ನಟ ವಿಜಯಕಾಂತ್ ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ
ಚೆನ್ನೈ, ಅ 07: ಆಸ್ಪತ್ರೆಗೆ ದಾಖಲಾಗಿರುವ ಡಿಎಂಡಿಕೆ ಸ್ಥಾಪಕ, ನಟ ಮತ್ತು ರಾಜಕಾರಣಿ ವಿಜಯಕಾಂತ್ ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ನಂತರ ಅನುಸರಣಾ ಪರೀಕ್ಷೆಗಾಗಿ ಮಂಗಳವಾರ ರಾತ್ರಿ ದಾಖಲಾಗಿರುವ ನಟ ವಿಜಯಕಾಂತ್ ವಿಕಿರಣ ಪರೀಕ್ಷೆಗೆ ಒಳಗಾಗಿದ್ದು, ಶೀಘ್ರದಲ್ಲೇ ಮನೆಗೆ ಮರಳಲಿದ್ದಾರೆ ಎಂದು ಎಮ್ ಐಒಟಿ ಇಂಟರ್ ನ್ಯಾಷನಲ್ ಆಸ್ಪತ್ರೆ ಹೊರಡಿಸಿದ ವೈದ್ಯಕೀಯ ನವೀಕರಣದ ಮಾಹಿತಿ ನೀಡಿದೆ.
ಕಳೆದ ವಾರ ಕೋವಿಡ್ ಸೋಂಕು ಧನಾತ್ಮಕವಾದ ಕಾರಣ ವಿಜಯಕಾಂತ್ ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು
ನಂತರ ಅವರ ಪತ್ನಿ ಮತ್ತು ಡಿಎಂಡಿಕೆ ಖಜಾಂಚಿ ಪ್ರೇಮಲತಾ ಅವರಲ್ಲಿಯೂ ಸೋಂಕು ದೃಢಪಟ್ಟಿದ್ದರಿಂದ ಅವರೂ ಕೂಡ
ದಾಖಲಾಗಿದ್ದರು. ಚೇತರಿಸಿಕೊಂಡ ನಂತರ ಇಬ್ಬರನ್ನೂ ಬಿಡುಗಡೆ ಮಾಡಲಾಗಿತ್ತು.
ಆದಾಗ್ಯೂ ಫಾಲೋ ಅಪ್ ಪರೀಕ್ಷೆಗಾಗಿ ಮಂಗಳವಾರ ರಾತ್ರಿ ನಟ ವಿಜಯಕಾಂತ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರ.ೆ