ಮನರಂಜನೆ

ಸೈನಾ ನೆಹ್ವಾಲ್ ಬಳಿ ಕ್ಷಮೆಯಾಚಿಸಿದ ನಟ ಸಿದ್ಧಾರ್ಥ್

ಸೈನಾ ನೆಹ್ವಾಲ್ ಬಳಿ ಕ್ಷಮೆಯಾಚಿಸಿದ ನಟ ಸಿದ್ಧಾರ್ಥ್

ಹೈದರಾಬಾದ್: ಜನೆವರಿ 12 ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಳಿ ನಟ ಸಿದ್ಧಾರ್ಥ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ ಕ್ಷಮೆಯಾಚನೆಯ ಪತ್ರದಲ್ಲಿ ಸಿದ್ಧಾರ್ಥ್ ಬರೆದಿದ್ದಾರೆ, “ಪ್ರಿಯ ಸೈನಾ, ಕೆಲವು ದಿನಗಳ ಹಿಂದೆ ನಿಮ್ಮ ಟ್ವೀಟ್‍ಗೆ ಸ್ವಲ್ಪ ಖಾರವಾಗಿ ಪ್ರತಿಕ್ರಿಯಿಸಿರುವುದಕ್ಕೆ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನನಗೆ ನಿಮ್ಮ ಮೇಲೆ ಅನೇಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇರಬಹುದು. ಆದರೆ ನಿಮ್ಮ ಟ್ವೀಟ್ ಓದಿದಾಗ ನನ್ನ ನಿರಾಶೆ ಅಥವಾ ಕೋಪವು ನನ್ನ ಮಾತು ಮತ್ತು ಸ್ವರಗಳಲ್ಲಿ ಸಮರ್ಥಿಸಲು ಸಾಧ್ಯವಿಲ್ಲ. ನನ್ನಲ್ಲಿ ಅದಕ್ಕಿಂತ ಬೇರೆ ಕಾರ್ಯಗಳಿವೆ ಎಂದು ನನಗೆ ತಿಳಿದಿದೆ. ಜೋಕಿನ ಬಗ್ಗೆ ಒಂದು ಜೋಕ್ ಅನ್ನು ವಿವರಿಸಬೇಕಾದರೆ ಅದು ತುಂಬಾ ಒಳ್ಳೆಯ ಜೋಕ್ ಆಗಿರಲಿಲ್ಲ. ಆ ಜೋಕಿನ ಬಗ್ಗೆ ಕ್ಷಮೆ ಇರಲಿ ಎಂದು ಹೇಳಿದ್ದಾರೆ.

“ಆದಾಗ್ಯೂ, ನನ್ನ ಹಾಸ್ಯಕ್ಕೆ ಅನೇಕ ಜನರು ನನ್ನ ದೂರಿದ್ದು, ಇದರಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ. ನಾನು ಸ್ತ್ರೀವಾದಿ ಮತ್ತು ನನ್ನ ಟ್ವೀಟ್‍ನಲ್ಲಿ ಯಾವುದೇ ಲಿಂಗ ಭೇದವಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಮಹಿಳೆ ದಾಳಿ ಮಾಡುವ ಉದ್ದೇಶವಿರಲಿಲ್ಲ. ನೀವು ನನ್ನ ಪತ್ರವನ್ನು ಸ್ವೀಕರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಯಾವಾಗಲೂ ನನ್ನ ಚಾಂಪಿಯನ್ ಆಗಿರುತ್ತೀರಿ, ಪ್ರಾಮಾಣಿಕವಾಗಿ, ಸಿದ್ಧಾರ್ಥ್ ಎಂದು ಟ್ವೀಟ್‍ನಲ್ಲಿ ಹೇಳಿದ್ದಾರೆ.

ಸೈನಾ ನೆಹ್ವಾಲ್ ಭದ್ರತೆ ವಿಚಾರದಲ್ಲಿ ನರೇಂದ್ರ ಮೋದಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಸಿದ್ಧಾರ್ಥ್ ಪ್ರತಿಯಾಗಿ ಟ್ವೀಟ್ ಮಾಡಿ ನೆಟ್ಟಿಗರ ಕಣ್ಣಿಗೆ ಗುರಿಯಾಗಿದ್ದರು.

ಸುದ್ದಿ ಓದಿ