ಜಾಕ್ವೆಲಿನ್ ಫರ್ನಾಂಡಿಸ್ ವಿದೇಶಿ ಪ್ರವಾಸಕ್ಕೆ ತಡೆ; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ
ಮುಂಬೈ, ಡಿ 6: ಭಾನುವಾರ ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಿದೇಶಕ್ಕೆ ತೆರಳದಂತೆ ತಡೆಹಿಡಿಯಲಾಗಿದೆ. ಜಾಕ್ವೆಲಿನ್, ಸಲ್ಮಾನ್ ಖಾನ್ ಅವರ 'ದಿ-ಬ್ಯಾಂಗ್' ಪ್ರವಾಸಕ್ಕಾಗಿ ರಿಯಾದ್ಗೆ ಹೋಗುತ್ತಿದ್ದರು. 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಸುಕೇಶ್ ಚಂದ್ರಶೇಖರ್ ಅವರಿಗೆ ಸಂಬಂಧಿಸಿದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಜಾಕ್ವೆಲಿನ್ ಅವರ ವಿದೇಶಿ ಪ್ರವಾಸವನ್ನು ತಡೆಹಿಡಿಯಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಜಾಕ್ವೆಲಿನ್ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದೆ. ಈ ಪ್ರಕರಣದಲ್ಲಿ ನಟಿ ನೋರಾ ಫತೇಹಿ ಅವರನ್ನೂ ಸಹ ಇಡಿ ವಿಚಾರಣೆಗೊಳಪಡಿಸಿದೆ.
ಸುಕೇಶ್ ಚಂದ್ರಶೇಖರ್ ಪರವಾಗಿ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ಜಾಕ್ವೆಲಿನ್ ಪ್ರಮುಖ ಸಾಕ್ಷಿಯಾಗಿದ್ದಾರೆ. ಸದ್ಯ ಸುಖೇಶ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದು ಅವರೊಂದಿಗೆ ಜಾಕ್ವೆಲಿನ್ ಸಂಪರ್ಕ ಹೊಂದಿದ್ದರೆಂಬ ಆರೋಪ ಎದುರಿಸುತ್ತಿದ್ದಾರೆ. ಈ ವೇಳೆ ಸುಕೇಶ್ ಜಾಕ್ವೆಲಿನ್ ಗೆ ಹಲವು ದುಬಾರಿ ಉಡುಗೊರೆಗಳನ್ನು ಪಡೆದುಕೊಂಡಿದ್ದು, ಅದರಲ್ಲಿ 9 ಲಕ್ಷ ರೂಪಾಯಿ ಮೌಲ್ಯದ ಬೆಕ್ಕು ಕೂಡ ಇದೆ.
ಜಾಕ್ವೆಲಿನ್ಗೆ 52 ಲಕ್ಷ ರೂಪಾಯಿಯ ಕುದುರೆ ಮತ್ತು ನಾಲ್ಕು ಪರ್ಷಿಯನ್ ಬೆಕ್ಕುಗಳನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ಸುಕೇಶ್ ಚಂದ್ರಶೇಖರ್ ವಿಚಾರಣೆಯ ವೇಳೆ ಬಹಿರಂಗಪಡಿಸಿದ್ದಾರೆ. ಇವುಗಳಲ್ಲಿ ಬೆಕ್ಕಿನ ಬೆಲೆ 9 ಲಕ್ಷ ರೂಪಾಯಿ. ಜಾಕ್ವೆಲಿನ್ ಮತ್ತು ಸುಕೇಶ್ ಅವರ ನಿಕಟತೆಯನ್ನು ಸಾಬೀತುಪಡಿಸುವ ಫೋಟೋಗಳು ಸೇರಿದಂತೆ ಹಲವು ಪುರಾವೆಗಳನ್ನು ಇಡಿ ಪತ್ತೆ ಮಾಡಿದೆ. ಜಾಕ್ವೆಲಿನ್ ಅವರನ್ನು ಆಗಸ್ಟ್ನಲ್ಲಿ ಇಡಿ ವಿಚಾರಣೆ ನಡೆಸಿತ್ತು. ಈ ಪ್ರಕರಣದಲ್ಲಿ ಸುಖೇಶ್ ಚಂದ್ರಶೇಖರ್, ಅವರ ಪತ್ನಿ ಲೀನಾ ಮರಿಯಾ ಪೌಲ್ ಸೇರಿ 6 ಜನರ ವಿರುದ್ಧ 7 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಸುಕೇಶ್ ಚಂದ್ರಶೇಖರ್ ವಂಚನೆಯ ಮಾಸ್ಟರ್ ಮೈಂಡ್
ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗದಲ್ಲಿ ಸುಕೇಶ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸುಕೇಶ್ ಚಂದ್ರಶೇಖರ್ ಈ ವಂಚನೆಯ ಮಾಸ್ಟರ್ ಮೈಂಡ್ ಎಂದು ದಾಳಿಯ ನಂತರ ಇಡಿ ಹೇಳಿತ್ತು. 17ನೇ ವಯಸ್ಸಿನಿಂದಲೂ ಅಪರಾಧ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಸುಕೇಶ್, ಆಗಸ್ಟ್ 24 ರಂದು ಚೆನ್ನೈನಲ್ಲಿರುವ ಬಂಗಲೆಯನ್ನು ಇಡಿ ವಶಪಡಿಸಿಕೊಂಡಿತ್ತು. ಬಂಗಲೆಯಿಂದ 82.5 ಲಕ್ಷ ರೂಪಾಯಿ, 2 ಕೆಜಿ ಚಿನ್ನ ಹಾಗೂ 12ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಸೀಜ್ ಮಾಡಿದೆ.