿನೆ ನಾನು ಚೇತರಿಸಿಕೊಳ್ಳುತ್ತಿದ್ದೇನೆ”  ಎಂದು ಕೃತಿ ಕರಬಂಧ ಹೇಳಿಕೊಂಡಿದ್ದಾರೆ.  

ಸುದ್ದಿ ಓದಿ