ಮನರಂಜನೆ

ಕಂಗನಾ ವಿವಾದಾತ್ಮಕ ಹೇಳಿಕೆಗೆ ಪ್ರಮುಖ ನಟನ ಬೆಂಬಲ

ಕಂಗನಾ  ವಿವಾದಾತ್ಮಕ ಹೇಳಿಕೆಗೆ  ಪ್ರಮುಖ  ನಟನ  ಬೆಂಬಲ

ಮುಂಬೈ, ನ 15: ಮರಾಠಿ   ಪ್ರಮುಖ   ನಟ ವಿಕ್ರಮ್ ಗೋಖಲೆ   ಬಾಲಿವುಡ್  ನಟಿ ಕಂಗನಾ ರಣಾವತ್  ಅವರ ವಿವಾದಾತ್ಮಕ ಹೇಳಿಕೆಯನ್ನು  ಬೆಂಬಲಿಸಿದ್ದಾರೆ.  ಮಹಾರಾಷ್ಟ್ರದ ಪುಣೆಯಲ್ಲಿ ಭಾನುವಾರ ನಡೆದ  ಕಾರ್ಯಕ್ರಮವೊಂದರಲ್ಲಿ  ಮಾತನಾಡಿದ  ಗೋಖಲೆ,  ಕಂಗನಾ ಹೇಳಿದ್ದು ಸತ್ಯ  ಎಂದು ಹೇಳಿದ್ದಾರೆ.  1947ರಲ್ಲಿ ಭಾರತ ದೇಶಕ್ಕೆ  ಬಂದಿದ್ದು  ಭಿಕ್ಷೆ,   2014 ರಲ್ಲಿ ನರೇಂದ್ರ ಮೋದಿ   ದೇಶದ ಪ್ರಧಾನಿ ಮಂತ್ರಿಯಾದ ನಂತರ  ನಿಜವಾದ ಸ್ವಾತಂತ್ರ್ಯ ಬಂದಿದೆ ಎಂದು  ಎಂದು ಕಂಗನಾ ಹೇಳಿದ್ದರು.

"ಕಂಗನಾ ರಣಾವತ್ ಅವರ ಹೇಳಿಕೆಯನ್ನು  ನಾನು ಒಪ್ಪುತ್ತೇನೆ.   ಬ್ರಿಟೀಷರು ನಮಗೆ ಸ್ವಾತಂತ್ರ್ಯ  ನೀಡಿದರು. ಆದರೆ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದಾಗ (ಬ್ರಿಟಿಷರ ಆಳ್ವಿಕೆಯಲ್ಲಿ) ಬಹಳಷ್ಟು  ಮಂದಿ    ಮೂಕ ಪ್ರೇಕ್ಷಕರಾಗಿದ್ದರು.  ಈ ಮೂಕ  ಪ್ರೇಕ್ಷಕರಲ್ಲಿ  ಅನೇಕರು  ಹಿರಿಯ ನಾಯಕರಾಗಿದ್ದರು.  ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ರಕ್ಷಿಸಲಿಲ್ಲ.  " ಎಂದು ಗೋಖಲೆ ಹೇಳಿದ್ದಾರೆ.    ಮರಾಠಿ  ರಂಗಭೂಮಿ, ಬಾಲಿವುಡ್,  ದೂರದರ್ಶನದಲ್ಲಿ ತಮ್ಮ ಪಾತ್ರಗಳ ಮೂಲಕ ಗೋಖಲೆ  ಹೆಸರುವಾಸಿಯಾಗಿದ್ದಾರೆ.

ಬಿಜೆಪಿ ಸೇರಿದಂತೆ  ಪ್ರತಿಯೊಂದು  ರಾಜಕೀಯ ಪಕ್ಷವೂ    ವಿವಾದದಿಂದ ಲಾಭ ಪಡೆಯಲು ಯತ್ನಿಸುತ್ತವೆ ಎಂದು ಗೋಖಲೆ ಅಭಿಪ್ರಾಯಪಟ್ಟಿದ್ದಾರೆ. ತ್ರಿಪುರಾದಲ್ಲಿ ನಡೆದ  ಧಾರ್ಮಿಕ ಹಿಂಸಾಚಾರ,  ಮಹಾರಾಷ್ಟ್ರದ ಅಮರಾವತಿ  ಹಾಗೂ   ಇತರ ನಗರಗಳಲ್ಲಿ ನಡೆದ  ಕಲ್ಲು ತೂರಾಟದ ಘಟನೆಗಳ   ಬಗ್ಗೆ  ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಗೋಖಲೆ    ಕೋಮು ಹಿಂಸಾಚಾರಗಳು  ವೋಟ್ ಬ್ಯಾಂಕ್ ರಾಜಕಾರಣದ  ಫಲಶೃತಿಯಾಗಿದೆ   ಪ್ರತಿ ರಾಜಕೀಯ ಪಕ್ಷ  ವೋಟ್‌ ಬ್ಯಾಂಕ್‌  ರಾಜಕೀಯ  ನಡೆಸುತ್ತಿದೆ   ಎಂದು ಗೋಖಲೆ ಹೇಳಿದರು.

ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿ  ಬಗ್ಗೆ  ಮಾತನಾಡಿದ ಗೋಖಲೆ,  ದೇಶದ ಅಭಿವೃದ್ಧಿಗಾಗಿ ಮಾಜಿ ಮಿತ್ರ  ಪಕ್ಷಗಳಾದ ಶಿವಸೇನೆ,  ಬಿಜೆಪಿ ಮತ್ತೆ ಒಂದಾಗಬೇಕು. ಎಂದರು  'ಬಿಜೆಪಿ ಮತ್ತು ಶಿವಸೇನೆ ಮತ್ತೆ ಒಂದಾಗಬೇಕು. ಸಿಎಂ ಹುದ್ದೆಯನ್ನು ಸಮಾನವಾಗಿ ಹಂಚಿಕೊಳ್ಳುವ ಷರತ್ತಿನ ಮೇಲೆ ಎರಡು ಪಕ್ಷಗಳ ನಡುವೆ ಮೈತ್ರಿ ಸಾಧ್ಯವೇ ಎಂದು   ನಾನು (ವಿರೋಧ ಪಕ್ಷದ ನಾಯಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ) ದೇವೇಂದ್ರ ಫಡ್ನವೀಸ್ ಅವರು  ಪ್ರಶ್ನಿಸುತ್ತೇನೆ ಎಂದರು. ರಾಜಕೀಯ ಪಕ್ಷಗಳು ಜನರಿಗೆ ಮೋಸ ಮಾಡಬಾರದು   ಜನರ ವಿಶ್ವಾಸ ಗಳಿಸಲು..   ಎರಡೂ ಪಕ್ಷಗಳು ಪ್ರಯತ್ನಿಸಬೇಕು. ಏಕೆಂದರೆ ಜನರು ಅವರನ್ನು ಶಿಕ್ಷಿಸಬಹುದು ಎಂದು ವಿಕ್ರಮ್ ಗೋಖಲೆ ಹೇಳಿದ್ದಾರೆ. 


ಸುದ್ದಿ ಓದಿ